ಸಿದ್ದರಾಮಯ್ಯ ಸಚಿವ ಸಂಪುಟ ಬದಲಾವಣೆ: ಕಾಂಗ್ರೆಸ್ನಿಂದ ತೇಲಿಬಂತು ಮತ್ತೊಂದು ಸುದ್ದಿ
ಬೆಳಗಾವಿ ಬೇಗುದಿ, ಶಾಸಕರು ಸಚಿವರ ನಡುವಿನ ಮನಸ್ತಾಪ, ನಿಗಮ ಮಂಡಳಿ ಆಯ್ಕೆ ಜಟಾಪಟಿ, ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ನೇಮಕ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಕಾಂಗ್ರೆಸ್ನಲ್ಲಿ ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ. ಇದೆಲ್ಲದರ ಬೆಳವಣಿಗೆಗಳ ಮಧ್ಯೆ ಮತ್ತೆ ಸಂಪುಟ ಪುನರ್ ರಚನೆ ಕೂಗು ಕೇಳಿ ಬಂದಿದೆ.
ಬೆಂಗಳೂರು, (ಅಕ್ಟೋಬರ್ 20): ಬೆಳಗಾವಿ ಬೇಗುದಿ, ಶಾಸಕರು ಸಚಿವರ ನಡುವಿನ ಮನಸ್ತಾಪ, ನಿಗಮ ಮಂಡಳಿ ಆಯ್ಕೆ ಜಟಾಪಟಿ, ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ನೇಮಕ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಕಾಂಗ್ರೆಸ್ನಲ್ಲಿ (Congress) ಕೆಲ ನಾಯಕರು ಅಸಮಾಧಾನಗೊಂಡಿದ್ದಾರೆ. ಇದೆಲ್ಲದರ ಬೆಳವಣಿಗೆಗಳ ಮಧ್ಯೆ ಮತ್ತೆ ಸಂಪುಟ ಪುನರ್ ರಚನೆ (cabinet reshuffle) ಕೂಗು ಕೇಳಿ ಬಂದಿದೆ. ಹೌದು…ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಆಗಲಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹೇಳಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು (ಅಕ್ಟೋಬರ್ 20) ವಿಧಾನಸೌಧದಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಆಗಲಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹೇಳಿದ್ದಾರೆ. ನಾನು ಹಿರಿಯ ಶಾಸಕ, ಮಂತ್ರಿ ಆಗಬೇಕಾಗಿತ್ತು, ಆದರೆ ಆಗಿಲ್ಲ. ಎರಡೂವರೆ ವರ್ಷದ ಬಳಿಕ ಮಂತ್ರಿ ಮಾಡುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ಜಾತಿ ನೋಡಿ ಸಚಿವ ಸ್ಥಾನ ನೀಡಲಾಗಿದೆ, ಹೀಗಾಗಿ ನನಗೆ ಸಿಕ್ಕಿಲ್ಲ. ಅನುಭವ ನೋಡಿ ಮಂತ್ರಿ ಮಾಡಿ ಎಂದು ನಾನು ಮನವಿ ಮಾಡಿದ್ದೇನೆ. ಎರಡೂವರ್ಷದ ಬಳಿಕ ಸಚಿವ ಸ್ಥಾನ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಸಚಿವ ಸ್ಥಾನ ಕೊಟ್ಟರೂ ಪಕ್ಷದಲ್ಲೇ ಇರುತ್ತೇನೆ, ಕೊಡದಿದ್ದರೂ ಇರುವೆ. ಪುನರ್ ರಚನೆ ಮಾಡುತ್ತಾರೋ ಅಥವಾ ನಾಲ್ಕೈದು ಸ್ಥಾನ ಬದಲಾವಣೆನೋ ಗೊತ್ತಿಲ್ಲ. ಸಿಎಂ ಸ್ಥಾನದ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ ಅಶೋಕ್ ಪಟ್ಟಣ್, ಸಿಎಂ ಸ್ಥಾನ ಬಗ್ಗೆ ನಾವು ಮಾತನಾಡಲು ಅಗಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಜ್ಯೂನಿಯರ್ ಸಿನಿಯರ್ ಅಂತ ಇಲ್ಲ. ಪಕ್ಷಕ್ಕೆ ಸೇರಿದ ಮೇಲೆ ಎಲ್ಲರೂ ಒಂದೇ. ಅದೃಷ್ಟ ಇದ್ದವರು ಮಂತ್ರಿಗಳು ಆಗುತ್ತಾರೆ. ದುರಾದೃಷ್ಟ ಇದ್ದ ನಮ್ಮಂತವರು ಹೀಗೆ ಮಾತಾಡುತ್ತೇವೆ. ಯಾವುದೇ ಫೀಲ್ಡ್ ಆದರೂ ಸಹ ಹಿಂದೆ ಗಾಡ್ ಫಾದರ್ ಇರಬೇಕು. ಗಾಡ್ ಫಾದರ್ ಇಲ್ಲದೆ ಏನು ಮಾಡುವುದಕ್ಕೆ ಆಗಲ್ಲ. ನನ್ನ ತಂದೆ, ತಾಯಿ ಎಂಎಲ್ಎ. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಅಂತಹ ಕುಟುಂಬದಿಂದ ನನಗೆ ಇನ್ನು ಅವಕಾಶ ಸಿಕ್ಕಿಲ್ಲ. ಎಲ್ಲ ಇದ್ದರೂ ನನ್ನ ನಕ್ಷತ್ರ ಸರಿಯಿಲ್ಲ ಎಂದು ಕಾಣುತ್ತದೆ. ಹೀಗಾಗಿ ನಾನು ಇನ್ಮುಂದೆ ಪೂಜೆ ಮಾಡಬೇಕು ಎಂದು ಪರೋಕ್ಷವಾಗಿ ಸಚಿವ ಸ್ಥಾನ ಸಿಗದಿದ್ದಕ್ಕೆ ಪರೋಕ್ಷ ಅಸಮಾಧಾನ ಹೊರಹಾಕಿದರು.
ಸಚಿವರ ಬದಲಾವಣೆ ಆದಂತೆ ಸಿಎಂ ಬದಲಾವಣೆ ಆಗುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್ ಪಟ್ಟಣ್, ಸಿಎಂದು ಏನೇ ಇದ್ದರು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅದೆಲ್ಲ ದೊಡ್ಡ ಕೆಲಸ. ಸಿಎಂ ಸ್ಥಾನದ ಬಗ್ಗೆ ನಾವು ಮಾತನಾಡುವುದಕ್ಕೆ ಆಗಲ್ಲ. ಅದಕ್ಕೂ ನಮಗೂ ಸಂಬಂಧ ಇಲ್ಲ. ಸಿಎಂ ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಹೇಳಿದರು.
ಹ್ಯಾರೀಸ್ ಹೇಳಿದ್ದೇನು?
2.5 ವರ್ಷದ ನಂತರ ಸಂಚಿವ ಸಂಪುಟ ಬದಲಾಗುವುದರ ಬೆಗ್ಗೆ ಮಾತನಾಡಿದ ಶಾಂತಿನಗರದ ಶಾಸಕ ಹ್ಯಾರೀಸ್, ಸರ್ಕಾರ ಒಳ್ಳೆ ಆಡಳಿತವನ್ನ ಕೊಟ್ಟಿದೆ. ಸಂಪುಟ ಬದಲಾಗುವುದರಲ್ಲಿ ತಪ್ಪೇನಿಲ್ಲ ನನಗೆ ನಾಳೆ ಅಲ್ಲ. ನಿನ್ನೆಯೇ ಕೊಡಬೇಕಿತ್ತು. ನಾವು ಕೆಲಸ ಮಾಡಿದ್ದೇವೆ. ಮತ್ತೆ ಸಚಿವ ಸ್ಥಾನ ಕೊಡಬೇಕು ಕೊಡುತ್ತೇವೆ ಎಂದು ಅಂತ ಹೇಳಿದ್ದಾರೆ. ಕಾದು ನೋಡೋಣ. ಸಿಎಂ ಆಗುವುದಕ್ಕೆ ಡಿಕೆ ಶಿವಕುಮಾರ್ ಡಿಸರ್ವಿಂಗ್ ಕ್ಯಾಂಡಿಡೇಟ್ . ಹೈಕಕಮಾಂಡ್ ತಿರ್ಮಾನವಷ್ಟೇ ಒಳ್ಳೆದಾಗಬೇಕು ಅಷ್ಟೇ ಎಂದು ಹೇಳಿದರು.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Fri, 20 October 23