Bengaluru: ಕೆ.ಆರ್.ಮಾರ್ಕೆಟ್ ಫ್ಲೈಓವರ್‌ನಿಂದ ಹಣ ಎಸೆದಿದ್ದವ ಕೋವಿಡ್ ಸಂದರ್ಭದಲ್ಲಿ ಭಿಕ್ಷೆ ಬೇಡಿದ್ದನಂತೆ
ಕೆ.ಆರ್.ಮಾರ್ಕೆಟ್ ಫ್ಲೈಓವರ್‌ನಿಂದ ನೋಟುಗಳನ್ನು ಎಸೆದಿದ್ದ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಮಾಲೀಕ ಅರುಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೇ ವ್ಯಕ್ತಿ ಕೋವಿಡ್ ಸಂದರ್ಭದಲ್ಲಿ ಮಾರ್ಕೆಟ್ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡಿದ್ದರಂತೆ.
ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್‌ನಿಂದ ಸುಮಾರು 4,000 ರೂಪಾಯಿಗಳನ್ನು ಎಸೆದು ಸಂಚಲನ ಮೂಡಿಸಿದ್ದ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಮಾಲೀಕ ಅರುಣ್, ಈ ಹಿಂದೆ ‘ನಾನು ಭಿಕ್ಷುಕ ಉದ್ಯಮಿ’ ಸೇರಿದಂತೆ ವಿವಿಧ ರೀತಿಯ ಸಾಹಸಗಳನ್ನು ಮಾಡಿದ್ದರಂತೆ. 2020 ರಲ್ಲಿ ಕೋವಿಡ್ ಸಮಯದಲ್ಲಿ ಅವರು ಸಿಟಿ ಮಾರ್ಕೆಟ್ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡಿದರಂತೆ. ಕೋವಿಡ್ ಬಿಕ್ಕಟ್ಟಿನಿಂದ ನಷ್ಟವನ್ನು ಅನುಭವಿಸುತ್ತಿರುವ ಉದ್ಯಮಿ ಮತ್ತು ತನ್ನ ವ್ಯಾಪಾರವನ್ನು ಮರುಪ್ರಾರಂಭಿಸಲು 10,000 ರೂ. ಸಂಗ್ರಹಿಸಲು ಭಿಕ್ಷೆ ಬೇಡಿದ್ದರಂತೆ.
“ನಾನು ಭಿಕ್ಷುಕ ಉದ್ಯಮಿ” ಅಭಿಯಾನವನ್ನು 2020 ರಲ್ಲಿ ಕೋವಿಡ್ ಸಮಯದಲ್ಲಿ ಮಾಡಬೇಕಾಯಿತು” ಎಂದು ಸ್ವತಃ ಅರುಣ್ ಹೇಳಿದ್ದಾರೆ. ಇದೇ ವೇಳೆ ಜನರಿಗೆ ಒಳ್ಳೆಯದನ್ನು ಮಾಡುವುದು ಅವರ ಉದ್ದೇಶವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ನನಗೆ ಅವಕಾಶ ಸಿಕ್ಕರೆ ಮಾತ್ರ ನಾನು ಇತರರಿಗೆ ಸಹಾಯ ಮಾಡಬಹುದು. ಒಟ್ಟಿಗೆ ಬೆಳೆಯುವುದು ನನ್ನ ಪರಿಕಲ್ಪನೆ. ನಾನು ಒಬ್ಬಂಟಿಯಾಗಿ ಬೆಳೆಯದೆ ನನ್ನೊಂದಿಗೆ ಇರುವವರ ಜೊತೆಯಲ್ಲಿ ಬೆಳೆಯಬೇಕು ಎಂಬುದು ನನ್ನ ಉದ್ದೇಶ’ ಎಂದು ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಮೂಲಕ ಹತ್ತಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಅರುಣ್ ಹೇಳಿದ್ದಾರೆ.
ಇದನ್ನೂ ಓದಿ: KR Market: ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲಿಂದ ಹಣದ ಮಳೆ, ವಿಡಿಯೋ ವೈರಲ್
ನಾನು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ನನ್ನನ್ನು ಮಾರುಕಟ್ಟೆ ಮಾಡಿಕೊಳ್ಳಬಹುದು. ನೂರಾರು ಜನರನ್ನು ಒಟ್ಟುಗೂಡಿಸಿ ಭಾಷಣ ಮಾಡುವ ಮೂಲಕ ನನ್ನನ್ನು ಮಾರುಕಟ್ಟೆಗೆ ತರಲು ಸಾಧ್ಯವಿಲ್ಲ. ಹೀಗಾಗಿ ನಾನು ಆನ್‌ಲೈನ್‌ನಲ್ಲಿ ನನ್ನನ್ನು ಮಾರ್ಕೆಟ್ ಮಾಡಿದರೆ ನನ್ನ ಉದ್ದೇಶವನ್ನು ಜನರಿಗೆ ಹೇಳಬಹುದು. ನಾನು ಈಗ ಜನರ ಗಮನ ಸೆಳೆದಿದ್ದೇನೆ ಮತ್ತು ಕೆಲವೇ ದಿನಗಳಲ್ಲಿ ನನ್ನ ಉದ್ದೇಶವನ್ನು ಅವರಿಗೆ ಹೇಳುತ್ತೇನೆ ಎಂದು ಅರುಣ್ ಹೇಳಿದ್ದಾರೆ.
ಇನ್ನು ಅರುಣ್ ಬಗ್ಗೆ ಮಾತನಾಡಿದ ಸಹೋದ್ಯೋಗಿಯೊಬ್ಬರು, ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕರು ಅಸ್ಥಿರ ವ್ಯಕ್ತಿಯಲ್ಲ ಎಂದಿದ್ದಾರೆ. ಉದ್ಯಮದಲ್ಲಿ ಯಶಸ್ವಿಯಾಗಲು ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಅವರು ನಿಜವಾಗಿಯೂ ಒಳ್ಳೆಯ ಉದ್ದೇಶಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ ಎಂದಿದ್ದಾರೆ.
ತನ್ನನ್ನು ನಿರೂಪಕ ಅರುಣ್ ಮತ್ತು ಎಂಸಿ ಅಥವಾ ವಿಜೆ ವಿ.ಅರುಣ್ ಎಂದು ಕರೆದುಕೊಳ್ಳುವ 30 ವರ್ಷದ ಅರುಣ್ ವಿ ಪಶ್ಚಿಮ ಬೆಂಗಳೂರಿನಲ್ಲಿ ‘ವಿ ಡಾಟ್ 9 ಈವೆಂಟ್ಸ್’ ಎಂಬ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಆರಂಭಿಸಿದ್ದಾರೆ. ಆಂಕರ್ ಅರುಣ್ ಫೌಂಡೇಶನ್ ಎಂಬ ಫೌಂಡೇಶನ್ ಅನ್ನು ನಡೆಸುತ್ತಿದ್ದಾರೆ. ಇದು ಅನಾಥಾಶ್ರಮಗಳು ವೃದ್ಧಾಶ್ರಮಗಳು ಮತ್ತು ವಿಕಲಚೇತನರಿಗೆ ಸೌಲಭ್ಯಗಳನ್ನು ಒದಗಿಸುವಂತಹ ಲೋಕೋಪಕಾರಿ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಇದನ್ನೂ ಓದಿ: Crazy act at KR Market: ಫ್ಲೈಓವರ್ ಮೇಲಿಂದ ಹಣ ಎಸೆದ ಅರುಣ್ ಯಾಕೆ ಹಾಗೆ ಮಾಡಿದ್ದು ಅಂತ ಮಾತ್ರ ಬಾಯಿ ಬಿಡುತ್ತಿಲ್ಲ!
ಮಾರ್ಕೆಟಿಂಗ್ ತಜ್ಞ, ಪ್ರೇರಕ ಭಾಷಣಕಾರ, ಲೈಫ್ ಕೋಚ್, ಮಾಜಿ ಕಬಡ್ಡಿ ಆಟಗಾರ ಮತ್ತು ಈವೆಂಟ್ ಬ್ಲಾಗರ್ ಎಂದು ಗುರುತಿಸಿಕೊಂಡಿರುವ ಅರುಣ್, ಜನವರಿ 24 ರಂದು 10 ರೂಪಾಯಿ ಮುಖಬೆಲೆಯ ನೋಟುಗಳನ್ನು ಎಸೆದಿದ್ದರು. ಸುಮಾರು 4ಸಾವಿರ ರೂಪಾಯಿ ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಣ ಎಸೆದಿದ್ದರಿಂದ ಜನರು ನೋಟುಗಳನ್ನು ತಮ್ಮ ಜೇಬಿಗೆ ಹಾಕಿಕೊಳ್ಳಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹೀಗಾಗಿ ಅರುಣ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹಲವಾರು ಮದುವೆಗಳು, ಹುಟ್ಟುಹಬ್ಬಗಳು ಮತ್ತು ಹೊಸ ವರ್ಷದ ಮುನ್ನಾದಿನದ ಪಾರ್ಟಿಗಳನ್ನು ಆಯೋಜಿಸುವಲ್ಲಿ ತೊಡಗಿಸಿಕೊಂಡಿರುವ ಅರುಣ್, ಸಿಟಿ ಮಾರ್ಕೆಟ್ ಫ್ಲೈಓವರ್‌ನಿಂದ ನೋಟುಗಳನ್ನು ಎಸೆದ ಉದ್ದೇಶದ ಬಗ್ಗೆ ಮಾತನಾಡಲು ನಿರಾಕರಿಸಿದರು. ಆದರೆ ಇದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಪಡೆಯುವ ಉದ್ದೇಶ ಎಂದು ಪೊಲೀಸರು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Fri, 27 January 23