Sankey Tank Flyover: ಸ್ಯಾಂಕಿ ಕೆರೆ ಫ್ಲೈಓವರ್ ನಿರ್ಮಾಣಕ್ಕೆ ಪರ-ವಿರೋಧ ಅಭಿಪ್ರಾಯ; ಟೆಂಡರ್​ನಲ್ಲಿ ಕೇವಲ ಇಬ್ಬರು ಬಿಡ್ಡರ್ ಭಾಗಿ

ಸ್ಥಳೀಯ ಅಭಿಪ್ರಾಯ ಸಂಗ್ರಹ ಮಾಡಿರುವ ಬಿಬಿಎಂಪಿ, ಟ್ರಾಫಿಕ್ ಪೊಲೀಸರ ಸಲಹೆಯಂತೆ ಇಲ್ಲೊಂದು ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿದೆ ಆದ್ರೆ ಇದಕ್ಕೆ ಕೆಲ ಸ್ಥಳೀಯರು ವಿರೋಧ ಮಾಡ್ತಿರೋ ಕಾರಣ ಬಿಬಿಎಂಪಿ ಕೋರ್ಟ್ ಮುಖಾಂತರವೇ ಅನುಮತಿ ಪಡೆದುಕೊಂಡು ಯೋಜನೆ ರೂಪಿಸಲು ಹೊರಟಿದೆ.

Sankey Tank Flyover: ಸ್ಯಾಂಕಿ ಕೆರೆ ಫ್ಲೈಓವರ್ ನಿರ್ಮಾಣಕ್ಕೆ ಪರ-ವಿರೋಧ ಅಭಿಪ್ರಾಯ; ಟೆಂಡರ್​ನಲ್ಲಿ ಕೇವಲ ಇಬ್ಬರು ಬಿಡ್ಡರ್ ಭಾಗಿ
Follow us
TV9 Web
| Updated By: ಆಯೇಷಾ ಬಾನು

Updated on:Jan 31, 2023 | 8:09 AM

ಬೆಂಗಳೂರು: ಸ್ಯಾಂಕಿ ಕೆರೆ(Sankey Tank) ಬಳಿ ಫುಲ್ ಟ್ರಾಫಿಕ್ ಸಮಸ್ಯೆ(Traffic Issue) ಎದುರಾಗುತ್ತಿರುವ ಹಿನ್ನೆಲೆ ಬಿಬಿಎಂಪಿ(BBMP) ಫ್ಲೈಓವರ್ ನಿರ್ಮಾಣಕ್ಕೆ ತೀರ್ಮಾನಿಸಿದೆ. ಆದ್ರೆ ಇದಕ್ಕೆ ಕೆಲ ಸಂಘಟನೆಗಳು ವಿರೋಧ ಮಾಡ್ತಿದ್ರೆ. ಸ್ಥಳೀಯರು ಫ್ಲೈಓವರ್ ಬೇಕು ಅಂತಿದ್ದಾರೆ. ಫ್ಲೈಓವರ್ ಬೇಕು ಬೇಡ ಎಂಬ ತಿಕ್ಕಾಟ ಜೋರಾಗಿ ನಡಿತಾಯಿದೆ.

