ICC World Cup 2023: ಆಸ್ಟ್ರೇಲಿಯ—ಪಾಕಿಸ್ತಾನ್ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ, 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ
ICC World Cup: ಬಾಂಬ್ ಪತ್ತೆ ದಳದ ಅಧಿಕಾರಿಗಳು ಶ್ವಾನಗಳೊಂದಿಗೆ ಸ್ಟೇಡಿಯಂನ ಪ್ರತಿಯೊಂದು ಮೂಲೆ ಪರಿಶೀಲಿಸುತ್ತಿರುವುದನ್ನು ನೋಡಬಹುದು. ಮೈದಾದೊಳಗಿನ ನೆಟ್ಸ್ ನಲ್ಲಿ ಪಾಕಿಸ್ತಾನದ ಅಟಗಾರರರು ಅಭ್ಯಾಸನಿರತರಾಗಿರುವುದು ಸಹ ಕಾಣಿಸುತ್ತದೆ. ಪಂದ್ಯದ ವಿಷಯಕ್ಕೆ ಬಂದರೆ ಆಡಿದ 3 ಪಂದ್ಯಗಳಿಂದ ಕೇವಲ 2 ಪಾಯಿಂಟ್ಸ್ ಹೊಂದಿರುವ ಆಸ್ಟ್ರೇಲಿಯಗೆ ಇವತ್ತು ಪಾಕಿಸ್ತಾನದ ವಿರುದ್ಧ ಗೆಲ್ಲಲೇಬೇಕಾದ ಸ್ಥಿತಿಯಿದೆ.
ಬೆಂಗಳೂರು: ಬೆಂಗಳೂರಿನ ಪೊಲೀಸ್ ವ್ಯವಸ್ಥೆಯ ಬಹುಪಾಲು ಸಿಬ್ಬಂದಿ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದ (M Chinnaswamy Stadium) ಸುತ್ತಮುತ್ತ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯ (Pakistan-Australia) ನಡುವೆ ಐಸಿಸಿ ವಿಶ್ವಕಪ್-2023 (CWC 2023 ) ಹಗಲು-ರಾತ್ರಿ ಪಂದ್ಯ ಇಂದು ನಡೆಯಲಿದ್ದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ನಿಮಗೆ ನೆನಪಿರಬಹುದು, 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಪೋಟಗೊಂಡ ಘಟನೆ ನಡೆದಿತ್ತು. ಹಾಗಾಗಿ, ಈ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯ ನಡೆದರೂ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗುತ್ತದೆ. ಕೇಂದ್ರ ವಿಭಾಗದ ಡಿಸಿಪಿ ಟಿ ಹೆಚ್ ಶೇಖರ್ ನೇತೃತ್ವದಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಂಬ್ ಪತ್ತೆ ದಳದ ಅಧಿಕಾರಿಗಳು ಶ್ವಾನಗಳೊಂದಿಗೆ ಸ್ಟೇಡಿಯಂನ ಪ್ರತಿಯೊಂದು ಮೂಲೆ ಪರಿಶೀಲಿಸುತ್ತಿರುವುದನ್ನು ನೋಡಬಹುದು. ಮೈದಾದೊಳಗಿನ ನೆಟ್ಸ್ ನಲ್ಲಿ ಪಾಕಿಸ್ತಾನದ ಅಟಗಾರರರು ಅಭ್ಯಾಸನಿರತರಾಗಿರುವುದು ಸಹ ಕಾಣಿಸುತ್ತದೆ. ಪಂದ್ಯದ ವಿಷಯಕ್ಕೆ ಬಂದರೆ ಆಡಿದ 3 ಪಂದ್ಯಗಳಿಂದ ಕೇವಲ 2 ಪಾಯಿಂಟ್ಸ್ ಹೊಂದಿರುವ ಆಸ್ಟ್ರೇಲಿಯಗೆ ಇವತ್ತು ಪಾಕಿಸ್ತಾನದ ವಿರುದ್ಧ ಗೆಲ್ಲಲೇಬೇಕಾದ ಸ್ಥಿತಿಯಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