KSRTC BMTC: ಮೈಸೂರು, ತುಮಕೂರು, ಬೆಂಗಳೂರು ನಗರ ಸಾರಿಗೆಗೆ ಶೀಘ್ರ ಡಬಲ್ ಡೆಕರ್ ಎಸಿ ಇ-ಬಸ್

Double Decker: ಬೆಂಗಳೂರು, ಮೈಸೂರು, ತುಮಕೂರು ನಗರಗಳಲ್ಲಿ ಡಬಲ್ ಡೆಕರ್ ಸಿಟಿ ಬಸ್‌ಗಳು ಮತ್ತೆ ಸಂಚರಿಸಲಿವೆ.

KSRTC BMTC: ಮೈಸೂರು, ತುಮಕೂರು, ಬೆಂಗಳೂರು ನಗರ ಸಾರಿಗೆಗೆ ಶೀಘ್ರ ಡಬಲ್ ಡೆಕರ್ ಎಸಿ ಇ-ಬಸ್
ಮುಂಬೈ ನಗರದಲ್ಲಿ ಈಗಾಗಲೇ ಡಬಲ್ ಡೆಕರ್ ಬಸ್‌ ಸೇವೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಇದೇ ಮಾದರಿ ಬಸ್‌ ಬರಬಹುದು ಎಂದು ನಿರೀಕ್ಷಿಸಲಾಗಿದೆ.
Follow us
TV9 Web
| Updated By: ಆಯೇಷಾ ಬಾನು

Updated on: Jan 31, 2023 | 9:39 AM

ಬೆಂಗಳೂರು: ಬೆಂಗಳೂರು ನಗರದಲ್ಲಿ ಹಲವು ವರ್ಷಗಳ ಕಾಲ ಸಂಚರಿಸಿದ್ದ ಡಬಲ್ ಡೆಕರ್ ಬಸ್‌ಗಳನ್ನು ಮತ್ತೆ ಪರಿಚಯಿಸಲು ಬಿಎಂಟಿಸಿ (BMTC) ಮುಂದಾಗಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ ತಿಂಗಳಲ್ಲಿ ಅತ್ಯಾಧುನಿಕ ಡಬಲ್ ಡೆಕರ್ ಇ-ಬಸ್‌ಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ. ಈ ನಡುವೆ ಕೆಎಸ್‌ಆರ್‌ಟಿಸಿ (Karnataka State Road Transport Corporation – KSRTC) ಸಹ ಬಿಎಂಟಿಸಿ ಮೇಲ್ಪಂಕ್ತಿ ಅನುಸರಿಸಲು ಮುಂದಾಗಿದ್ದು, ಮೈಸೂರು ಮತ್ತು ತುಮಕೂರು ನಗರಗಳ ನಗರ ಸಾರಿಗೆಗೆ (City Bus) ಡಬಲ್ ಡೆಕರ್ ಬಸ್‌ ಆರಂಭಿಸಲು ನಿರ್ಧರಿಸಿದೆ.

ಮೈಸೂರು ಮತ್ತು ತುಮಕೂರು ನಗರಗಳಲ್ಲಿ ಈ ವರ್ಷಾಂತ್ಯದ ಒಳಗೆ ಡಬಲ್ ಡೆಕರ್ ಬಸ್‌ ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಇವು ಎಲೆಕ್ಟ್ರಿಕ್ ಬಸ್‌ಗಳಾಗಿದ್ದು, ಏರ್‌ಕಂಡಿಷನ್ ವ್ಯವಸ್ಥೆಯೂ ಇರುತ್ತದೆ. ಎರಡು ದೊಡ್ಡ ನಗರಗಳಲ್ಲಿ ಡಬಲ್ ಡೆಕರ್ ಬಸ್‌ ಓಡಿಸುವ ಬಗ್ಗೆ ಕೆಎಸ್‌ಆರ್‌ಟಿಸಿ ಹಲವು ದಿನಗಳಿಂದ ಚಿಂತನೆ ನಡೆಸುತ್ತಿತ್ತು. ಇದೀಗ ಪ್ರಾಯೋಗಿಕವಾಗಿ ಪರಿಶೀಲಿಸಲು ಮುಂದಾಗಿರುವುದು ಪರಿಸರ ಸ್ನೇಹಿ ಸಾರಿಗೆಯ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದೆ.

