ಸ್ಯಾಂಕಿ ರಸ್ತೆ ಅಗಲೀಕರಣ, ಬಾಷ್ಯಂ ವೃತ್ತದಲ್ಲಿ ನಿರ್ಮಾಣವಾಗಲಿದೆ ಮೇಲ್ಸೇತುವೆ, ಜನರು ಕೇಳುವ ಪ್ರಶ್ನೆಗೆ ಸರ್ಕಾರದ ಉತ್ತರ ಏನು?
ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸ್ಯಾಂಕಿ ಬಂಡ್ ರಸ್ತೆ ಅಗಲೀಕರಣಕ್ಕೆ ಬಾಷ್ಯಂ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಿಸಲು ಬಿ.ಬಿ.ಎಂ.ಪಿ ಇತ್ತೀಚಿಗೆ ಟೆಂಡರ್ ಆರಂಭಿಸಿದೆ. ಈ ಯೋಜನೆಯ ಕುರಿತು ಸಾಮಾನ್ಯವಾಗಿ ಕೇಳಲಾಗುವ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.
ಬೆಂಗಳೂರು: ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಸ್ಯಾಂಕಿ ಬಂಡ್ ರಸ್ತೆ (Sankey Road) ಅಗಲೀಕರಣಕ್ಕೆ ಬಾಷ್ಯಂ ವೃತ್ತದಲ್ಲಿ ( Bashyam Circle) ಮೇಲ್ಸೇತುವೆ ನಿರ್ಮಿಸಲು ಬಿ.ಬಿ.ಎಂ.ಪಿ ಇತ್ತೀಚಿಗೆ ಟೆಂಡರ್ ಆರಂಭಿಸಿದೆ. ಈ ಯೋಜನೆಯ ಕುರಿತು ಸಾಮಾನ್ಯವಾಗಿ ಕೇಳಲಾಗುವ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಉತ್ತಮ ಗುಣಮಟ್ಟದ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಲ್ಲಿ ಬಿ.ಬಿ.ಎಂ.ಪಿ ಯ ಉತ್ತಮ ದಾಖಲೆಗಳಿಲ್ಲ. ಶಿವಾನಂದ ಮೇಲ್ಸೇತುವೆಯ ಅನಾಹುತ ಇಂದಿಗೂ ಎಲ್ಲರ ಮನಸ್ಸಿನಲ್ಲಿದೆ ಫ್ಲೆ ಓವರ್ ತೆರೆದು ಒಂದು ವಾರದೊಳಗೆ ಅದನ್ನು ಬಿ.ಬಿ.ಎಂ.ಪಿ ಮುಚ್ಚಬೇಕಿತ್ತು. ಅದೇ ರೀತಿ ಗೊರಗುಂಟೆಪಾಳ್ಯ, ಪೀಣ್ಯ ಮೇಲ್ಸೇತುವೆಯು ರಚನಾತ್ಮಕ ಸಮಸ್ಯೆಯಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು. ಈಜಿಪುರ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ 5 ವರ್ಷಗಳ ಬಳಿಕ ಬಿಬಿಎಂಪಿ ಹೊಸದಾಗಿ ಟೆಂಡರ್ ಕರೆದಿದೆ. ನಿರ್ಮಾಣವು ಧೂಳಿನ ಮಾಲಿನ್ಯ ಸೇರಿದಂತೆ ಅಪಾರ ಪರಿಸರ ಹಾನಿಯನ್ನು ಉಂಟುಮಾಡಿತು. ನಿರ್ಮಾಣದ ಅವಧಿಯಲ್ಲಿ ಸಂಚಾರ ವ್ಯತ್ಯಯಗಳು, ಪ್ರಯಾಣದ ಸಮಯ ಮತ್ತು ವಾಯು ಮಾಲಿನ್ಯ ಹೆಚ್ಚಾಯಿತು.
