AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NIMBUS app: ಇದೇ ಮಾಸಾಂತ್ಯಕ್ಕೆ ಬಿಎಂಟಿಸಿ ನಿಮ್ಮ ಬಸ್ ಆ್ಯಪ್ ಬಿಡುಗಡೆ ಸಾಧ್ಯತೆ

BMTC: ಎಲೆಕ್ಟ್ರಿಕ್ ಬಸ್​ಗಳೂ ಸೇರಿ ಯಾವುದೇ ಹೊಸ ಬಸ್​ಗಳು ಬಿಎಂಟಿಸಿಗೆ ಸೇರ್ಪಡೆಯಾದಾಗ ಈ ಆ್ಯಪ್​ನ ಮಾಹಿತಿಯೂ ಅಪ್​ಡೇಟ್ ಆಗಲಿದೆ

NIMBUS app: ಇದೇ ಮಾಸಾಂತ್ಯಕ್ಕೆ ಬಿಎಂಟಿಸಿ ನಿಮ್ಮ ಬಸ್ ಆ್ಯಪ್ ಬಿಡುಗಡೆ ಸಾಧ್ಯತೆ
ಬಿಎಂಟಿಸಿ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 27, 2023 | 3:12 PM

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bengaluru Metropolitan Transport Corporation – BMTC) ಬಿಎಂಟಿಸಿ ಬಹು ನಿರೀಕ್ಷಿತ ನಿಮ್ಮ ​ಬಸ್ ಆ್ಯಪ್ (NIMBUS App) ಇದೇ ಮಾಸಾಂತ್ಯಕ್ಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಐಒಸ್ ಮತ್ತು ಆಂಡ್ರಾಯ್ಡ್​ ಪ್ಲಾಟ್​ಫಾರ್ಮ್​ಗಳಲ್ಲಿ ಶೀಘ್ರವೇ ಆ್ಯಪ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಆ್ಯಪ್ ಬಿಡುಗಡೆಗೆಂದು ನಿಗದಿಯಾಗಿದ್ದ ಹಲವು ಗಡುವುಗಳನ್ನು ಬಿಎಂಟಿಸಿ ಮೀರಿತ್ತು. ಪ್ರಯಾಣಿಕರ ಸುಗಮ ಸಂಚಾರಕ್ಕೆ ಈ ಆ್ಯಪ್ ನೆರವಾಗುವ ನಿರೀಕ್ಷೆಯಿದೆ.

ನಿಮ್ಮ​ಬಸ್ ಆ್ಯಪ್​ನಲ್ಲಿ ಬಿಎಂಟಿಸಿ ಬಸ್​ಗಳ ಕ್ಷಣಕ್ಷಣದ ಸಂಚಾರ ವಿವರ (Real-time tracking) ಲಭ್ಯವಾಗಲಿದೆ. ಅದರ ಜೊತೆಗೆ ತುರ್ತು ಪರಿಸ್ಥಿತಿಯ ವೇಳೆ ಗಮನ ಸೆಳೆಯಲು ಎಸ್​ಒಎಸ್ (SOS) ಎಚ್ಚರಿಕೆಯ ಸೌಲಭ್ಯವೂ ಲಭ್ಯವಿದೆ. ಈ ಮೊದಲು ಡಿಸೆಂಬರ್ 13ಕ್ಕೆ ಆ್ಯಪ್ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಕೊನೆಯ ಕ್ಷಣದಲ್ಲಿ ಒಂದಿಷ್ಟು ಸಮಸ್ಯೆಗಳು (ಬಗ್) ಕಾಣಿಸಿಕೊಂಡಿದ್ದರಿಂದ ನಂತರ ಡಿಸೆಂಬರ್ 23ಕ್ಕೆ ಮುಂದೂಡಲಾಯಿತು. ಆದರೆ ಅಂದೂ ಸಹ ಲಾಂಚ್ ಮಾಡಲು ಸಾಧ್ಯವಾಗಲಿಲ್ಲ.

