ಬೆಂಗಳೂರು: ವಾಣಿಜ್ಯ ತೆರಿಗೆ ಅಧಿಕಾರಿ ಹೆಸರಿನಲ್ಲಿ (ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್) ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಂದ್ರಪ್ಪ ಅಲಿಯಾಸ್ ಚಂದ್ರೇಗೌಡ ಎಂಬಾತ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಸೋಗಿನಲ್ಲಿ ವಸೂಲಿ ಮಾಡುತ್ತಿದ್ದ. ರಸ್ತೆ ಬದಿಯಲ್ಲಿ ನಿಂತು ಲಾರಿಗಳಿಂದ ಸುಲಿಗೆ ಮಾಡುತ್ತಿದ್ದ. ಈ ಬಗ್ಗೆ ಸಿಸಿಬಿ ಪೊಲೀಸರಿಗರ ಮಾಹಿತಿ ತಿಳಿದುಬಂದಿತ್ತು. ನಿನ್ನೆ ಲಾರಿ ಅಡ್ಡಗಟ್ಟಿ ವಸೂಲಿ ಮಾಡುತ್ತಿದ್ದಾಗ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟಿಲ್, ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಎಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ. ಚಂದ್ರಪ್ಪ ಎಂಬ ಆರೋಪಿಯನ್ನು ಬಂಧಿಸಿದ್ದೇವೆ. ಆತ ಟ್ರಕ್ ಮಾಲೀಕರಿಂದ ಹಣ ಸುಲಿಗೆ ಮಾಡುತ್ತಿದ್ದ. ವಾಹನ ನಿಲ್ಲಿಸಿ ಹಣ ಪಡೆಯುತ್ತಿದ್ದ. ಆತನ ಬಂಧಿಸಿ ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ನಾಲ್ವರ ಬಂಧನ
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ನಾಲ್ವರನ್ನ ಕೋಲಾರ ಸೈಬರ್ ಕ್ರೈಂ ಪೊಲೀಸರು ಬಂಧಸಿದ್ದಾರೆ. ಶೇಷಗಿರಿ, ಸಂತೋಷ್ ಅಲಿಯಾಸ್ ಬ್ರೂಸ್‌ಲೀ, ಸಾಗರ್, ಅಭಿಷೇಕ್ ಅಲಿಯಾಸ್ ಚೋಟು ಬಂಧಿತ ಆರೋಪಿಗಳು. ಬಂಧಿತರು ಐಪಿಎಲ್ ಆರಂಭವಾದ ಬಳಿಕ ಆನ್ಲೈನ್ ಬೆಟ್ಟಿಂಗ್‌ನಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ
SEBI: ಸೆಬಿಯಿಂದ ಸೆ.28 ಮಹತ್ವದ ಸಭೆ; ಹೊರಬೀಳಲಿರುವ ನಿರ್ಧಾರಗಳ ಕಡೆಗೆ ಹೂಡಿಕೆದಾರರ ಕಣ್ಣು
JDS: ಹಾನಗಲ್, ಸಿಂಧಗಿ ಅಸೆಂಬ್ಲಿ ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕೆ- ಹೆಚ್.ಡಿ. ಕುಮಾರಸ್ವಾಮಿ ಘೋಷಣೆ
(CCB police have arrested a man who is Extortion in name of a commercial tax officer)
Published On - 11:29 am, Tue, 28 September 21