ಸ್ಯಾಂಕಿ ಕೆರೆಯ ಸೌಂಧರ್ಯ ಮೈ ಸೋಲದವರು ಯಾರು ಇಲ್ಲ. ಇಂತಹ ಕೆರೆ ಪಕ್ಕದಲ್ಲಿ ಟ್ರಾಫಿಕ್ ಕಿರಿಕಿರಿ ಇರೋ ಕಾರಣ ಬಿಬಿಎಂಪಿ ಇಲ್ಲೊಂದು ಫ್ಲೈಓವರ್ ನಿರ್ಮಾಣಕ್ಕೆ ತೀರ್ಮಾಣ ಮಾಡಿದೆ. ಆದ್ರೆ ಇಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಕೆಲವರು ವಿರೋಧ ಮಾಡಿದ್ರೆ ಇನ್ನೂ ಕೆವಲರು ಸ್ವಾಗತ ಮಾಡ್ತಿದ್ದಾರೆ. ಬೆಂಗಳೂರಿನ ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆ ಯೋಜನೆ ಇದೀಗಾ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ಕಡೆಯಿಂದ ಸಾಕಷ್ಟು ಯೋಜನೆಗಳು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದೆ. ಆದ್ರೆ ಎಲ್ಲೋ ಒಂದೆಡೆ ಇದು ನಮ್ಮ ಗಾರ್ಡನ್ ಸಿಟಿಯ ಹಸಿರನ್ನು ನಾಶಮಾಡಲು ಹೊರಟಿದೆ ಎಂಬ ಆರೋಪದಡಿ ಪ್ರಾಕಶ್ ಬೆಳವಾಡಿ ಸೇರಿದಂತೆ ಇತರೆ ಹೋರಾಟಗಾರರು ಈಗ ವಿರೋಧಿಸಲು ಮುಂದಾಗಿದ್ದಾರೆ. ಆದ್ರೆ ಫ್ಲೈಓವರ್ ಬೇಕು ಅಂತಾ ಸ್ಥಳೀಯರು ಹಾಗೂ ವಾಹನ ಸವಾರರು ಪಟ್ಟು ಹಿಡಿದಿದ್ದಾರೆ.

60 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಪ್ಲಾನ್

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹೊಸದಾಗಿ ಮೇಲ್ಸೇತುವೆ ನಿರ್ಮಾಣ ಮಾಡಲು ಬಿಬಿಎಂಪಿ ಹೊರಟಿದೆ. ಇದಕ್ಕೆಂದು ಸರಿ ಸುಮಾರು 50-60 ಮರಗಳನ್ನ ಕಟ್ ಮಾಡಬೇಕಿದೆ. ಇದನ್ನು ಕೇಳಿದ ಸ್ಥಳೀಯರು ಆಕ್ರೋಶಗೊಂಡಿದ್ದು. ಸ್ಯಾಂಕಿ ರಸ್ತೆಯ ವಿಸ್ತರಣೆ ಹಾಗೂ ಟಿ.ಚೌಡಯ್ಯ ರಸ್ತೆಯಿಂದ 18ನೇ ಕ್ರಾಸ್ ತನಕ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿದೆ. ಸಾಕಷ್ಟು ವಿಳಂಬದ ನಂತರ ಈ ಬಹುನಿರೀಕ್ಷಿತ 4 ಪಥದ ಮೇಲು ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆದಿರುವ ಪಾಲಿಕೆ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಪ್ಲಾನ್ ಹಾಕಿಕೊಂಡಿದೆ. ಸ್ಯಾಂಕಿ ಟ್ಯಾಂಕ್ ಪಕ್ಕದ ರಸ್ತೆಯ ಮೇಲೆ ಹಾದು ಹೋಗುವ ಫ್ಲೈ ಓವರ್ ಯಶವಂತಪುರ ಕಡೆಗೆ ಸಾಗುವ ಮಲ್ಲೇಶ್ವರಂ 18th ಕ್ರಾಸ್‌ನಲ್ಲಿ ಅಂತ್ಯವಾಗಲಿದೆ.

ಇದನ್ನೂ ಓದಿ: Economic Survey: ಮೂರು ವರ್ಷದಲ್ಲೇ ಆರ್ಥಿಕತೆ ಕಡಿಮೆ ಬೆಳವಣಿಗೆ: ಎಕನಾಮಿಕ್ ಸರ್ವೆ ಅಂದಾಜು?

