AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ ಮತ್ತೊಂದು ವಿಕೆಟ್ ಪತನ: ಇಂದು ಕಾಂಗ್ರೆಸ್​ ಸೇರಲಿರುವ ಮಾಜಿ ಎಂಎಲ್​ಎ

ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಇಂದು(ಅಕ್ಟೋಬರ್ 20) ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕಾಡುಗೊಲ್ಲ ಸಮುದಾಯದ ನಾಯಕರ ಅಸಮಾಧಾನ ನಡುವೆಯೂ ಪೂರ್ಣಿಮಾ ಕಾಂಗ್ರೆಸ್ ಸೇರುತ್ತಿದ್ದಾರೆ.

ಬಿಜೆಪಿಯ ಮತ್ತೊಂದು ವಿಕೆಟ್ ಪತನ: ಇಂದು ಕಾಂಗ್ರೆಸ್​ ಸೇರಲಿರುವ ಮಾಜಿ ಎಂಎಲ್​ಎ
ಪ್ರಸನ್ನ ಗಾಂವ್ಕರ್​
| Edited By: |

Updated on: Oct 20, 2023 | 8:37 AM

Share

ಬೆಂಗಳೂರು, (ಅಕ್ಟೋಬರ್, 20): ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಅವರು ಇಂದು(ಅಕ್ಟೋಬರ್ 20) ಕಾಂಗ್ರೆಸ್(Congress) ಸೇರ್ಪಡೆಯಾಗಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಗುಡ್​ಬೈ ಹೇಳಿ ಕೈ ಹಿಡಿಯಲಿದ್ದಾರೆ. ಕಳೆದ ತಿಂಗಳಷ್ಟೇ ಕೆ.ಆರ್. ಪುರದಲ್ಲಿರುವ ಪೂರ್ಣಿಮಾ ಶ್ರೀನಿವಾಸ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿದ್ದರು. ಈ ವೇಳೆ ಪಕ್ಷ ಸೇರುವುದಾಗಿ ಡಿಕೆಶಿಗೆ ಪೂರ್ಣಿಮಾ ಭರವಸೆ ಕೊಟ್ಟಿದ್ದರು. ಅದರಂತೆ ಇದೀಗ ಕಾಂಗ್ರೆಸ್‌ ಸೇರುತ್ತಿದ್ದಾರೆ. ಆದ್ರೆ, ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ಕಾಡುಗೊಲ್ಲ ಸಮುದಾಯದ ಹಲವರಿಂದ ವಿರೋಧ ವ್ಯಕ್ತವಾಗಿದೆ.

ಕಾಡುಗೊಲ್ಲ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ಪಡೆಯದೇ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ವಿರೋಧ ವ್ಯಕ್ತವಾಗಿವೆ. ಅಲ್ಲದೇ ಪೂರ್ಣಿಮಾ ಶ್ರೀನಿವಾಸ್ ಕಾಡುಗೊಲ್ಲ ವಿರೋಧಿ ಎಂದು ಪೋಸ್ಟ್ ಗಳನ್ನು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಕಾಡುಗೊಲ್ಲ ಸಮುದಾಯದ ನಾಯಕರ ಅಸಮಾಧಾನ ನಡುವೆಯೂ ಪೂರ್ಣಿಮಾ ಕಾಂಗ್ರೆಸ್ ಸೇರುತ್ತಿದ್ದಾರೆ.

ದಂಪತಿಗಳಿಬ್ಬರ ರಾಜಕೀಯಕ್ಕೆ ಸಮುದಾಯ ಬಲಿಯಾಗುತ್ತಿದೆ. ಹಿರಿಯೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿರುವ ಕಾಡುಗೊಲ್ಲ ಸಮುದಾಯ ಕೆ ಪೂರ್ಣಿಮಾ ಶ್ರೀನಿವಾಸ್ ಅವರನ್ನ ಬೆಂಬಲಿಸಿತ್ತು. 2014ರಲ್ಲಿ ಪೂರ್ಣಿಮಾ ತಂದೆ ಎ ಕೃಷ್ಣಪ್ಪ ಅವರು ಕಾಂಗ್ರೆಸ್ ನಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸಿದ್ದರು. ಆದ್ರೆ, ಎ ಕೃಷ್ಣಪ್ಪ ಅವರು ಅಕಾಲಿಕ ಮರಣ ಹೊಂದಿದ ಬಳಿಕ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಸಮುದಾಯದ ಒಗ್ಗಟ್ಟಾಗಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಹಿರಿಯೂರು ಕ್ಷೇತ್ರದಿಂದ ಆಯ್ಕೆಯಾದ ಕೆ ಪೂರ್ಣಿಮಾ 2023ರ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರು. ಸೋತ ಮೂರ್ನಾಲ್ಕು ತಿಂಗಳಲ್ಲೇ ಇದೀಗ ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ. ದಂಪತಿಗಳಿಬ್ಬರು ರಾಜಕೀಯ ಅಸ್ತಿತ್ವವ ಕಂಡುಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!