ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದ ಗುಜರಾತ್ ವ್ಯಕ್ತಿಯ ಬಂಧನ

ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದ ಗುಜರಾತ್​ ವ್ಯಕ್ತಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಆನಂದ್ ಜಿಲ್ಲೆಯ ತಾಪುರ್ ಪಟ್ಟಣದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರ್ಮಿ ಪಬ್ಲಿಕ್ ಸ್ಕೂಲ್‌ನ ಅಧಿಕಾರಿಯಾಗಿ ಪೋಸ್ ನೀಡಿದ ಮಹೇಶ್ವರಿ ಎಂಬುವವರು ಹರ್​ ಘರ್ ತಿರಂಗಾ ಅಭಿಯಾನದ ಭಾಗ ಎಂದು ಹೇಳಿ ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಮಕ್ಕಳ ಫೋಟೋಗಳನ್ನು ರಾಷ್ಟ್ರಧ್ವಜದೊಂದಿಗೆ ಅಪ್‌ಲೋಡ್ ಮಾಡಲು ಪ್ರೋತ್ಸಾಹಿಸಿದರು.

ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದ ಗುಜರಾತ್ ವ್ಯಕ್ತಿಯ ಬಂಧನ
ATSImage Credit source: India Today
Follow us
ನಯನಾ ರಾಜೀವ್
|

Updated on: Oct 20, 2023 | 3:56 PM

ಪಾಕಿಸ್ತಾನ(Pakistan)ಕ್ಕೆ ಭಾರತೀಯ ಸೇನೆ(Indian Army)ಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದ ಗುಜರಾತ್​ ವ್ಯಕ್ತಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಆನಂದ್ ಜಿಲ್ಲೆಯ ತಾಪುರ್ ಪಟ್ಟಣದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರ್ಮಿ ಪಬ್ಲಿಕ್ ಸ್ಕೂಲ್‌ನ ಅಧಿಕಾರಿಯಾಗಿ ಪೋಸ್ ನೀಡಿದ ಮಹೇಶ್ವರಿ ಎಂಬುವವರು ಹರ್​ ಘರ್ ತಿರಂಗಾ ಅಭಿಯಾನದ ಭಾಗ ಎಂದು ಹೇಳಿ ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಮಕ್ಕಳ ಫೋಟೋಗಳನ್ನು ರಾಷ್ಟ್ರಧ್ವಜದೊಂದಿಗೆ ಅಪ್‌ಲೋಡ್ ಮಾಡಲು ಪ್ರೋತ್ಸಾಹಿಸಿದರು.

ಆರೋಪಿಗಳು ನಿರ್ದಿಷ್ಟವಾಗಿ ದೇಶಾದ್ಯಂತ ವಿವಿಧ ಸೇನಾ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ. ಆರ್ಮಿ ಪಬ್ಲಿಕ್ ಸ್ಕೂಲ್‌ನ ಅಧಿಕಾರಿ ಎಂದು ಹೇಳಿ ಮಹೇಶ್ವರಿ ನಂತರ ತನ್ನ ನಂಬರ್​ಗೆ ಸಂದೇಶಗಳನ್ನು ಕಳುಹಿಸುವಂತೆ ಕೇಳಿದ್ದಾರೆ, ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಮಕ್ಕಳ ಫೋಟೋಗಳನ್ನು ರಾಷ್ಟ್ರಧ್ವಜದೊಂದಿಗೆ ಅಪ್‌ಲೋಡ್ ಮಾಡುವಂತೆ ಕೇಳಿದ್ದರು.

ಮಿಲಿಟರಿ ಇಂಟೆಲಿಜೆನ್ಸ್‌ನ ಅಧಿಕಾರಿಗಳು ಗುಜರಾತ್‌ಗೆ ಈ ಮೊಬೈಲ್ ಸಂಖ್ಯೆ ಇರುವ ಸ್ಥಳವನ್ನು ಪತ್ತೆಹಚ್ಚಿದರು ಮತ್ತು ಆರೋಪಿಯನ್ನು ಹಿಡಿಯಲು ಎಟಿಎಸ್‌ನ ಸಹಾಯವನ್ನು ಕೋರಿದರು.

ಮಹೇಶ್ವರಿ ಅವರು ಭಾರತೀಯ ರಕ್ಷಣಾ ಸಿಬ್ಬಂದಿಗೆ ಸಂಬಂಧಿಸಿದ ಸಂಪರ್ಕ ಸಂಖ್ಯೆಗಳನ್ನು ಪಾಕಿಸ್ತಾನಿ ಏಜೆನ್ಸಿಗೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.

ಮತ್ತಷ್ಟು ಓದಿ:ಪಾಕಿಸ್ತಾನ: ಪಠಾಣ್​ಕೋಟ್​ ದಾಳಿಯ ಮಾಸ್ಟರ್​ಮೈಂಡ್​ ಶಾಹಿದ್ ಲತೀಫ್​ ಹತ್ಯೆ

ಆತನ ಬಂಧನದ ನಂತರ, ಪಾಕಿಸ್ತಾನಿ ಗುಪ್ತಚರ ಸಂಸ್ಥೆಯೊಂದಿಗೆ ಆತನ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ತನಿಖೆಗಳು ನಡೆಯುತ್ತಿವೆ. ಎಟಿಎಸ್ ಕೂಡ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಕೋರುವ ನಿರೀಕ್ಷೆ ಇದೆ. ಮಹೇಶ್ವರಿ, ಮೂಲತಃ ಪಾಕಿಸ್ತಾನಿ ಹಿಂದೂ ಆಗಿದ್ದು, 1999 ರಲ್ಲಿ ತನ್ನ ಪತ್ನಿಯೊಂದಿಗೆ ಭಾರತಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

ತಾರಾಪುರದಲ್ಲಿ ತಮ್ಮ ಅತ್ತೆಯ ಮನೆಯಲ್ಲಿ ಉಳಿದುಕೊಂಡರು ಮತ್ತು ದೀರ್ಘಾವಧಿಯ ಭಾರತೀಯ ವೀಸಾಗೆ ಅರ್ಜಿ ಸಲ್ಲಿಸಿದರು. ನಂತರ ಅವರಿಗೆ 2006 ರಲ್ಲಿ ಭಾರತೀಯ ಪೌರತ್ವವನ್ನು ನೀಡಲಾಯಿತು. ಕಳೆದ ವರ್ಷ ಮಹೇಶ್ವರಿ ಪಾಕಿಸ್ತಾನದಲ್ಲಿರುವ ತನ್ನ ಪೋಷಕರನ್ನು ಭೇಟಿ ಮಾಡಿದಾಗ, ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