Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮೆಟ್ರೋ ರೈಲಿನೊಳಗೆ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿಎಂಆರ್​ಸಿಎಲ್​ನಿಂದ ತಕ್ಕ ಶಾಸ್ತಿ

ಮೆಟ್ರೋ ರೈಲಿನ ಹ್ಯಾಂಡಲ್‌ ಹಿಡಿದು ಬ್ಯಾಕ್‌ಫ್ಲಿಪ್ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ರೂ.500 ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳಿಸಿರುವ ಘಟನೆ ನಡೆದಿದೆ.

ಬೆಂಗಳೂರು: ಮೆಟ್ರೋ ರೈಲಿನೊಳಗೆ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿಎಂಆರ್​ಸಿಎಲ್​ನಿಂದ ತಕ್ಕ ಶಾಸ್ತಿ
ನಮ್ಮ ಮೆಟ್ರೋ
Follow us
ಆಯೇಷಾ ಬಾನು
|

Updated on:Oct 20, 2023 | 3:24 PM

ಬೆಂಗಳೂರು, ಅ.20: ನಮ್ಮ ಮೆಟ್ರೋ ರೈಲಿನೊಳಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಕೆಲವು ನಿಯಮಗಳನ್ನು ಮಾಡಿದೆ. ನಿಯಮ ಉಲ್ಲಂಘನೆ ಮಾಡಿದರೆ ದಂಡ ಕೂಡ ವಿಧಿಸುತ್ತೆ. ಅದರಂತೆ ಮೆಟ್ರೋ ರೈಲಿನ (Namma Metro)  ಹ್ಯಾಂಡಲ್‌ ಹಿಡಿದು ಬ್ಯಾಕ್‌ಫ್ಲಿಪ್ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ರೂ.500 ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳಿಸಿರುವ ಘಟನೆ ನಡೆದಿದೆ.

ವಿದ್ಯಾರ್ಥಿಯೊಬ್ಬ ಮೆಟ್ರೋ ರೈಲಿನೊಳಗೆ ಹ್ಯಾಂಡಲ್‌ ಹಿಡಿದು ಬ್ಯಾಕ್‌ಫ್ಲಿಪ್ ಸ್ಟಂಟ್ ಮಾಡಿದ್ದಾನೆ. ಇದನ್ನು ಆತನ ಸ್ನೇಹಿತ ವಿಡಿಯೋ ಮಾಡಿದ್ದಾನೆ. ವಿದ್ಯಾರ್ಥಿಗಳ ಆಟ ನೋಡಿದ ಪ್ರಯಾಣಿಕರು ಬಿಎಂಆರ್‌ಸಿಎಲ್ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಸಿಬ್ಬಂದಿ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ಮೆಟ್ರೋಯಿಂದ ಹೊರ ಹೋಗುವ ವೇಳೆ ದಂಡ ವಿಧಿಸಿ ವಾರ್ನಿಂಗ್ ಕೊಟ್ಟು ಕಳಿಸಲಾಗಿದೆ.

ಕಳೆದ ಮಂಗಳವಾರ ರಾತ್ರಿ ಸುಮಾರು 11ಗಂಟೆಗೆ ಮೂವರು ವಿದ್ಯಾರ್ಥಿಗಳು ದಾಸರಹಳ್ಳಿಯಲ್ಲಿ ಮೆಟ್ರೋ ರೈಲು ಹತ್ತಿ ಯಲಚೇನಹಳ್ಳಿಗೆ ಹೋಗುತ್ತಿದ್ದರು. ಜೆ.ಪಿ.ನಗರ ನಿಲ್ದಾಣ ದಾಟಿ ಯಲಚೇನಹಳ್ಳಿಗೆ ತೆರಳುತ್ತಿದ್ದ ವೇಳೆ ಮೆಟ್ರೋ ರೈಲಿನಲ್ಲಿ ನಿಂತು ಪ್ರಯಾಣಿಸಲು ಮಾಡಲಾಗಿರುವ ಹ್ಯಾಂಡಲ್ ಹಿಡಿದು ವಿದ್ಯಾರ್ಥಿಯೋರ್ವ ಸ್ಟಂಟ್ ಮಾಡಿದ್ದಾರೆ. ಸ್ಟಂಟ್ ವೇಳೆ ಹ್ಯಾಂಡಲ್‌ಬಾರ್‌ಗಳನ್ನು ಹಿಡಿದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇನ್ನು ವಿದ್ಯಾರ್ಥಿಗಳ ಹುಚ್ಚಾಟಕ್ಕೆ ಪ್ರಯಾಣಿಕರು ಕಿಡಿಕಾರಿದ್ದು ವಿದ್ಯಾರ್ಥಿಗಳು ಯಾವುದಕ್ಕೂ ಕೇರ್ ಮಾಡಿಲ್ಲ. ಕೊನೆಗೆ ಪ್ರಯಾಣಿಕರು ವಿಡಿಯೋ ಮಾಡಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮೂವರು ವಿದ್ಯಾರ್ಥಿಗಳು ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಫ್ರೀ ಪ್ರಯಾಣ ಹೇಗೆಂದು ತೋರಿಸಿಕೊಟ್ಟ ವಿದೇಶಿ ಯೂಟ್ಯೂಬರ್ ವಿಡಿಯೋ ವೈರಲ್, ಕೇಸ್ ದಾಖಲಿಸಲು ಮುಂದಾದ BMRCL

ವಿದ್ಯಾರ್ಥಿಗಳು ತಮ್ಮ ಸ್ಟಾಪ್ ಬಂದ ಬಳಿಕ ಮೆಟ್ರೋ ರೈಲಿನಿಂದ ನಿರ್ಗಮಿಸುವ ವೇಳೆ ಮೆಟ್ರೋ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಡೆದು ರೂ.500 ದಂಡ ವಿಧಿಸಿದ್ದಾರೆ. ಅಲ್ಲದೆ, ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ನೀಡಿದ್ದಾರೆ.

