ಸರ್ಕಾರದ ಬಗ್ಗೆ ಹೈಕೋರ್ಟ್ ಅಸಮಾಧಾನ, ಫೆ.7 ರೊಳಗೆ ಗ್ರಾಮಗಳಿಗೆ ಸ್ಮಶಾನ ಜಮೀನು ಒದಗಿಸುವಂತೆ ಖಡಕ್ ಸೂಚನೆ
ಆದೇಶ ಪಾಲನೆಗೆ 2 ವಾರ ಸಮಯ ಕೇಳಿದ ಸರ್ಕಾರದ ಕ್ರಮದ ಬಗ್ಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದ್ದು,. ಫೆ.7 ರೊಳಗೆ ಸ್ಮಶಾನ ಭೂಮಿ ಒದಗಿಸುವಂತೆ ತಾಕೀತು ಮಾಡಿದೆ.
ಬೆಂಗಳೂರು: ರಾಜ್ಯದ ಕೆಲ ಗ್ರಾಮಗಳಲ್ಲಿ(Villages) ಸ್ಮಶಾನಗಳಿಗೆ ಜಮೀನು (graveyard Land) ಒದಗಿಸದ ಸರ್ಕಾರದ ಬಗ್ಗೆ ಕರ್ನಾಟಕ ಹೈಕೋರ್ಟ್(Karnataka High Court) ಅಸಮಾಧಾನ ವ್ಯಕ್ತಪಡಿಸಿದೆ. ಮೊಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸುವಂತೆ ತಾಕೀತು ಮಾಡಿದೆ.
ಇದನ್ನೂ ಓದಿ: ಸ್ಮಶಾನಕ್ಕೆ ಹೋಗುವ ದಾರಿ ಬಂದ್; ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ಮಾಡಿದ ಗ್ರಾಮಸ್ಥರು
ಹೈಕೋರ್ಟ್ ಆದೇಶ ಪಾಲನೆಗೆ 2 ವಾರ ಸಮಯ ಕೇಳಿದ ಸರ್ಕಾರದ ಕ್ರಮದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ. ಫೆ.7 ರೊಳಗೆ ಸರ್ಕಾರ ಸ್ಮಶಾನಗಳಿಗೆ ಜಮೀನು ಒದಗಿಸಬೇಕು. ಇಲ್ಲವೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಜರಾಗಿ ನ್ಯಾಯಾಂಗ ನಿಂದನೆ ಎದುರಿಸಬೇಕು ಎಂದು ನ್ಯಾಯಮೂರ್ತಿ.ಬಿ.ವೀರಪ್ಪ, ನ್ಯಾಯಮೂರ್ತಿ. ಕೆ.ಎಸ್.ಹೇಮಲೇಖಾ ಅವರಿದ್ದ ಪೀಠ ಖಡಕ್ ಸೂಚನೆ ನೀಡಿದೆ.
ರಾಜ್ಯದಾದ್ಯಂತ ಸ್ಮಶಾನದ ಕೊರತೆ ಇರುವೆಡೆ ಸರ್ಕಾರ ಒದಗಿಸಿರುವ ಸ್ಮಶಾನ ಜಾಗಗಳ ಕಂದಾಯ ವಿವರವನ್ನು ಆಯಾ ತಾಲ್ಲೂಕು ತಹಶೀಲ್ದಾರ್‌ಗಳಿಂದ ಸಂಗ್ರಹಿಸಿ ನೀಡುವಂತೆ ಹೈಕೋರ್ಟ್‌ನ ವಿಚಕ್ಷಣಾ ದಳಕ್ಕೆ ವಿಭಾಗೀಯ ನ್ಯಾಯಪೀಠ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಅಪರಾಧಿ ಮೃತಪಟ್ಟರೂ ಆತನಿಗೆ ವಿಧಿಸಿದ್ದ ದಂಡ ವಸೂಲಿ ಮಾಡಬಹುದು: ಹೈಕೋರ್ಟ್ ಮಹತ್ವದ ಆದೇಶ
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ವಿವರ ನೀಡಿ, 23,815 ಸ್ಮಶಾನಗಳನ್ನು ಒದಗಿಸಲಾಗಿದೆ. ರಾಜ್ಯದ ವಿವಿಧೆಡೆ ಇನ್ನೂ 319 ಸ್ಮಶಾನಗಳನ್ನು ವಿತರಿಸಬೇಕಿದೆ, ಈಗಾಗಲೇ 1,976 ಪ್ರದೇಶಗಳಲ್ಲಿ ಸ್ಮಶಾನಗಳಿಗೆ ಜಾಗ ಗುರುತಿಸಿದ್ದು ಇನ್ನೂ ಸ್ಥಳೀಯ ಪ್ರಾಧಿಕಾರಗಳ ವಶಕ್ಕೆ ನೀಡಿಲ್ಲ. ಆದರೆ, ಜಾಗ ಮಂಜೂರು ಮಾಡಲಾಗಿದೆ. ಅಂತೆಯೇ 2,419 ಜಾಗಗಳಲ್ಲಿ ಪಹಣಿ ಪತ್ರ ವಿತರಣೆ ಮಾಡಿಲ್ಲ. ಒಟ್ಟಾರೆ ಹೈಕೋರ್ಟ್ ಆದೇಶದ ಅನುಸಾರ ಶೇ 98.87ರಷ್ಟು ಪ್ರಗತಿ ಸಾಧಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೊಹಮ್ಮದ್ ಇಕ್ಬಾಲ್, ‘ಸರ್ಕಾರ ಹೇಳುತ್ತಿರುವ ಲೆಕ್ಕಾಚಾರ ಸರಿಯಲ್ಲ. ಸರ್ಕಾರ ಸ್ಥಳೀಯ ಪ್ರಾಧಿಕಾರಗಳಿಗೆ 6,334 ಸ್ಮಶಾನ ಜಾಗಗಳನ್ನು ನೀಡಬೇಕಿತ್ತು. ಆದರೆ, ಇನ್ನೂ 4,770 ಬಾಕಿ ಇವೆ. ಹೀಗಾಗಿ, ಪ್ರಗತಿ ಆಗಿರುವುದು ಕೇವಲ 25ರಷ್ಟು ಮಾತ್ರವೇ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ವರದಿ: ರಮೇಶ್ ಮಹದೇವ್ ಟಿವಿ9 ಬೆಂಗಳೂರು
Published On - 9:40 pm, Tue, 31 January 23