ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ, ನೈಜೀರಿಯಾ ಪ್ರಜೆ ಸಿಸಿಬಿ ವಶಕ್ಕೆ

| Updated By: ವಿವೇಕ ಬಿರಾದಾರ

Updated on: Oct 22, 2023 | 7:41 AM

ಆರೋಪಿ ವಿಕ್ಟರ್, ಡ್ರಗ್​​​ ಪೆಡ್ಲರ್ ಮೆಸ್ಸೋ ಎಂಬುವವನಿಂದ ​ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದನು. ಮನೆಯಲ್ಲಿ ಪ್ಯಾಕ್​​​ ಮಾಡಿ ಹಲವರಿಗೆ ಮಾರುತ್ತಿದ್ದನು. ಸದ್ಯ ಆರೋಪಿ ವಿಕ್ಟರ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ, ನೈಜೀರಿಯಾ ಪ್ರಜೆ ಸಿಸಿಬಿ ವಶಕ್ಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ಅ.22: ದೊಡ್ಡ ನಾಗಮಂಗಲದ ವೀರಭದ್ರಸ್ವಾಮಿ ಲೇಔಟ್​​​​ನ ಮನೆಯೊಂದರ ಮೇಲೆ ಸಿಸಿಬಿ (CCB) ಪೊಲೀಸರು ದಾಳಿ ಮಾಡಿದ್ದು, ಎರಡು ಕೋಟಿ ರೂ. ಮೌಲ್ಯದ ಡ್ರಗ್ಸ್ (Drug)​ ಜಪ್ತಿ ಮಾಡಿದ್ದಾರೆ. ಮನೆಯಲ್ಲಿ ಡ್ರಗ್ಸ್​ ಸಂಗ್ರಹಿಸಿದ್ದ ನೈಜೀರಿಯಾ (Nigeria) ಪ್ರಜೆ ವಿಕ್ಟರ್​ನನ್ನ ವಶಕ್ಕೆ ಪಡೆದಿದ್ದಾರೆ. ಎರಡು ಕೋಟಿ ಮೌಲ್ಯದ ಎಮ್​ಡಿಎಮ್​ಎ, ಎರಡು ಮೊಬೈಲ್, ಯಂತ್ರವನ್ನು ಜಪ್ತಿ ಮಾಡಿದ್ದಾರೆ.

ಆರೋಪಿ ವಿಕ್ಟರ್, ಡ್ರಗ್​​​ ಪೆಡ್ಲರ್ ಮೆಸ್ಸೋ ಎಂಬುವವನಿಂದ ​ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದನು. ಮನೆಯಲ್ಲಿ ಪ್ಯಾಕ್​​​ ಮಾಡಿ ಹಲವರಿಗೆ ಮಾರುತ್ತಿದ್ದನು. ಸದ್ಯ ಆರೋಪಿ ವಿಕ್ಟರ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ನಿಂತು ಡ್ರಗ್ಸ್​ ಸೇವಿಸಿದ ಯುವಕ, ವಿಡಿಯೋ ವೈರಲ್

2.50 ಲಕ್ಷ ಮೌಲ್ಯದ ಡ್ರಗ್ಸ್​​ ವಶ

ಬೆಂಗಳೂರಿನಿಂದ ಮಾದಕ ವಸ್ತು ಖರೀದಿಸಿ ಮಂಗಳೂರು ಮತ್ತು ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿ ಹಸನ್ ಸಾದಿಕ್ ಅಲಿಯಾಸ್ ಬ್ಲೇಡ್ ಸಾದಿಕ್ (35) ಬಂಧಿತ ಆರೋಪಿ. ಈತನನ್ನು ಎಸಿಪಿ ಪಿ.ಎ. ಹೆಗ್ಡೆ ನೇತೃತ್ವದ ಸಿಸಿಬಿ ಪೊಲೀಸರ ತಂಡ ಬಂಧಿಸಿತ್ತು.

ಬಂಧಿತ ಆರೋಪಿಯಿಂದ 2,50,000 ರೂ. ಮೌಲ್ಯದ 50 ಗ್ರಾಂ ಎಂಡಿಎಂಎ ಮಾದಕ ದ್ರವ್ಯ, ಮಾರುತಿ 800 ಕಾರು, ಮೊಬೈಲ್ ಫೋನ್ ಮತ್ತು ಒಟ್ಟು 3,65,500 ರೂ. ಮೌಲ್ಯದ ಡಿಜಿಟಲ್ ತೂಕದ ಮಾಪಕವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದರು. ಅಲ್ಲದೆ, ಆರೋಪಿ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಾದಕ ದ್ರವ್ಯ ದಂಧೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