ಜ್ಞಾನಭಾರತಿಯಲ್ಲಿ ಕೆಟ್ಟು ನಿಂತ ಚಾಮುಂಡಿ ಎಕ್ಸ್​​ಪ್ರೆಸ್​ ರೈಲು! ಪ್ರಯಾಣಿಕರ ಪರದಾಟ

| Updated By: sandhya thejappa

Updated on: Mar 21, 2022 | 11:19 AM

ಮೆಟ್ರೋದಲ್ಲಿ ಇಡೀ ಜನಸಮೂಹವು ನೆರೆದಿತ್ತು. ಬೆಳಿಗ್ಗೆ 9 ಗಂಟೆ ಹೊತ್ತಿಗೆ ನಾಯಂಡಹಳ್ಳಿ ಹಾಲ್ಟ್ ಬಳಿ OHE ಪೂರೈಕೆ ಸ್ಥಗಿವಾಗಿತ್ತು ಎಂದು ಹೇಳಲಾಗುತ್ತಿದೆ.

ಜ್ಞಾನಭಾರತಿಯಲ್ಲಿ ಕೆಟ್ಟು ನಿಂತ ಚಾಮುಂಡಿ ಎಕ್ಸ್​​ಪ್ರೆಸ್​ ರೈಲು! ಪ್ರಯಾಣಿಕರ ಪರದಾಟ
ಮೆಟ್ರೋ ಸ್ಟೇಷನ್​ನಲ್ಲಿ ಜನಸ್ತೋಮ
Follow us on

ಬೆಂಗಳೂರು: ಮೈಸೂರಿನಿಂದ ಹೊರಟಿದ್ದ ಚಾಮುಂಡಿ ಎಕ್ಸ್​ಪ್ರೆಸ್​ ರೈಲು (Rail) ಇಂದು ಬೆಂಗಳೂರಿನ ಜ್ಞಾನಭಾರತಿದಲ್ಲಿ ಕೆಟ್ಟು ನಿಂತಿತ್ತು. ಈ ಹಿನ್ನೆಲೆ ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನ ಕೆಳಗೆ ಇಳಿಸಲಾಗಿದ್ದು, ಪ್ರಯಾಣಿಕರು ಸ್ವಲ್ಪ ಹೊತ್ತು ತೊಂದರೆ ಎದುರಿಸಿದರು. ಮೆಜೆಸ್ಟಿಕ್ (Majestic) ತಲುಪಲು ಪ್ರಯಾಣಿಕರು ಪರದಾಡಿದರು. ಈ ವೇಳೆ ಮೆಟ್ರೋದಲ್ಲಿ ಇಡೀ ಜನಸಮೂಹವು ನೆರೆದಿತ್ತು. ಬೆಳಿಗ್ಗೆ 9 ಗಂಟೆ ಹೊತ್ತಿಗೆ ನಾಯಂಡಹಳ್ಳಿ ಹಾಲ್ಟ್ ಬಳಿ OHE ಪೂರೈಕೆಯಲ್ಲಿ ತೊಂದರೆ ಎದುರಾಗಿತ್ತು ಎಂದು ಹೇಳಲಾಗುತ್ತಿದೆ.

ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, 10 ಗಂಟೆಯಿಂದ ರೈಲು ಸಂಚಾರ ಪ್ರಾರಂಭಿಸಿದೆ.

ಮಾರ್ಚ್​ 20ರವರೆಗೆ 18 ರೈಲುಗಳ ಸಂಚಾರ ಸ್ಥಗಿತ:
ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ ಮಾಡುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ರದ್ದಾಗಿದೆ. ಮಂಗಳೂರಿನ ಪಡೀಲು ಮತ್ತು ಕುಲಶೇಖರ ರೈಲ್ವೆ ನಿಲ್ದಾಣಗಳು ನಡುವೆ ಜೋಡಿ ರೈಲು ಮಾರ್ಗ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಮಾರ್ಚ್​ 17 ರಿಂದ 20ರವರೆಗೆ 18 ರೈಲುಗಳ ಸಂಚಾರವನ್ನು ವಲಯ ರೈಲ್ವೇ ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಮಾಡಿದೆ.

ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಸೆಂಟ್ರಲ್ (ಗಾಡಿ ಸಂಖ್ಯೆ 06488/06489) ಮಧ್ಯದ ಪ್ರಯಾಣಿಕರ ವಿಶೇಷ ರೈಲು, ಮಂಗಳೂರು ಸೆಂಟ್ರಲ್ ಕಬಕ ಪುತ್ತೂರು ಪ್ರಯಾಣಿಕರ ರೈಲುಗಳು(06487/06486) ಮಾರ್ಚ್​ 17ರಿಂದ ಮಾರ್ಚ್​ 20ರವರೆಗೆ ಸಂಚರಿಸುವುದಿಲ್ಲ. ಪುಣೆ- ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು(11097/11098) ಮಾ.19ರಂದು ಮತ್ತು 21ರಂದು ರದ್ದಾಗಿದೆ. ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ(16515/16516) ಮಾ.18 ಮತ್ತು 19ರಂದು ಇರುವುದಿಲ್ಲ.

ಇದನ್ನೂ ಓದಿ

ICC: ಭಾರತ-ಶ್ರೀಲಂಕಾ ಪಂದ್ಯದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪಿಚ್ ಕಳಪೆ ಎಂದು ರೇಟಿಂಗ್ ಕೊಟ್ಟ ಐಸಿಸಿ

20 ದಿನಗಳ ಬಳಿಕ ಮಗನ ಮುಖ ನೋಡುವ ಅವಕಾಶ ಸಿಕ್ಕಿದೆ: ನವೀನ್ ನೆನೆದು ಭಾವುಕರಾದ ತಾಯಿ ವಿಜಯಲಕ್ಷ್ಮೀ

Published On - 11:07 am, Mon, 21 March 22