ಇದನ್ನೂ ಓದಿ: NIMBUS app: ಇದೇ ಮಾಸಾಂತ್ಯಕ್ಕೆ ಬಿಎಂಟಿಸಿ ನಿಮ್ಮ ಬಸ್ ಆ್ಯಪ್ ಬಿಡುಗಡೆ ಸಾಧ್ಯತೆ

ತುಮಕೂರು ಮತ್ತು ಮೈಸೂರಿನಲ್ಲಿ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಎರಡೂ ನಗರಗಳಿಗೆ ಮೊದಲ ಹಂತದಲ್ಲಿ ತಲಾ 5 ಡಬಲ್ ಡೆಕರ್ ಎಲೆಕ್ಟ್ರಿಕ್ ಬಸ್‌ಗಳು ಸಿಗಲಿವೆ. ಈ ವರ್ಷಾಂತ್ಯದ ಒಳಗೆ ಇದು ಕಾರ್ಯಸಾಧ್ಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆಯನ್ನು ‘ಡೆಕನ್ ಹೆರಾಲ್ಡ್’ ವರದಿ ಮಾಡಿದೆ.

ಮೈಸೂರಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (Karnataka State Tourism Development Corporation – KSTDC) ಅಂಬಾರಿ ಡಬಲ್ ಡೆಕರ್ ಬಸ್‌ಗಳನ್ನು ಓಡಿಸುತ್ತಿದೆ. ಓಪನ್ ಟಾಪ್ ಮಾದರಿಯ ಈ ಬಸ್‌ಗಳು ನಗರದಲ್ಲಿ ಮೂರು ಟ್ರಿಪ್ ಸಂಚರಿಸುತ್ತಿದ್ದು, 250 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ತುಮಕೂರಿನಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಂಖ್ಯೆಯಲ್ಲಿದ್ದು, ನಗರ ಸಾರಿಗೆಗೆ ಹೆಚ್ಚು ಬೇಡಿಕೆಯಿದೆ.

ಬೆಂಗಳೂರಿಗೂ ಡಬಲ್ ಡೆಕರ್ ಬಸ್

ಕರ್ನಾಟಕದಲ್ಲಿ ಈ ಮೊದಲು ಡಬಲ್ ಡೆಕರ್ ಬಸ್‌ಗಳಿದ್ದ ಏಕೈಕ ನಗರ ಬೆಂಗಳೂರು. ಇಲ್ಲಿ 1990ರ ದಶಕದಲ್ಲಿಯೇ ಹಂತಹಂತವಾಗಿ ಡಬಲ್ ಡೆಕರ್ ಬಸ್‌ಗಳನ್ನು ಸೇವೆಯಿಂದ ಹಿಂಪಡೆಯಲಾಯಿತು. ಇದೀಗ ಬಿಎಂಟಿಸಿ (Bengaluru Metropolitan Transport Corporation – BMTC) ಈ ಮಾದರಿಯ ಬಸ್‌ಗಳನ್ನು ಮತ್ತೆ ಪರಿಚಯಿಸಲು ಮುಂದಾಗಿದೆ. ಕೇಂದ್ರ ಸರ್ಕಾರದ ‘ನಗರ ರಸ್ತೆ ಸಾರಿಗೆ ನಿಧಿ’ಯ (Department of Urban Land Transport – DULT) ಮೂಲಕ ಸಿಗುವ ಅನುದಾನವನ್ನು ಬಸ್‌ಗಳ ಖರೀದಿಗೆ ಬಳಸುತ್ತಿದೆ. ಕಳೆದ ಜನವರಿ 2ರಿಂದ ಐದು ಬಸ್‌ಗಳ ಖರೀದಿಗಾಗಿ ಬಿಎಂಟಿಸಿ ಟೆಂಡರ್ ಕರೆದಿದೆ. ಇದೇ ವರ್ಷದ ಜುಲೈನಲ್ಲಿ ಇಂಥ ಬಸ್‌ಗಳ ಸಂಚಾರ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಐದು ಮೀಟರ್‌ಗಳಷ್ಟು (16.4 ಅಡಿ) ಎತ್ತರ, 70 ಸೀಟ್ ಮತ್ತು ಒಂದು ಚಾರ್ಜ್‌ಗೆ 150 ಕಿಮೀ ಸಂಚಾರ ಸಾಮರ್ಥ್ಯ ಇರುವ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ಮುಂದಾಗಿದೆ. ಮೈಸೂರು-ತುಮಕೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಖರೀದಿಗೆ ಕೆಎಸ್‌ಆರ್‌ಟಿಸಿ ಸಹ ಇದೇ ಮಾನದಂಡ ಅನುಸರಿಸುವ ಸಾಧ್ಯತೆಯಿದೆ. ಮೈಸೂರು-ತುಮಕೂರು ಮಾರ್ಗದಲ್ಲಿ ಈ ಬಸ್‌ಗಳ ಸಂಚಾರ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ನಗರಗಳಲ್ಲಿ ಡಬಲ್ ಡೆಕರ್ ಬಸ್‌ಗಳನ್ನು ಆರಂಭಿಸುವ ಉದ್ದೇಶ ಕೆಎಸ್‌ಆರ್‌ಟಿಸಿಗೆ ಇದೆ.

ಬಿಎಂಟಿಸಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್