ಅಪರಾಧಿ ಮೃತಪಟ್ಟರೂ ಆತನಿಗೆ ವಿಧಿಸಿದ್ದ ದಂಡ ವಸೂಲಿ ಮಾಡಬಹುದು: ಹೈಕೋರ್ಟ್ ಮಹತ್ವದ ಆದೇಶ

ದಂಡ ವಿಧಿಸಿದ್ದ ಪ್ರಕರಣವೊಂದರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅಪರಾಧಿ ಮೃತಪಟ್ಟರೂ ಆತನ ಆಸ್ತಿಯಿಂದ ದಂಡ ವಸೂಲಿ ಮಾಡಬಹುದು ಎಂದು ಆದೇಶ ಹೊರಡಿಸಿದೆ.

ಅಪರಾಧಿ ಮೃತಪಟ್ಟರೂ ಆತನಿಗೆ ವಿಧಿಸಿದ್ದ ದಂಡ ವಸೂಲಿ ಮಾಡಬಹುದು: ಹೈಕೋರ್ಟ್ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 31, 2023 | 6:22 PM

ಬೆಂಗಳೂರು/ಹಾಸನ: ಅಪರಾಧಿ ಮೃತಪಟ್ಟರೂ ಆತನಿಗೆ ಕೋರ್ಟ್ ವಿಧಿಸಿದ್ದ ದಂಡವನ್ನು ಆತನ ಆಸ್ತಿಯಿಂದ ಅಥವಾ ಆತನ ಆಸ್ತಿಯ ಉತ್ತರಾಧಿಕಾರಿಯಿಂದ ವಸೂಲಿ ಮಾಡಬಹುದೆಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ಆದೇಶ ನೀಡಿದೆ. ಹಾಸನದ (Hassan) ವ್ಯಕ್ತಿಯೊಬ್ಬ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣದಲ್ಲಿ ವ್ಯಕ್ತಿಯೋರ್ವನಿಗೆ ಸೆಷನ್ ಕೋರ್ಟ್ ದಂಡ ವಿಧಿಸಲಾಗಿತ್ತು. ಆದ್ರೆ, ಅದರನ್ನು ವಿರೋಧಿಸಿ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ, ದುರದೃಷ್ಟವಶಾತ್ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇತ್ತ ಇಂದು (ಜನವರಿ 30) ಹೈಕೋರ್ಟ್, ಮೃತಪಟ್ಟರೂ ದಂಡ ಕಟ್ಟಬೇಕು ಎಂದು ಆದೇಶಿಸಿ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: ದುಡಿಯಲು ಸಮರ್ಥ ಪತಿ ಪತ್ನಿಯಿಂದ‌ ಜೀವನಾಂಶ ಕೇಳುವಂತಿಲ್ಲ, ಸೋಮಾರಿ ಪತಿಗೆ ಹೈಕೋರ್ಟ್ ತಪರಾಕಿ

ವಿದ್ಯುತ್ ಅನಧಿಕೃತ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ವ್ಯಕ್ತಿಯೊಬ್ಬರಿಗೆ ಹಾಸನದ ಹೆಚ್ಚುವರಿ ಸೆಷನ್ಸ್ ಕೋರ್ಟ್ ಒಟ್ಟು 29,204 ರೂಪಾಯಿ ದಂಡ ವಿಧಿಸಿತ್ತು. 2003 ರ ಭಾರತೀಯ ವಿದ್ಯುತ್ ಕಾಯ್ದೆಯ ಸೆಕ್ಷನ್ 135, 138 ಅಡಿ ವಿಧಿಸಿದ್ದ ದಂಡ ಪ್ರಶ್ನಿಸಿ ಅಪರಾಧಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ. ಮೇಲ್ಮನವಿ ವಿಚಾರಣೆ ವೇಳೆಯೇ 2019 ರಲ್ಲಿ ಅಪರಾಧಿ ಮೃತಪಟ್ಟಿದ್ದರು. ಅಪರಾಧಿ ಮೃತನಾದ‌ ಬಗ್ಗೆ ಹೈಕೋರ್ಟ್ ಗೆ ಮೃತ ಅಪರಾಧಿ ಪರ ವಕೀಲ ಗಿರೀಶ್ ಬಲದರೆ ಮಾಹಿತಿ ನೀಡಿ ಕೇಸ್ ಮುಕ್ತಾಯಗೊಳಿಸಲ ಮನವಿ ಮಾಡಿದ್ದರು.

ಆದರೆ ಸಿಆರ್ ಪಿಸಿ ಸೆ. 394 ರಡಿ ಮೇಲ್ಮನವಿ ವಿಚಾರಣೆ ವೇಳೆ ಅಪರಾಧಿ ಮೃತನಾದರೆ, ಮೃತನಾದ 30 ದಿನಗಳಲ್ಲಿ ಅವನ ಹತ್ತಿರದ ಸಂಬಂಧಿಗಳು ಅರ್ಜಿ ಸಲ್ಲಿಸಿ ಮೇಲ್ಮನವಿ ವಿಚಾರಣೆ ಮುಂದುವರಿಸಬಹುದು. ಆದರೆ ಯಾರೂ ಅರ್ಜಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮೇಲ್ಮನವಿ ವಜಾಗೊಳಿಸಿದೆ.

ಇದನ್ನೂ ಓದಿ: ಶಿಕ್ಷಕರಾಗಿ ಆಯ್ಕೆಯಾದವರಿಗೆ ಬಿಗ್ ಶಾಕ್: ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್

ಇದೇ ವೇಳೆ ಮೃತ ಅಪರಾಧಿಯ ಆಸ್ತಿಯಿಂದ‌ ದಂಡ ವಸೂಲಿ ಮಾಡಲು ಸೂಚನೆ ನೀಡಿದೆ. ಅಪರಾಧಿ ಮೃತನಾದರೆ ಆತನ ಆಸ್ತಿಯಿಂದ ದಂಡ ವಸೂಲಿ ಮಾಡಬಹುದು ಅಥವಾ ಮೃತನ ಆಸ್ತಿಯ ಉತ್ತರಾಧಿಕಾರಿಯಿಂದಲೂ ದಂಡ ವಸೂಲಿ ಮಾಡಬಹುದು ಎಂದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ರವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.

ವರದಿ: ರಮೇಶ್ ಮಹದೇವ್ ಟಿವಿ9 ಬೆಂಗಳೂರು