ಬೆಂಗಳೂರು: ಚಾಮರಾಜಪೇಟೆಯ (Chamrajpet) ಈದ್ಗಾ ಮೈದಾನದಲ್ಲಿ (Idgah Maidan) ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೈಕೋರ್ಟ್ (High Court) ಆದೇಶ ಪಾಲಿಸುವ ಬಗ್ಗೆ ಸಭೆ ನಡೆಸಲಾಗುವುದು ಎಂದು ಬೆಂಗಳೂರಿನಲ್ಲಿ ಹೇಳಿದರು. ಚಾಮರಾಜಪೇಟೆಯ ಸರ್ವೆ ನಂಬರ್ 40 ರ ಬಗ್ಗೆ ಸರ್ಕಾರ ಸೂಕ್ತ ನಿರ್ಣಾಯ ಮಾಡಬೇಕು. ದೇಶ ಸರ್ವ ಧರ್ಮಿರ ಇರುವ ನಾಡು, ಎಲ್ಲವೂ ವಿಶ್ಲೇಷಣೆ ಆಗಿದೆ ಎಂದರು.
ಕೋರ್ಟ್ ಆದೇಶದ ಒಂದು ಲೇಟರನ್ ಸ್ಪ್ರೀಟ್ ಎಂದು ಕರೆಯುತ್ತೇವೆ. ಸಂಪೂರ್ಣವಾಗಿ ಆದೇಶ ಪರಿಪಾಲನೆ ಹೇಗೆ ಮಾಡಬೇಕು ಎಂದು ಸಭೆ ಮಾಡುತ್ತೇವೆ. ಅಡ್ವೆಕೇಟ್ ಜನರಲ್, ಕಂದಾಯ ಸಚಿವರು, ಕುಳಿತು ಮುಂದೆ ಯಾವ ರೀತಿ ಮಾಡಬೇಕು ಸಭೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶಾಂತಿ ರೀತಿಯಲ್ಲಿ ಎಲ್ಲರ ಮನದಾಳದ ಇಚ್ಚೆಗಳನ್ನು ಈಡೇರಿಸುವ ಕೆಲಸ ಆಗಬೇಕಿದೆ. ಅದನ್ನು ನಾವು ಮಾಡುತ್ತೇವೆ. ಆದೇಶ ಸಂಪೂರ್ಣ ನೋಡಿ, ಸಭೆ ಮಾಡಿ, ಅದರ ಅನುಗುಣವಾಗಿ ತೀರ್ಮಾನ ಮಾಡುತ್ತೇವೆ. ಹುಬ್ಬಳ್ಳಿ ಈದ್ಗಾ ಮೈದಾನದ ಕುರಿತು ಮಹಾನಗರಪಾಲಿಕೆಯವರು ಸರ್ವ ಪಕ್ಷದ ಕಮಿಟಿ ಮಾಡಿದ್ದಾರೆ ಆ 29 ರಂದು ನಿರ್ಧಾರ ತಿಳಿಸುತ್ತಾರೆ ಎಂದು ಮಾಹಿತಿ ನೀಡಿದರು.
ಟೈಟಲ್ ದೃಷ್ಟಿಯಿಂದ ಆ ವಿಚಾರ ಬೇರೆ, ಈ ವಿಚಾರ ಬೇರೆ. ಇಲ್ಲಿ ಕೋರ್ಟ್ ಆಜ್ಞೆ ಇದೆ, ಅಲ್ಲಿ ಸುಪ್ರೀಂ ಕೋರ್ಟ್ ಆಜ್ಞೆ ಇದೆ. ಎಲ್ಲವೂ ಗಮನಿಸಿ ಕಾನೂನು, ಕೋರ್ಟ್ ಆದೇಶ ಪರಿಪಾಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕನ್ನಡ ವಿಚಾರಕ್ಕೆ ಅನೇಕ ತೀರ್ಮಾನಗಳನ್ನು ನಾವು ಮಾಡಿದ್ದೇವೆ. ಮಾತೃಭಾಷೆಯನ್ನು ಡಿಗ್ರಿಯಲ್ಲಿ ಮತ್ತು ವೃತ್ತಿ ಶಿಕ್ಷಣದಲ್ಲಿ ಪ್ರಥಮವಾಗಿ ಅಳವಡಿಸಿದ್ದೇವೆ. ಕನ್ನಡದಲ್ಲಿ ಇಂಜಿಯನಿರಿಂಗ್ ಬರೆದಿದ್ದಾರೆ. ನಾಗಭರಣ ಅವರು ಭಾಷಾ ಸಮಗ್ರ ಅಭಿವೃದ್ಧಿ ಬಿಲ್ ಸಿದ್ಧಪಡಿಸಿದ್ದಾರೆ. ಅದನ್ನು ಮುಂದಿನ ಅಸೆಂಬ್ಲಿಯಲ್ಲಿ ಇಡುತ್ತೇನೆ. ವಿಧಾನಸಭೆಯಲ್ಲಿ ಎಷ್ಟು ಚರ್ಚೆ ಆಗುತ್ತೆ, ಬಿಡುತ್ತೆ ಅದು ಬೇರೆ ಭಾಗ. ಎಲ್ಲಾ ಸಾಹಿತ್ಯ ಆಸಕ್ತರಲ್ಲಿ ಇದು ಚರ್ಚೆ ಆಗಬೇಕು ಎಂದು ನುಡಿದರು.
ಚರ್ಚೆಗೆ ಅವಕಾಶ ಮಾಡಿಕೊಡೋಣ. ಸುಧಾರಣೆಗಳ ಬಂದರೆ ಅಳವಡಿಸಿಕೊಳ್ಳೋಣ. ನವೆಂಬರ್ 11,12,13 ರಂದು ಹಾವೇರಿಯಲ್ಲಿ ಮೂರು ದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಎಂದು ತಿಳಿಸಿದ್ದಾರೆ.
Published On - 9:10 pm, Fri, 26 August 22