ಸ್ಯಾಂಕಿ ಟ್ಯಾಂಕ್ ಈ ಪ್ರದೇಶದಲ್ಲಿ ಅತಿದೊಡ್ಡ ಕೆರೆಯಾಗಿದೆ. ಕೆರೆಯ ಸುತ್ತಲಿನ ಮಾರ್ಗ ಮತ್ತು ಉದ್ಯಾನವನವು ಹತ್ತಿರದ ಪ್ರದೇಶಗಳ ನಿವಾಸಿಗಳಿಗೆ ಪ್ರಮುಖ ಮನರಂಜನಾ ಸ್ಥಳವಾಗಿದೆ. ಕಳೆದ ಹಲವು ವರ್ಷಗಳಿಂದ ಕೆರೆಯು 30 ಅಡಿ ವಾಕಿಂಗ್ ಪಾತ್ ಜೊತೆಗೆ 12 ಅಡಿ ಅಗಲದ ಜಾಗಿಂಗ್ ಪಾತ್ ಸೇರಿದಂತೆ ತಡೆರಹಿತ ನಿರ್ಮಾಣವನ್ನು ಕಂಡಿದೆ. ಇಷ್ಟೆಲ್ಲ ಕಾಮಕ್ರೀಟ್ ಸೇರ್ಪಡೆಯಾಗಿ ಕೆರೆ ನಿರ್ಮಾಣವಾಗಿದೆ. ಇದು ಪಕ್ಷಿಗಳ ಜೀವನಕ್ಕೆ ಕಡಿಮೆ ಸ್ನೇಹಪರವಾಗಿದೆ. ಅಧಿಕಾರಿಗಳು ಟ್ಯಾಂಕ್‌ನಲ್ಲಿರುವ ದ್ವೀಪವನ್ನು ತೆಗೆದು ಹಾಕಿದ ನಂತರ ಬಹಳಷ್ಟು ವಲಸೆ ಪಕ್ಷಿಗಳು ಭೇಟಿ ನೀಡುವುದನ್ನು ನಿಲ್ಲಿಸಿವೆ. ಬೆಂಗಳೂರಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಜೋಶಿಮಠದಲ್ಲಿ ನಡೆಯುತ್ತಿರುವ ದುರಂತ ವೆರಡೂ ಸಮರ್ಥನೀಯವಲ್ಲದ ಅಭಿವೃದ್ಧಿಯ ಫಲಿತಾಂಶವಾಗಿದೆ.
ಕಂಟೋನ್ಮೆಂಟ್ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸಲು ಸ್ಯಾಂಕಿ ಟ್ಯಾಂಕ್‌ನ್ನು 1882ರಲ್ಲಿ ನಿರ್ಮಿಸಲಾಯಿತು. ಕಳೆದ ವರ್ಷ ಸ್ಯಾಂಕಿ ಬಂಡ್ ರಸ್ತೆಯ ಕೆಲವು ಭಾಗಗಳು ಹಲವು ಬಾರಿ ಗುಂಡಿ ಬಿದ್ದಿದ್ದರಿಂದ ರಸ್ತೆ ಹಾಳಾಗಿ, ತಾತ್ಕಾಲಿಕವಾಗಿ ರಸ್ತೆ ಮುಚ್ಚಲಾಗಿತ್ತು. ರಸ್ತೆ ಅಗಲೀಕರಣ ಯೋಜನೆಯ ಪುನಶ್ಚೇತನದಿಂದ ಮತ್ತೆ ಬಂದ್‌ನ ಸ್ಥಿರತೆ ಬಗ್ಗೆ ಆತಂಕ ಮೂಡಿದೆ. ಇದು ಊಹೆಗೂ ನಿಲುಕದ ಅನಾಹುತವಾಗಿ ಪರಿಣಮಿಸಬಹುದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆಗಳನ್ನು ಅಗಲಗೊಳಿಸುವುದು ಮತ್ತು ದಟ್ಟಣೆಯ ವೇಗವನ್ನು ಹೆಚ್ಚಿಸುವುದರಿಂದ ಪಾದಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಹೆಚ್ಚು ಅಪಾಯಕಾರಿಯಾಗಿದೆ. ಈ ಭಾಗದ ಶಾಲೆಗಳಿಗೆ ಹೋಗಲು ಮಕ್ಕಳು ರಸ್ತೆ ದಾಟಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಯೋಜನೆಯು ಪ್ರಾರಂಭವಾದರೆ ಫುಟ್‌ಬಾತ್‌ಗಳಾದರೂ ಉಳಿಯುತ್ತದೆಯೇ ಎಂಬುದನ್ನು ನೋಡಬೇಕಿದೆ.
