ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ನಿಂತು ಡ್ರಗ್ಸ್​ ಸೇವಿಸಿದ ಯುವಕ, ವಿಡಿಯೋ ವೈರಲ್

ಮುಂಬೈನ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ನಿಂತು ಯುವಕನೊಬ್ಬ ಡ್ರಗ್ಸ್​ ಸೇವನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕರವಸ್ತ್ರದೊಳಗೆ ಡ್ರಗ್ಸ್​ ಇಟ್ಟುಕೊಂಡು ಸೇದುವ ಮೂಲಕ ಯುವಕನೊಬ್ಬ ನಶೆಯಲ್ಲಿ ತೇಲಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆತಂಕಗೊಂಡ ಮಹಿಳೆಯೊಬ್ಬರು ಈ ವಿಷಯವನ್ನು ರೈಲ್ವೆ ಮತ್ತು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು.

ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ನಿಂತು ಡ್ರಗ್ಸ್​ ಸೇವಿಸಿದ ಯುವಕ, ವಿಡಿಯೋ ವೈರಲ್
ರೈಲು
Follow us
ನಯನಾ ರಾಜೀವ್
|

Updated on: Oct 20, 2023 | 4:25 PM

ಮುಂಬೈನ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ನಿಂತು ಯುವಕನೊಬ್ಬ ಡ್ರಗ್ಸ್​ ಸೇವನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕರವಸ್ತ್ರದೊಳಗೆ ಡ್ರಗ್ಸ್​ ಇಟ್ಟುಕೊಂಡು ಸೇದುವ ಮೂಲಕ ಯುವಕನೊಬ್ಬ ನಶೆಯಲ್ಲಿ ತೇಲಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆತಂಕಗೊಂಡ ಮಹಿಳೆಯೊಬ್ಬರು ಈ ವಿಷಯವನ್ನು ರೈಲ್ವೆ ಮತ್ತು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು.

ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಈ ಘಟನೆ ನಡೆದಿದೆ. ಬುಧವಾರ ಸಂಜೆ 4.30ರ ಸುಮಾರಿಗೆ ಮುಂಬೈ ಲೋಕಲ್ ರೈಲಿನ ಮಹಿಳಾ ಕೋಚ್‌ಗೆ ವ್ಯಕ್ತಿಯೊಬ್ಬ ಹತ್ತಿದ್ದಾನೆ.

ಗೇಟಿನ ಬಳಿ ಬಹಳ ನಿರಾತಂಕವಾಗಿ ನಿಂತು ಪ್ರಯಾಣಿಸಿ ಕೈಯಲ್ಲಿದ್ದ ಕರ್ಚೀಫ್‌ನಲ್ಲಿದ್ದ ಡ್ರಗ್ಸ್​ ಅನ್ನು ಸೇದಿದ್ದಾನೆ. ಅಷ್ಟರಲ್ಲಿ ಮಹಿಳೆಯೊಬ್ಬರು ಇದನ್ನು ಗಮನಿಸಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಮೆಟ್ರೋ ರೈಲಿನೊಳಗೆ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿಎಂಆರ್​ಸಿಎಲ್​ನಿಂದ ತಕ್ಕ ಶಾಸ್ತಿ

ಇದನ್ನು ರೈಲ್ವೆ ಪೊಲೀಸರು ಮತ್ತು ಮುಂಬೈ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆ. ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮತ್ತೊಂದೆಡೆ, ಈ ವಿಡಿಯೋ ಕ್ಲಿಪ್ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಅವರ ಗಮನಕ್ಕೆ ಬಂದಿದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ರೈಲ್ವೇ ಸಚಿವಾಲಯ, ಪೊಲೀಸ್ ಮತ್ತು ಮಹಾರಾಷ್ಟ್ರ ಸರ್ಕಾರವು ಯುವಕರು ಮಾದಕ ವ್ಯಸನ ಮತ್ತು ಮಾದಕ ದ್ರವ್ಯಗಳಿಂದ ಮುಕ್ತವಾಗಿಸುವ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