ಕರ್ನಾಟಕ, ಅಲಹಾಬಾದ್ ಮತ್ತು ಮದ್ರಾಸ್ ಹೈಕೋರ್ಟ್‌ಗಳಿಗೆ 13 ಹೆಚ್ಚುವರಿ ನ್ಯಾಯಾಧೀಶರ ನೇಮಕಾತಿಗೆ ಕೇಂದ್ರ ಸೂಚನೆ

ಕರ್ನಾಟಕ, ಅಲಹಾಬಾದ್ ಮತ್ತು ಮದ್ರಾಸ್ ಹೈಕೋರ್ಟ್‌ಗಳಿಗೆ 2 ನ್ಯಾಯ ಅಧಿಕಾರಿಗಳು ಮತ್ತು 11 ವಕೀಲರನ್ನು ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲು ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ, ಅಲಹಾಬಾದ್ ಮತ್ತು ಮದ್ರಾಸ್ ಹೈಕೋರ್ಟ್‌ಗಳಿಗೆ 13 ಹೆಚ್ಚುವರಿ ನ್ಯಾಯಾಧೀಶರ ನೇಮಕಾತಿಗೆ ಕೇಂದ್ರ ಸೂಚನೆ
ಕರ್ನಾಟಕ ಹೈಕೋರ್ಟ್
Updated By: Rakesh Nayak Manchi

Updated on: Feb 06, 2023 | 5:23 PM

ದೆಹಲಿ: ಕರ್ನಾಟಕ, ಅಲಹಾಬಾದ್ ಮತ್ತು ಮದ್ರಾಸ್ ಹೈಕೋರ್ಟ್‌ಗಳಿಗೆ 2 ನ್ಯಾಯ ಅಧಿಕಾರಿಗಳು ಮತ್ತು 11 ವಕೀಲರನ್ನು ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲು ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಪ್ರಕಾರ, ವಕೀಲರಾದ ವಿಜಯಕುಮಾರ್ ಅಡಗೌಡ ಪಾಟೀಲ್ ಮತ್ತು ರಾಜೇಶ್ ರೈ ಕಲ್ಲಂಗಳ ಅವರನ್ನು ಕರ್ನಾಟಕ ಹೈಕೋರ್ಟ್​​ನ (Karnataka High Court) ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ವಕೀಲರಾದ ಸೈಯದ್ ಖಮರ್ ಹಸನ್ ರಿಜ್ವಿ, ಮನೀಶ್ ಕುಮಾರ್ ನಿಗಮ್, ಅನೀಶ್ ಕುಮಾರ್ ಗುಪ್ತಾ, ನಂದಪ್ರಭಾ, ಶುಕ್ಲಾ ಕ್ಷಿತಿಜ್ ಶೈಲೇಂದ್ರ ಮತ್ತು ವಿನೋದ್ ದಿವಾಕರ್ ಅವರನ್ನು ಅಲಹಾಬಾದ್ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ.

ವಕೀಲರಾದ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ, ಪಿಳ್ಳೈಪಕ್ಕಂ ಬಹುಕುತುಂಬಿ ಬಾಲಾಜಿ, ಕಂದಸಾಮಿ ಕುಲಂದೈವೇಲು ರಾಮಕೃಷ್ಣನ್, ನ್ಯಾಯಾಂಗ ಅಧಿಕಾರಿಗಳಾದ ರಾಮಚಂದ್ರ ಕಲೈಮತಿ ಮತ್ತು ಕೆ.ಗೋವಿಂದರಾಜನ್ ತಿಲಕವಾಡಿ ಅವರನ್ನು ಮದ್ರಾಸ್ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ.

ಈ ಬಗ್ಗೆ ಟ್ವಿಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಕಿರಣ್ ರಿಜುಜು, ಭಾರತದ ಸಂವಿಧಾನದ ಅಡಿಯಲ್ಲಿ ಸಂಬಂಧಿತ ನಿಬಂಧನೆಗಳ ಪ್ರಕಾರ, ಕೆಳಗಿನ ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳನ್ನು ಅಲಹಾಬಾದ್ ಹೈಕೋರ್ಟ್, ಕರ್ನಾಟಕ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಲಾಗಿದೆ. ಅವರೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Mon, 6 February 23