ಇದನ್ನು ಓದಿ; ಬೆಂ-ಮೈಸೂರು ದಶಪಥ ರಸ್ತೆ ರೆಡಿಯಾಯ್ತು, ಆದ್ರೆ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ 8 ವರ್ಷ ಕಳೆದರೂ ಮುಗಿದಿಲ್ಲ
ಸಮಗ್ರ ಮೊಬಿಲಿಟಿ ಯೋಜನೆಯನ್ನು 2010 ರಲ್ಲಿ ಸಿದ್ಧಪಡಿಸಲಾಯಿತು. ಮತ್ತು ಇದು ಚಲನಶೀಲತೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳಿಗೆ ಮಾಸ್ಟರ್ ಪ್ಲಾನ್ ಆಗಿರುತ್ತದೆ. ಈ ಯೋಜನೆಯಲ್ಲಿ ಉಲ್ಲೇಖಿಸಲಾದ ರಸ್ತೆ ವಿಸ್ತರಣೆ ಯೋಜನೆಗಳ ಪಟ್ಟಿಯು ಸ್ಯಾಂಕಿ ರಸ್ತೆಯನ್ನು ಒಳಗೊಂಡಿಲ್ಲ. ಈಗ BMLTA ಮಸೂದೆಯು 2022ರ ಕೊನೆಯಲ್ಲಿ ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟಿದೆ. ಕರ್ನಾಟಕ ಸರ್ಕಾರವು ತ್ವರಿತವಾಗಿ BMLTAನ್ನು ರಚಿಸಬೇಕು ಮತ್ತು ಎಲ್ಲಾ ಸಾರಿಗೆ ಸಂಬಂಧಿತ ಅಭಿವೃದ್ಧಿಯನ್ನು ಯೋಜಿಸಲು, ಸಮನ್ವಯಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅವಕಾಶ ಮಾಡಿಕೊಡಬೇಕು. ಈ ಯೋಜನೆಯು ಕೆರೆಗಳ ಬಳಿ ನಿರ್ಮಾಣವನ್ನು ನಿರ್ಬಂಧಿಸುವ ಅನೇಕ ಅಸ್ತಿತ್ವದಲ್ಲಿರುವ ನಿಯಮಗಳಿಗೆ ವಿರುದ್ಧವಾಗಿ ತೋರುತ್ತದೆ. ಉದಾಹರಣೆಗೆ NGT ತೀರ್ಪು ಕೆರೆಯ ಗಡಿಯಿಂದ 75 ಮೀಟರ್ ಒಳಗೆ ನಿರ್ಮಾಣವನ್ನು ನಿಷೇಧಿಸುತ್ತದೆ.
ಈ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸಮಲೋಚನೆಗೆ ಸಂಪೂರ್ಣ ಅನುಪಸ್ಥಿತಿಯಿದೆ. ಈ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಅದರ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನವನ್ನು ಬಿ.ಬಿ.ಎಂ.ಪಿ ಮಾಡಿಲ್ಲ. ಹಾಗೂ ಸಂಬಂಧಪಟ್ಟ ನಾಗರಿಕರಿಗೆ ಅಧ್ಯಯನ ಮಾಡಲು ಮತ್ತು ತಯಾರಿಸಲು ಡಿಪಿಆರ್ ಲಭ್ಯವಿಲ್ಲ. ಬೆಂಗಳೂರಿನ ಜನಸಂಖ್ಯೆಯು ಪ್ರತಿ 20 ವರ್ಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ. ಖಾಸಗಿ ವಾಹನಗಳ ಸಂಖ್ಯೆ ಇನ್ನೂ ವೇಗವಾಗಿ ಬೆಳೆಯುತ್ತಿದೆ. ಸಾರ್ವಜನಿಕ ಸಾರಿಗೆ ಮಾತ್ರ ನಾಗರಿಕರಿಗೆ ಸುಸ್ಥಿರ ಪರಿಹಾರವಾಗಿದೆ. ಎಲ್ಲಾ ಯಶಸ್ವಿ ನಗರಗಳು ನಾಗರಿಕರಿಗೆ ರೈಲು ಮೆಟ್ರೋ ಸೇರಿದಂತೆ ಸಮೂಹ ಸಾರಿಗೆ ಆಯ್ಕೆಯನ್ನು ಒದಗಿಸುತ್ತವೆ. ಬೆಂಗಳೂರು ಈ ಎಲ್ಲಾ ವಿಧಾನದಲ್ಲಿ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದರೂ ಹೆಚ್ಚಿನ ಹಣ ಮತ್ತು ಗಮನ ಮೆಟ್ರೋ ರೈಲಿನ ಕಡೆ ಹೋಗುತ್ತಿದೆ.
