AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ತಂಗಡಿಯಲ್ಲಿ ಬೆತ್ತಲೆ ವಿಡಿಯೋ ಕಾಲ್ ಗೆ ಬಿತ್ತು ಹೆಣ! ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಅಪರಿಚಿತಳ ಮೊಬೈಲ್ ನಲ್ಲಿ ಇವರ ಮುಖ ಸೆರೆಯಾಗಿರುತ್ತೆ. ಅದರ ಸ್ಕ್ರೀನ್ ಶಾಟ್ ಮತ್ತು ರೆಕಾರ್ಡ್ ಮಾಡಿಕೊಂಡು ಅದನ್ನೆ ದಾಳವಾಗಿ ಉಪಯೋಗಿಸೋದು ಈ ತಂಡದ ಪ್ಲಾನ್.

ಬೆಳ್ತಂಗಡಿಯಲ್ಲಿ ಬೆತ್ತಲೆ ವಿಡಿಯೋ ಕಾಲ್ ಗೆ ಬಿತ್ತು ಹೆಣ! ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಬೆಳ್ತಂಗಡಿಯಲ್ಲಿ ಬೆತ್ತಲೆ ವಿಡಿಯೋ ಕಾಲ್ ಗೆ ಬಿತ್ತು ಹೆಣ
TV9 Web
| Edited By: |

Updated on: Jan 31, 2023 | 5:27 PM

Share

ಕರಾವಳಿಯಲ್ಲಿ ವ್ಯವಸ್ಥಿತವಾಗಿ ಬ್ಲಾಕ್ ಮೇಲ್ (blackmail) ಮಾಡುವ ಜಾಲ ಬೀಡುಬಿಟ್ಟಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರೇ ಇವರ ಟಾರ್ಗೆಟ್. ಆ ಗ್ಯಾಂಗ್​ನ ಪೈಕಿ ಯಾವುದಾದರೂ ಸುಂದರ ಯುವತಿಯ ಅಂಗಾಂಗ ನೋಡಿ ಜೊಲ್ಲು ಸುರಿಸಿದ್ರೆ… ನಿಮ್ಮ ಜೇಬಿಗೆ ಕತ್ತರಿ ಬಿತ್ತು ಅಂತಾನೆ ಅರ್ಥ. ಇದೇ ಗ್ಯಾಂಗ್ ನಿಂದಾಗಿ ಅಮಾನಯಕ ಯುವಕನೊಬ್ಬನ ಪ್ರಾಣ ಹೋಗಿದೆ (suicide). ಇದೇನು ಸ್ಟೋರಿ. ನೀವೆ ನೋಡಿ. ಮಗನನ್ನು ಕಳೆದುಕೊಂಡು ಗೋಳಾಡುತ್ತಿರೋ ಪೋಷಕರು. ಮುಗ್ದನೊಬ್ಬನ ಸಾವಿನಲ್ಲಿ ಕಂಬಿನಿ ಮಿಡಿಯುತ್ತಿರೋ ಇಡೀ ಗ್ರಾಮಸ್ಥರು ಸ್ನೇಹಿತರು ಬಂಧು ಬಳಗ. ಹೌದು ಅಲ್ಲಿ ಹದಿಹರೆಯದ ಯುವಕನೊಬ್ಬ ಅನ್ಯಾಯವಾಗಿ ಸಾವಿಗೀಡಾಗಿದ್ದ. ಮೃತಪಟ್ಟವನ ಹೆಸರು ಹರ್ಷಿತ್. 19 ವರ್ಷ ವಯಸ್ಸು. ದಕ್ಷಿಣ ಕನ್ನಡ ಜಿಲ್ಲೆ (Dakshina Kannada) ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ನಿವಾಸಿ. ಬೆಳ್ತಂಗಡಿ (Belthangady) ಗುರುದೇವ ಕಾಲೇಜ್‌ ನಲ್ಲಿ 2 ನೇ ವರ್ಷದ ಬಿ.ಕಾಂ. ಪದವಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ.

ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸುಮಾರು 15 ದಿನಗಳ ಹಿಂದೆ ಓರ್ವ ಅಪರಿಚಿತ ಯುವತಿಯೊಬ್ಬಳು ಹರ್ಷಿತ್ ಸಂಪರ್ಕಕ್ಕೆ ಬಂದಿದ್ದಾಳೆ. ಇನ್‌ ಸ್ಟಾಗ್ರಾಂ ಮೂಲಕ ಚಾಟಿಂಗ್‌ ಮಾಡಿಕೊಂಡಿದ್ದು, ನಂತರ ಹರ್ಷಿತ್ ಮೊಬೈಲ್‌ ಗೆ ವಿಡಿಯೋ ಕಾಲ್‌ ಮಾಡಿದ್ದಾಳೆ. 3 ಸೆಕಂಡ್ ಗಳಲ್ಲಿ ವಿಡಿಯೋ ಕಾಲ್ ನ್ನು ಹರ್ಷಿತ ಕಟ್ ಮಾಡಿದ್ದಾನೆ. ನಂತರ ಯುವಕನೊಬ್ಬ ಕರೆ ಮಾಡಿ ನಿನ್ನ ವೈಯಕ್ತಿಕ ವಿಡಿಯೋ ನನ್ನ ಬಳಿ ಇದೆ. ಇದನ್ನು ಸಾರ್ವಜನಿಕವಾಗಿ ವೈರಲ್‌ ಮಾಡುತ್ತೇನೆ. ವೈರಲ್‌ ಮಾಡಬಾರದು ಎಂದಾದರೆ ತನಗೆ 11,000 ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ.

ಹಣ ಕೊಡಲು ಜನವರಿ 23 ರವರೆಗೆ ಅವಕಾಶ ಕೊಡುವಂತೆ ಕೇಳಿದ್ದು, ಆದರೆ ಹಣ ಹೊಂದಾಣಿಕೆಯಾಗಿಲ್ಲ. ವೈಯಕ್ತಿಕ ವಿಡಿಯೋ ವನ್ನು ವೈರಲ್‌ ಮಾಡಿದರೆ ಮಾನ ಹೋಗುತ್ತದೆ ಎಂದು ಅಂಜಿದ ಹರ್ಷಿತ್, ಭಯದಿಂದ ಮೊನ್ನೆ ಭಾನುವಾರ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸೋಮವಾರ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ನಿವಾಸಿ ಯತೀಶ್ ಧರ್ಮಸ್ಥಳ ಹೇಳಿದ್ದಾರೆ.

ಇನ್ನು ಈ ಜಾಲಕ್ಕೆ ಸಿಲುಕಿದ್ದು ಹರ್ಷಿತ್ ಮಾತ್ರವಲ್ಲ. ಆತನ ಮೂವರು ಸ್ನೇಹಿತರೂ ಕೂಡ ಇದೇ ರೀತಿ ಬ್ಲಾಕ್ ಮೇಲ್ ಗೆ ಒಳಗಾಗಿದ್ರು. ಅಪರಿಚಿತ ಹುಡುಗಿ ವಿಡಿಯೋ ಕಾಲ್ ಮಾಡುತ್ತಾಳೆ. ಆಗ ಆಕೆ ಬೆತ್ತಲಾಗಿರುತ್ತಾಳೆ. ಆಕೆಯ ಮುಖ ಕಾಣುತ್ತಿರೋದಿಲ್ಲ. ವಿಡಿಯೋ ಕಾಲ್ ರಿಸೀವ್ ಮಾಡಿ ಅಲ್ಲಿ ಏನು ಕಾಣುತ್ತಿದೆ ಅಂತಾ ನೋಡುವಷ್ಟರಲ್ಲೇ ಕಾಲ್ ಕಟ್ ಆಗುತ್ತೆ.

ಅಪರಿಚಿತಳ ಮೊಬೈಲ್ ನಲ್ಲಿ ಇವರ ಮುಖ ಸೆರೆಯಾಗಿರುತ್ತೆ. ಅದರ ಸ್ಕ್ರೀನ್ ಶಾಟ್ ಮತ್ತು ರೆಕಾರ್ಡ್ ಮಾಡಿಕೊಂಡು ಅದನ್ನೆ ದಾಳವಾಗಿ ಉಪಯೋಗಿಸೋದು ಈ ತಂಡದ ಪ್ಲಾನ್. ಹೀಗೆ ಇವರಿಂದ ಮೋಸ ಹೋದವರು ಅದೆಷ್ಟೋ ಬಾರಿ ಸಾಕಷ್ಟು ಹಣವನ್ನು ಅವರ ಖಾತೆಗೆ ಹಾಕಿದ್ದಾರೆ ಎಂದು ಈ ದುರುಳರ ಬ್ಲಾಕ್ ಮೇಲ್ ಜಾಲವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ ಇಲ್ಲಿನ ಯುವಕರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜನರಿಗೆ ಇದೇ ರೀತಿ ಮೋಸವಾಗಿದೆ. ಕೆಲವರು ಹಣ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೋನ್ ನಂಬರ್ ಮತ್ತು ಅಕೌಂಟ್ ಡೀಟೇಲ್ಸ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದ್ರೆ ಈ ಕಿರಾತಕ ಬುದ್ದಿಗೆ ಒಂದು ಅಮಾಯಕ ಪ್ರಾಣ ಬಿಟ್ಟಿದ್ದು ನಿಜಕ್ಕೂ ದುರಂತ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9, ಮಂಗಳೂರು 

Follow Us
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?