ಡ್ರಗ್ಸ್ನಷ್ಟೇ ಮೊಬೈಲ್ ಕೂಡ ದೊಡ್ಡ ಅಡಿಕ್ಷನ್; ಮನೋವೈದ್ಯರು ಹೇಳೋದೇನು?
ಇಂಟರ್ನೆಟ್ ಚಟವು ಡ್ರಗ್ ಬಳಕೆಯಂತೆಯೇ ಒಂದು ಅಡಿಕ್ಷನ್ ಆಗಿದೆ. ಹದಿಹರೆಯದವರು ಮತ್ತು ಯುವಕರು ಪ್ರತಿದಿನ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5 ರಿಂದ 10 ಗಂಟೆಗಳ ಕಾಲ ಕಳೆಯುವುದನ್ನು ನಾವು ನೋಡುತ್ತೇವೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.
ನಿಮ್ಮ ಫೋನ್ ಇಲ್ಲದೆ ನೀವು ಒಂದೇ ಒಂದು ದಿನ ಇರಲು ಸಾಧ್ಯವೇ? ಮೊಬೈಲ್ ಇಲ್ಲದೆ ಇರುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ನೀವು ನಿಮ್ಮ ಮೊಬೈಲ್ಗೆ ಅಡಿಕ್ಟ್ ಆಗಿದ್ದೀರಿ ಎಂದರ್ಥ. ನಿಮ್ಮ ರೀತಿ ಹಲವು ಮಂದಿ ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. ಈ ಅಡಿಕ್ಷನ್ ಡ್ರಗ್ನಂತೆಯೇ ಅಪಾಯಕಾರಿ ಎಂದು ಯುಎಸ್‌ಸಿ ಸಂಶೋಧಕರು ಹೇಳಿದ್ದಾರೆ. ಸ್ಮಾರ್ಟ್‌ಫೋನ್‌ಗಳು ನಮ್ಮ ಮೆದುಳನ್ನು ಹೇಗೆ ರಿವೈರಿಂಗ್ ಮಾಡಬಹುದು ಮತ್ತು ನಮ್ಮನ್ನು ಅವಲಂಬಿಸುವಂತೆ ಮಾಡುತ್ತವೆ ಎಂಬುದನ್ನು ಅಧ್ಯಯನ ಮಾಡುತ್ತಿದ್ದಾರೆ.
ಇಂಟರ್ನೆಟ್ ಚಟವು ಡ್ರಗ್ ಬಳಕೆಯಂತೆಯೇ ಒಂದು ಅಡಿಕ್ಷನ್ ಆಗಿದೆ ಎಂದು ಯುಎಸ್‌ಸಿ ಡಾರ್ನ್ಸೈಫ್ ಕಾಲೇಜ್ ಆಫ್ ಲೆಟರ್ಸ್, ಆರ್ಟ್ಸ್ ಆ್ಯಂಡ್ ಸೈನ್ಸಸ್ನ ಮನೋವಿಜ್ಞಾನದ ಪ್ರಾಧ್ಯಾಪಕ ಮತ್ತು ನರವಿಜ್ಞಾನಿ ಆಂಟೋಯಿನ್ ಬೆಚಾರ ಹೇಳುತ್ತಾರೆ.
ಇದನ್ನೂ ಓದಿ: ಮಹಿಳೆಯರಲ್ಲಿ ಋತುಬಂಧ ಸಮೀಪಿಸುತ್ತಿರುವ ಈ 7 ಚಿಹ್ನೆಗಳನ್ನು ನಿರ್ಲಕ್ಷ್ಯಿಸಬೇಡಿ!
19 ವರ್ಷದ ಸುರಭ್ ಗುಪ್ತಾ ಗುಜರಾತ್‌ನ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಇತ್ತೀಚೆಗೆ ಆತನನ್ನು ಮನೋವೈದ್ಯರ ಬಳಿಗೆ ಕರೆತರಲಾಯಿತು. ಮನೆಯಲ್ಲಿಯೂ ಆತ ತನ್ನ ಮೊಬೈಲ್ ಸ್ಕ್ರೀನ್ಗೆ ಅಂಟಿಕೊಂಡಿರುತ್ತಿದ್ದ. ಇದರಿಂದ ಆತನ ತಂದೆ ಮಗನ ಬಗ್ಗೆ ಚಿಂತಿಸತೊಡಗಿದ.