ಫ್ಲೈ ಓವರ್ ವಿಶೇಷತೆಗಳನ್ನು ಹೊಂದಿರಲಿದೆ. ಸಂಪೂರ್ಣ ಪರಿಸರ ಸ್ನೇಹಿತ ಥೀಮ್ ನೊಂದಿಗೆ ಚಿಂತನೆ ನಡೆಸಲಾಗಿದೆ. ಪ್ರತಿದಿನ ಸುಮಾರು 9 ರಿಂದ 10 ಸಾವಿರ ವಾಹನಗಳು ಈ ಸೇತುವೆ ಮೂಲಕ ಹಾದು ಹೋಗಬಹುದು ಅಂದಾಜಿಸಲಾಗಿದೆ. ಹೊಸ ಮೇಲೇತುವೆ 560 ಮೀ ಉದ್ದ ಮತ್ತು 17 ಮೀ ಅಗಲವಿದೆ. ಬಿಬಿಎಂಪಿಯು ಸೇತುವೆಯ ಕೆಳಗೆ 590 ಮೀ ವಿಸ್ತರಿಸುವ ದ್ವಿಪಥ ರಸ್ತೆಗಳನ್ನು ಮತ್ತು 5.5 ಮೀ ಅಗಲದ ಸ್ಲಿಪ್ ರಸ್ತೆಗಳನ್ನು ನಿರ್ಮಿಸುತ್ತದೆ. ಪಾಲಿಕೆ 49.59 ಕೋಟಿ ಮೊತ್ತದ ಟೆಂಡರ್ ಕರೆದಿದೆ. ಉಳಿದ 10.31 ಕೋಟಿ ರೂ.ಗಳನ್ನು ಜಿಎಸ್ಟಿ ಮತ್ತು ತಯಾರಿಕೆಯಂತಹ ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗಿದೆ. ಯೋಜನೆ ಪರಿಸರಕ್ಕೆ ಮಾರಕ ಎಂದು ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಇನ್ನೂ ಇಲ್ಲಿ ಒಂದು ಸಿಗ್ನಲ್ ದಾಟಬೇಕು ಅಂದ್ರೆ ಕನಿಷ್ಠ 3 ನಿಮಿಷ ಕಾಯಬೇಕು. ನಾಲ್ಕು ಭಾಗದಲ್ಲೂ ವಾಹನಗಳ ಓಡಾಟ ಇರುವ ಕಾರಣ ವಾಹನ ಸವಾರರು ಸುಸ್ತಾಗಿದ್ದಾರೆ. ಸ್ಥಳೀಯರು ಕೂಡಾ ಇಲ್ಲೊಂದು ಫ್ಲೈಓವರ್ ಅವಶ್ಯಕತೆ ಇದೆ. ಫ್ಲೈಓವರ್ ಬೇಡ ಅನ್ನೋರೋ ಸ್ಥಳೀಯರು ಅಲ್ಲ ಅಂತಾ ಸ್ಥಳಿಯರು ಆಕ್ರೋಶಗೊಂಡಿದ್ದಾರೆ.

ಸ್ಥಳೀಯ ಅಭಿಪ್ರಾಯ ಸಂಗ್ರಹ ಮಾಡಿರುವ ಬಿಬಿಎಂಪಿ, ಟ್ರಾಫಿಕ್ ಪೊಲೀಸರ ಸಲಹೆಯಂತೆ ಇಲ್ಲೊಂದು ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿದೆ ಆದ್ರೆ ಇದಕ್ಕೆ ಕೆಲ ಸ್ಥಳೀಯರು ವಿರೋಧ ಮಾಡ್ತಿರೋ ಕಾರಣ ಬಿಬಿಎಂಪಿ ಕೋರ್ಟ್ ಮುಖಾಂತರವೇ ಅನುಮತಿ ಪಡೆದುಕೊಂಡು ಯೋಜನೆ ರೂಪಿಸಲು ಹೊರಟಿದೆ. ಟ್ರಾಫಿಕ್ ದೃಷ್ಟಿಯಿಂದ ಇಲ್ಲೊಂದು ಫ್ಲೈಓವರ್ ಅವಶ್ಯಕತೆಯಿದೆ. ಆದ್ರೆ ಫ್ಲೈಓವರ್ ನಿರ್ಮಾಣದಿಂದ ಮರಗಳು ನಾಶವಾಗುತ್ತೆ ಅನ್ನೋ ಆತಂಕ ಕೆಲವರದು. ಇದರ ಜೊತೆಗೆ ಕಾಮಗಾರಿ ವಿಳಂಬ ಮಾಡುವ ಆತಂಕ ಕೂಡಾ ಇದೆ ಸಧ್ಯ ಬಿಬಿಎಂಪಿ ಫ್ಲೈಓವರ್ ನಿರ್ಮಾಣದ ಯೋಜನೆಯಿಂದ ಹಿಂದೆ ಸರಿಯುವ ಯಾವುದೇ ಲಕ್ಷಣಗಳು ಇಲ್ಲ.