ಇದು ಅತ್ಯಂತ ಸಂಕೀರ್ಣ ಆ್ಯಪ್. ಇದರಲ್ಲಿ ಪ್ಲಾನಿಂಗ್, ಶೆಡ್ಯೂಲಿಂಗ್, ಡಿಪೊ ಮ್ಯಾನೇಜ್​ಮೆಂಟ್ ಮತ್ತಿತರ ಫೀಚರ್​ಗಳನ್ನು ಕೊಡಬೇಕಿದೆ. ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮೊದಲು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದೇವೆ. ಆ್ಯಪ್​ನ ಪ್ಲಾನಿಂಗ್ ಮತ್ತು ಶೆಡ್ಯೂಲಿಂಗ್ ವಿಭಾಗದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಬಸ್​ ಸೇವೆಗಳು ಪ್ರಯಾಣಿಕರ ಅಗತ್ಯಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಆ್ಯಪ್ ಪ್ರಯತ್ನಿಸುತ್ತಿದೆ. ಈ ಮೂಲಕ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಈ ಆ್ಯಪ್​ ಅನ್ನು ಪ್ರಸ್ತುತ 30-40 ಬಳಕೆದಾರರು ಪ್ರಾಯೋಗಿಕವಾಗಿ ಪರಿಶೀಲಿಸುತ್ತಿದ್ದಾರೆ. ಬಸ್​ ನಂಬರ್ ಮತ್ತು ಬಸ್​ಸ್ಟಾಪ್​ಗಳ ವಿಚಾರದಲ್ಲಿ ಹಲವು ಲೋಪಗಳು ಇರುವುದನ್ನು ಅವರು ಪತ್ತೆ ಮಾಡಿದ್ದಾರೆ. ಈ ಆ್ಯಪ್ ಪ್ರಸ್ತುತ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ. ತಮ್ಮ ಫೋನ್​ ನಂಬರ್ ನಮೂದಿಸಿ, ಒಟಿಪಿ ಪಡೆದುಕೊಳ್ಳುವ ಮೂಲಕ ಈ ಆ್ಯಪ್​ ಅನ್ನು ಬಳಕೆದಾರರು ಬಳಸಲು ಸಾಧ್ಯವಿದೆ.

ಬಿಎಂಟಿಸಿಯ 6,802 ಬಸ್​ಗಳ ಪೈಕಿ 5,000 ಬಸ್​ಗಳ ಕ್ಷಣಕ್ಷಣದ ವಿವರ ಮಾತ್ರ ಈ ಆ್ಯಪ್​ ಮೂಲಕ ಲಭ್ಯವಾಗಲಿದೆ. ಎಲೆಕ್ಟ್ರಿಕ್ ಬಸ್​ಗಳೂ ಸೇರಿ ಯಾವುದೇ ಹೊಸ ಬಸ್​ಗಳು ನಿಗಮಕ್ಕೆ ಸೇರ್ಪಡೆಯಾದಾಗ ಈ ಆ್ಯಪ್​ನ ಮಾಹಿತಿಯೂ ಅಪ್​ಡೇಟ್ ಆಗಲಿದೆ ಎಂದು ಬಿಎಂಟಿಸಿ ತಾಂತ್ರಿಕ ವಿಭಾಗದ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ‘ಇಂಡಿಯನ್ ಎಕ್ಸ್​ಪ್ರೆಸ್’ ಜಾಲತಾಣವು ವರದಿ ಮಾಡಿದೆ.

ಇದನ್ನೂ ಓದಿ: Suburban Railway: ಬೆಂಗಳೂರು ಉಪನಗರ ರೈಲು ಯೋಜನೆಗೆ ಕೊನೆಗೂ ಸಿಕ್ಕಿತು ವೇಗ; 4ನೇ ಕಾರಿಡಾರ್ ಕಾಮಗಾರಿಗೆ ಟೆಂಡರ್

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Fri, 27 January 23

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