ಗೋಬಿ ತಿಂದ ಪ್ರಯಾಣಿಕನಿಗೆ ಫೈನ್

ನಿತ್ಯ ಆರೂವರೆ ಲಕ್ಷ ಪ್ರಯಾಣಿಕರು ಓಡಾಡುವ ನಮ್ಮ ಮೆಟ್ರೋದಲ್ಲಿ ಸಾಕಷ್ಟು ನಿಯಮಗಳಿವೆ. ಮೆಟ್ರೋ ರೈಲು ಹಾಗೂ ಸ್ಟೇಷನ್ ಒಳಗೆ ಯಾವುದೇ ಆಹಾರ ಪದಾರ್ಥ ಸೇವಿಸಬಾರದು ಎಂಬ ರೂಲ್ಸ್ ಇದ್ರೂ ಕೂಡ ಪ್ರಯಾಣಿಕರೊಬ್ಬರು ಕಳೆದ ವಾರ ರೂಲ್ಸ್ ಬ್ರೇಕ್ ಮಾಡಿದ್ದಾರೆ.‌ ಜಯನಗರ ಮೆಟ್ರೋ ಸ್ಟೇಷನ್ ನಲ್ಲಿ ಮೂರು ಜನರ ಗೆಳೆಯರ ಗುಂಪು ಮೆಟ್ರೋ ಹತ್ತಿದ್ದು ರೈಲಿನ ಒಳಗೆ ಪ್ರವೇಶಿಸಿದ ಬಳಿಕ ಗುಂಪಿನಲ್ಲಿದ್ದ ಸುನಿಲ್ ಎಂಬ ವ್ಯಕ್ತಿ ಗೋಬಿ ತಿಂದಿದ್ದಾನೆ.‌ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಹೀಗಾಗಿ ರೂಲ್ಸ್ ಬ್ರೇಕ್ ಮಾಡಿ ಮೆಟ್ರೋ ರೈಲಿನಲ್ಲಿ ಗೋಬಿ ತಿಂದಿದ್ದ ಸುನಿಲ್ ವಿರುದ್ಧ ಜಯ ನಗರದ ಸಹಾಯಕ ಸೆಕ್ಯೂರಿಟಿ ಅಧಿಕಾರಿ ಗಫರ್ ಎಂಬುವವರು ದೂರು ನೀಡಿದ್ರು ದೂರಿನ ಆಧಾರ ಮೇಲೆ ಜಯನಗರ ಪೋಲಿಸರು ಸುನಿಲ್ ಗೆ 500 ರೂಪಾಯಿ ತಂಡ ವಿಧಿಸಿದ್ದಾರೆ.

ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ನಿಯಮ ಪಾಲಿಸುವಂತೆ ಎಚ್ಚರಿಕೆಯನ್ನು ನೀಡಿದ್ದಾರೆ.‌..ಅದೇ ರೀತಿ ಕಳೆದ ಹತ್ತು ದಿನಗಳ ಹಿಂದೆ ಮೆಟ್ರೋದಲ್ಲಿ ಯೂಟ್ಯೂಬರ್ ಒಬ್ಬ ಹುಚ್ಚಾಟವಾಡಿದ್ದ, ವಿಜಯನಗರದಿಂದ ಮೆಜೆಸ್ಟಿಕ್ ಗೆ ಬರುವ ಪರ್ಪಲ್ ಲೈನ್ ನ ಎಸ್ಕಲೇಟರ್ ಮೇಲೆ ಪ್ರಾಂಕ್ ವೀಡಿಯೋ ಮಾಡಿ ಪ್ರಯಾಣಿಕರನ್ನು ಬೆಚ್ಚುವಂತೆ ಮಾಡಿದ್ದಾನೆ. ಚಲಿಸ್ತಿರೋ ಮೆಟ್ರೋದಲ್ಲಿ ಮೂರ್ಛೆ ಬಂದವರಂತೆ, ಕರೆಂಟ್ ಶಾಕ್ ಹೊಡೆದವನಂತೆ ಪ್ರಾಂಕ್ ಮಾಡಿದ ಯುವಕ ಆನಂತರ ಮತ್ತೊಂದು ವೀಡಿಯೋದಲ್ಲಿ ಎಸ್ಕಲೇಟರ್ ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಫ್ರಾಂಕ್ ಮಾಡಿದ್ದಾನೆ. ಪ್ರಾಂಕ್ ಪ್ರಜ್ಜು ಹುಚ್ಚಾಟ ಮೆರೆದಿದ್ದು, ತನ್ನದೇ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದ. BMRCL ಸಿಬ್ಬಂದಿ ಆತನ ಮಾಹಿತಿ ಕಲೆ ಹಾಕಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿ ದಂಡವನ್ನು ಹಾಕಿದ್ದಾರಂತೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:41 am, Fri, 20 October 23