ಇದನ್ನೂ ಓದಿ: ಸ್ಯಾಂಕಿ ರಸ್ತೆ ಅಗಲೀಕರಣ, ಬಾಷ್ಯಂ ವೃತ್ತದಲ್ಲಿ ನಿರ್ಮಾಣವಾಗಲಿದೆ ಮೇಲ್ಸೇತುವೆ, ಜನರು ಕೇಳುವ ಪ್ರಶ್ನೆಗೆ ಸರ್ಕಾರದ ಉತ್ತರ ಏನು?

ಸ್ಯಾಂಕಿ ಕೆರೆ ಫ್ಲೈಓವರ್ ನಿರ್ಮಾಣ ಟೆಂಡರ್​ನಲ್ಲಿ ಕೇವಲ ಇಬ್ಬರು ಬಿಡ್ಡರ್​ಗಳು ಭಾಗಿ

ಇನ್ನು ಮತ್ತೊಂದೆಡೆ ಸ್ಯಾಂಕಿ ಟ್ಯಾಂಕ್ ರಸ್ತೆಯ ಉದ್ದಕ್ಕೂ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ನಡೆದ ಟೆಂಡರ್‌ಗಳಲ್ಲಿ ಕೇವಲ ಇಬ್ಬರು ಬಿಡ್‌ದಾರರು ಮಾತ್ರ ಆಸಕ್ತಿ ತೋರಿಸಿದ್ದಾರೆ. ಬೆಂಗಳೂರು ಮೂಲದ ನಿರ್ಮಾಣ ಸಂಸ್ಥೆಯಾದ PJB ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಹೈದರಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ BSCPL ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಎರಡು ಕಂಪನಿಗಳು ಮಾತ್ರ ಭಾಗಿಯಾಗಿವೆ. ಇನ್ನು ಈ ಸಂಸ್ಥೆಗಳು ಬಿಬಿಎಂಪಿಯಿಂದ ಹಲವಾರು ಯೋಜನೆಗಳನ್ನು ಪಡೆದುಕೊಂಡಿವೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್, ನಾಗರಿಕ ಸಂಸ್ಥೆಯು ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರದೊಂದಿಗೆ (ಬಿಎಂಎಲ್‌ಟಿಎ) ಯೋಜನೆಯ ವಿವರಗಳನ್ನು ಹಂಚಿಕೊಂಡಿದೆ. ನಗರದಲ್ಲಿ ಕೈಗೊಳ್ಳುವ ಪ್ರತಿಯೊಂದು ಹೊಸ ಚಲನಶೀಲ ಯೋಜನೆಗೆ ಹಸಿರು ನಿಶಾನೆ ಅತ್ಯಗತ್ಯ. “ಹೌದು, ಯೋಜನೆಗೆ ವಿರೋಧವಿದೆ ಮತ್ತು ಮೇಲ್ಸೇತುವೆಯನ್ನು ಬಯಸುವವರೂ ಇದ್ದಾರೆ. ತಾಂತ್ರಿಕವಾಗಿ ಈ ಯೋಜನೆಯ ಅಗತ್ಯವಿದ್ದು, ಮುಂದೆ ಸಾಗುತ್ತೇವೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:09 am, Tue, 31 January 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