ನಗರವು ಪ್ರತಿದಿನ ಸರಿಸುಮಾರು 100 ರಿಂದ 110 ಲಕ್ಷ ಟ್ರಿಪ್‌ಗಳಿಗೆ ಸಾಕ್ಷಿಯಾಗಿದೆ, ಅದರಲ್ಲಿ 35 ರಿಂದ 47 ಲಕ್ಷ ಟ್ರಿಪ್‌ಗಳು ಬಿ.ಎಂ.ಟಿ.ಸಿ ಬಸ್‌ಗಳಲ್ಲಿವೆ. 4ರಿಂದ 4.5ಲಕ್ಷ ಟ್ರಪ್‌ಗಳು ಮೆಟ್ರೋದಲ್ಲಿ ಸುಮಾರು 1.5 ರಿಂದ 2 ಲಕ್ಷ ಟ್ರಿಪ್‌ಗಳು ಉಪನಗರ ರೈಲುಗಳಲ್ಲಿವೆ. ( ಬಿ.ಪಿ.ಎ.ಸಿ ಸಸ್ಟೆನೆಬಲ್ ಮೊಬಿಲಿಟಿ ವರದಿ ಪ್ರಕಾರ) ಬಿ.ಎಮ್.ಟಿ.ಸಿ ಬೆಂಗಳೂರಿನ ಪ್ರಮುಖ ಸಂಚಾರ ವ್ಯವಸ್ಥೆಯಾಗಿದ್ದು, 30 ರಿಂದ 40% ಪ್ರಯಣಿಕರು ಇದರಲ್ಲೇ ಪ್ರಯಾಣಿಸುತ್ತಾರೆ. ಬಿ.ಎಂ.ಟಿ.ಸಿಯಲ್ಲಿ ರಾಜ್ಯ ಸರ್ಕಾರವು ಸಾಕಷ್ಟು ಹೂಡಿಕೆಯನ್ನು ಮಾಡಿಲ್ಲ. ಕೆಲವು ವರ್ಷಗಳ ಹಿಂದೆ ಮುಖ್ಯಮಂತ್ರಿಗಳು ಬಿ.ಎಂ.ಟಿ.ಸಿಗೆ 3000 ಬಸ್‌ಗಳನ್ನು ಸೇರಿಸುವ ಭರವಸೆಯನ್ನು ನೀಡಿದ್ದರು.
ಆದರೆ ಹತ್ತು ವರ್ಷಗಳಿಂದಲೂ 6500 ಬಸ್‌ಗಳು ಮಾತ್ರ ಇವೆ. ಕಳೆದ 20 ವರ್ಷಗಳಲ್ಲಿ ಬೆಂಗಳೂರಿನ ಸಾರಿಗೆ ಆಯ್ಕೆಗಳಿಗೆ ಮೆಟ್ರೋ ರೈಲು ಮಾತ್ರ ಸೇರ್ಪಡೆಯಾಗಿದೆ. ಮೆಟ್ರೋವು ಟ್ರಾಫಿಕ್ ಫ್ರಿ ವೇಗದ ಮತ್ತು ಶುದ್ಧ ಸಾರಿಗೆ ವ್ಯಸಸ್ಥೆಯನ್ನು ಒದಗಿಸುತ್ತದೆ ಆದರೆ ವೆಚ್ಚದ ದೃಷ್ಟಿಯಿಂದ ಇದು ದುಬಾರಿಯಾಗಿದೆ. ಬೆಂಗಳೂರು ಗಮನಾರ್ಹ ಪ್ರಮಾಣದ ರೈಲ್ವೆ ಮೂಲಸೌಕರ್ಯವನ್ನು ಹೊಂದಿದೆ. ಅನೇಕ ಸರ್ಕಾರಗಳು ಉಪನಗರ ರೈಲು ಮಾರ್ಗವನ್ನು ನಿರ್ಮಿಸಲು ಭರವಸೆ ನೀಡಿವೆ. ಹಲವು ವರ್ಷಗಳಾದರೂ ಅದು ಭರವಸೆಯಾಗಿಯೇ ಉಳಿದಿದೆ. ಇತ್ತೀಚಿನ ಅಸೆಂಬ್ಲಿ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸುವುದು ಃಒಐಖಿಂ ಒಂದು ಸಕರಾತ್ಮಕ ಹೆಜ್ಜೆಯಾಗಿದೆ. ಸರ್ಕಾರವು ತ್ವರಿತವಾಗಿ BMLTAನ್ನು ಎಲ್ಲಾ ನಗರ ಚಲನಶೀಲತೆಗಾಗಿ ಏಕೈಕ ಪ್ರಾಧಿಕಾರಕವಾಗಿ ಸ್ಥಾಪಿಸಬೇಕು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:23 pm, Fri, 20 January 23