ಬೆಂಗಳೂರು: ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ

ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಂಗೇರಿ ಡಿಪೋದಲ್ಲಿ ನಡೆದಿದೆ.

ಬೆಂಗಳೂರು: ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನ
ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ನಹತ್ಯೆಗೆ ಯತ್ನಿಸಿದ ಚಾಲಕ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 31, 2023 | 6:46 PM

ಬೆಂಗಳೂರು: ಎಟಿಎಸ್ ಕೋಮಲ ಹಾಗೂ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ್ ಕಿರುಕುಳಕ್ಕೆ ಬೇಸತ್ತು ಇಂದು(ಜ.31) ಚಾಲಕ ಶ್ರೀನಿವಾಸ್​ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕೆಂಗೇರಿ ಡಿಪೋದಲ್ಲಿ ನಡೆದಿದೆ. ಆಸ್ವಸ್ಥ ಚಾಲಕ ಶ್ರೀನಿವಾಸ್​ನನ್ನು R.R.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 15ವರ್ಷ ಅನುಭವ ಇರುವ ಚಾಲಕ ಶ್ರೀನಿವಾಸ್​ಗೆ ಡ್ಯೂಟಿ ನೀಡುವ ಅಧಿಕಾರಿಗಳು ಕಿರುಕುಳ ನೀಡ್ತಿದ್ದಾರೆ ಎಂದು ಆರೋಪಿಸಿ ಡಿಪೋದಲ್ಲಿಯೇ ಶ್ರೀನಿವಾಸ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬಿಎಂಟಿಸಿಯ ಅಧಿಕಾರಿಗಳ ಕಿರುಕುಳದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ನೌಕರರರ ಸಂಖ್ಯೆ ಹೆಚ್ಚಾಗುತ್ತಿದೆ. ಶುಕ್ರವಾರವಷ್ಟೇ ಆರ್​ಆರ್​ ನಗರ ಡಿಪೋ ಕಂಡಕ್ಟರ್ ರಂಗನಾಥ್ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದರು. ಇವತ್ತು ಮತ್ತೊಬ್ಬ ಚಾಲಕ ವಿಷಸೇವಿಸಿ ಆಸ್ಪತ್ರೆ ಸೇರಿದ್ದಾನೆ. ಕಳೆದ ಆರು ತಿಂಗಳ ಹಿಂದೆ ಅಷ್ಟೇ ಆರ್​​ಆರ್ ನಗರದ ಡಿಪೋದಲ್ಲೇ ಅಧಿಕಾರಿಗಳ ಕಿರುಕುಳದಿಂದ ನೊಂದು ಡಿಪೋದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಕಂಡಕ್ಟರ್ ಹೊಳೆಬಸಪ್ಪ ಎನ್ನುವವರು ಪ್ರಾಣ ಬಿಟ್ಟಿದ್ದರು.

ಇನ್ನು ಘಟನೆ ಕುರಿತು ಮಾತನಾಡಿದ ಬಿಎಂಟಿಸಿ ಭದ್ರತಾ ಮತ್ತು ಜಾಗೃತಾ ವಿಭಾಗದ ಅಧಿಕಾರಿ ರಾಧಿಕ, ಶ್ರೀನಿವಾಸ್ ಆತ್ಮಹತ್ಯೆ ಯತ್ನದ ಕುರಿತಾಗಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ದಾಖಾಲಿಸಿದ್ದೇವೆ. ಟ್ರೀಟ್ ಮೆಂಟ್ ಸಹ ಕೊಡಿಸುತ್ತಾ ಇದ್ದು, ಆಸ್ಪತ್ರೆಗೆ ಲೇಬರ್ ಚೀಫ್ ಆಫೀಸರ್ ಸಹ ಹೋಗಿ ನೋಡಿದ್ದಾರೆ. ಸಧ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶ್ರೀನಿವಾಸ್ ಲೇಟರ್ ಬರೆದಿರುವುದು ನನ್ನ ಗಮನಕ್ಕು ಬಂದಿದೆ. ಅದ್ರಲ್ಲಿ ಡಿಪೋ ಮ್ಯಾನಜರ್, ಎಟಿಎಸ್, ಎಡಿಐಗಳೇ ಪ್ರಮುಖ ಕಾರಣ ಎಂದು ಬರೆದಿದ್ದಾರೆ.

ಇದನ್ನೂ ಓದಿ:KSRTC BMTC: ಮೈಸೂರು, ತುಮಕೂರು, ಬೆಂಗಳೂರು ನಗರ ಸಾರಿಗೆಗೆ ಶೀಘ್ರ ಡಬಲ್ ಡೆಕರ್ ಎಸಿ ಇ-ಬಸ್

ಹೀಗಾಗಿ ಸ್ಥಳಕ್ಕೆ ಸೆಕ್ಯುರಿಟಿ ಟೀಮ್ ಸಹ ಕಳುಹಿಸಿದ್ದೇವೆ. ಡಿಪೋದಲ್ಲಿ ಟಾರ್ಚರ್ ಮಾಡುವಂತದ್ದು ನಿಜವಾಗ್ಲೂ ನಡೆಯುತ್ತ ಇದೆಯಾ ಎನ್ನುವ ಬಗ್ಗೆ ಪರಿಶೀಲಿಸಿ ರಿಪೋರ್ಟ್ ಕೊಡುವುದುಕ್ಕೆ ಹೇಳಿದ್ದಿನಿ. ರಿಪೋರ್ಟ್ ಬಂದ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ನೌಕರರನ್ನ ಮ್ಯಾನೆಜ್ಮೆಂಟ್ ನಿರ್ಲಕ್ಷ ಮಾಡುತ್ತಿದೆ ಎನ್ನುವುದು ಸುಳ್ಳು, ಒಳ್ಳೆಯ ವಾತಾವರಣ ಕಲ್ಪಿಸಿಕೊಡುವ ಸಲುವಾಗಿ ಇಲಾಖೆ ಪ್ರಯತ್ನ ಮಾಡುತ್ತಿದೆ. ಡ್ಯುಟಿ, ಲೀವ್, ರೂಟ್​ಗೆ ಸಂಬಂಧಪಟ್ಟಂತೆ ಕಂಪ್ಲೆಂಟ್​ಗಳು ಬಂದಾಗ ಕ್ರಮ ತೆಗೆದುಕೊಂಡಿದ್ದೇವೆ. ಸಿನಿರಿಯಾಟಿ ಮೇಲೆ ಕೆಲಸವನ್ನ ನಿಗದಿ ಮಾಡ್ತಾ ಇದಿವಿ, ಪ್ರತಿ ಡಿಪೋದಲ್ಲಿ ನೋಡೆಲ್ ಅಫೀಸರ್​ಗಳು ಇದ್ದಾರೆ. ಶ್ರೀನಿವಾಸ್ ಅವರಿಗೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಅವರ ಚಿಕಿತ್ಸಾ ವೆಚ್ಚವನ್ನ ಇಲಾಖೆ ಬರಿಸಲಿದೆ ಎಂದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Tue, 31 January 23

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್