ಆತ ದಿನಕ್ಕೆ 5 ಗಂಟೆಗಳ ಕಾಲ ಆನ್‌ಲೈನ್ ಗೇಮ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುತ್ತಿದ್ದ. ಆತ ತನ್ನ ಹೆತ್ತವರೊಂದಿಗೆ ಇದ್ದಾಗಲೂ ಈ ಅಭ್ಯಾಸವು ಮುಂದುವರೆದಿತ್ತು. ಇದರಿಂದ ಅವನ ಹೆತ್ತವರಿಗೆ ಆತಂಕ ಶುರುವಾಗಿತ್ತು. ಆತ ಯಾವಾಗಲೂ ಮೊಬೈಲ್ನಲ್ಲಿ ರೀಲ್‌ಗಳು, ಕಿರು ವೀಡಿಯೊಗಳನ್ನು ನೋಡುತ್ತಾನೆ ಎಂಬುದು ಆತನ ತಂದೆಯ ವಾದ. ಇದರಿಂದ ಅವರು ಮಗನನ್ನು ಮನಶಾಸ್ತ್ರಜ್ಞರ ಬಳಿ ಕರೆದುಕೊಂಡು ಬಂದಿದ್ದರು.
ಕೊವಿಡ್ ಸಮಯದಲ್ಲಿ ಮಕ್ಕಳ ಮೊಬೈಲ್ ಅಡಿಕ್ಷನ್ ಜಾಸ್ತಿಯಾಯಿತು. ಅದು ಇನ್ನೂ ಮುಂದುವರೆದಿದೆ. ಹದಿಹರೆಯದವರು ಮತ್ತು ಯುವಕರು ಪ್ರತಿದಿನ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5 ರಿಂದ 10 ಗಂಟೆಗಳ ಕಾಲ ಕಳೆಯುವುದನ್ನು ನಾವು ನೋಡುತ್ತೇವೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.
ಇದನ್ನೂ ಓದಿ: ನಮ್ಮ ಆಪ್ತರು ಸತ್ತಂತೆ ಕನಸು ಯಾಕೆ ಬೀಳುತ್ತದೆ?; ಕನಸು ನಿಜವಾಗುತ್ತಾ?
ಮಕ್ಕಳು ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು. ಇಲ್ಲವಾದರೆ, ಇದು ಮಕ್ಕಳಲ್ಲಿ ಖಿನ್ನತೆ, ಆತಂಕ ಮತ್ತು ಒತ್ತಡ ಸೇರಿದಂತೆ ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇವೆಲ್ಲವೂ ಅತಿಯಾದ ಮೊಬೈಲ್ ಫೋನ್ ಬಳಕೆಗೆ ಸಂಬಂಧಿಸಿವೆ.
ಈ ಬಗ್ಗೆ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (ಆರ್‌ಆರ್‌ಯು) ಸ್ಕೂಲ್ ಆಫ್ ಕ್ರಿಮಿನಾಲಜಿ ಮತ್ತು ಬಿಹೇವಿಯರಲ್ ಸೈನ್ಸ್‌ನ ಪ್ರಭಾರ ನಿರ್ದೇಶಕ ಮಹೇಶ್ ತ್ರಿಪಾಠಿ ಮಾತನಾಡಿ, ಮೊಬೈಲ್ ಚಟವು ಮಾದಕ ವ್ಯಸನದಂತೆ. ಯುವಜನರಿಗೆ ಮೊಬೈಲ್ ಚಟವು ಸಾಮಾನ್ಯವಾಗಿ ಒಂಟಿತನ, ಬೇಸರದ ಭಾವನೆಯೊಂದಿಗೆ ಪ್ರಾರಂಭವಾಗುತ್ತದೆ. ಇಂದು ಇಂಟರ್ನೆಟ್ ಗೇಮಿಂಗ್, ವೀಡಿಯೊ, ಸಾಮಾಜಿಕ ಮಾಧ್ಯಮ ಸಂವಹನ ಹೀಗೆ ಎಲ್ಲವನ್ನೂ ಒದಗಿಸುತ್ತದೆ. ಇದರಿಂದಲೇ ಮಕ್ಕಳು ಮೊಬೈಲ್ಗೆ ಅಡಿಕ್ಟ್ ಆಗುತ್ತಾರೆ ಎಂದಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