ಬೆಂಗಳೂರು: ನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ(Police Constable Transfer) ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಒಂದೇ ಸ್ಥಳದಲ್ಲಿ ಕನಿಷ್ಠ ಸೇವಾವಧಿ 6 ವರ್ಷದಿಂದ 5 ವರ್ಷಕ್ಕೆ ಬದಲಾಯಿಸಿ ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ. ನಗರದ ಕಮಿಷನರೇಟ್ ವ್ಯಾಪ್ತಿಯ ಕಾನ್ಸ್‌ಟೇಬಲ್ ಗಳಿಗೆ ಈ ನೂತನ ಆದೇಶ ಅನ್ವಯವಾಗಲಿದೆ. ಒಂದೇ ಕಡೆಗಳಲ್ಲಿ ಹಲವು ವರ್ಷಗಳಿಂದ ಕಾನ್ಸ್‌ಟೇಬಲ್ಸ್ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆ ಕನಿಷ್ಠ 6 ವರ್ಷದಿಂದ 5 ವರ್ಷಕ್ಕೆ ಕಡಿತಗೊಳಿಸಿ ಆದೇಶ ಹೊರಡಿಸಲಾಗಿದೆ.
ಹಾಸನ ಎಸ್ಪಿ ಸಮ್ಮುಖದಲ್ಲೇ ಕಾನ್ಸ್‌ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ, ಆಸ್ಪತ್ರೆಗೆ ದಾಖಲು
ಹಾಸನ: ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಾಸನ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಹಲ್ಲೆಯಿಂದ ಗಾಯಗೊಂಡ ಕಾನ್ಸ್‌ಟೇಬಲ್ ವೇಣುಗೋಪಾಲ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ಹಾಸನ ನಗರ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಭೇಟಿ ವೇಳೆ, ಎಸ್ಪಿ ಸಮ್ಮುಖದಲ್ಲೇ ಹಲ್ಲೆ ನಡೆದಿದೆ. ಇದನ್ನೂ ಓದಿ: Breaking: ರಾಹುಲ್ ಗಾಂಧಿ ಅವರ ವಯನಾಡ್ ಕಾಂಗ್ರೆಸ್ ಕಚೇರಿ ಧ್ವಂಸಗೊಳಿಸಿದ ಗೂಂಡಾಗಳು
ಹಾಸನ ಉಪವಿಭಾಗದ ಡಿವೈಎಸ್ಪಿ ಉದಯಭಾಸ್ಕರ್ ವಿರುದ್ದ ಹಲ್ಲೆ ಆರೋಪ ಕೇಳಿಬಂದಿದೆ. ಗುರುವಾರ ಸಂಜೆ ಹಾಸನ ನಗರ ಠಾಣೆಯಲ್ಲಿ ಘಟನೆ ನಡೆದಿದೆ. ಎಸ್ಪಿ ಠಾಣೆ ಭೇಟಿ ಬೇಳೆ, ರೈಫಲ್ ಕ್ಲೀನ್ ಮಾಡಿ ತೋರಿಸಲು ಕಾನ್ಸ್‌ಟೇಬಲ್ ವೇಣುಗೆ ಡಿವೈಎಸ್ಪಿ ಉದಯಭಾಸ್ಕರ್ ಹೇಳಿದ್ದಾರೆ. ಈ ವೇಳೆ ರೈಫಲ್ ಕ್ಲೀನ್ ಹಂತಗಳಲ್ಲಿ ವೇಣುಗೋಪಾಲ್ ತಪ್ಪು ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಡಿವೈಎಸ್ಪಿಯಿಂದ ಹಲ್ಲೆ ನಡೆದಿದೆ. ಹಲ್ಲೆಯಿಂದ ಕುಸಿದು ಬಿದ್ದಿದ್ದ ವೇಣುಗೋಪಾಲ್ ಅವರನ್ನು ತಕ್ಷಣ ಹಾಸನದ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಹಾಸನ ನಗರ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎಸ್ಪಿ ಎದುರಿನಲ್ಲೇ ಹಲ್ಲೆ ನಡೆದಿದೆ, ಕೂಡಲೆ ಎಫ್.ಐ.ಆರ್ ದಾಖಲಾಗಬೇಕು: ಹೆಚ್ ಡಿ ರೇವಣ್ಣ
ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಆಸ್ಪತ್ರೆಗೆ ತೆರಳಿ ಕಾನ್ಸ್‌ಟೇಬಲ್ ಅರೋಗ್ಯ ವಿಚಾರಿಸಿದ್ದಾರೆ. ವೇಣುಗೋಪಾಲ ನನ್ನ ಕ್ಷೇತ್ರದ ಮತದಾರ. ಅವರಿಗೆ ಕಪಾಳಕ್ಕೆ ಹೊಡೆಯವಂತಾದ್ದು ಏನಿದೆ? ಉದಯಭಾಸ್ಕರ್ ಡಿವೈಎಸ್ಪಿ ಹಲ್ಲೆ ಮಾಡಿದ್ದಾರಂತೆ. ಆತ ಅವನದೇ ಆದ ರೌಡಿಗಳ ಗ್ಯಾಂಗ್ ಇಟ್ಟು ಕೊಂಡಿದಾನೆ. ಈತನಿಗೆ ಯಾಕೆ ಹಲ್ಲೆ ಮಾಡಿದಾರೆ, ಏನಾದ್ರು ಈತ ಹಣ ಹೊಡೆದಿದ್ದಾನಾ? ಏನಾದ್ರು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ರೈಫಲ್ ಎತ್ತಿಡೊ ವಿಚಾರದಲ್ಲಿ ತಪ್ಪಾಗಿ ಮಾಡಿದ್ರೆ ಕಪಾಳಕ್ಕೆ ಹೊಡಿತಾರಾ? ಪೊಲೀಸ್ ಮ್ಯಾನ್ಯೂಯಲ್ ನಲ್ಲಿ ಇದಕ್ಕೆ ಅವಕಾಶ ಇದೆಯಾ? ಎಸ್ಪಿ ಎದುರಿನಲ್ಲೇ ಹಲ್ಲೆ ನಡೆದಿದೆ, ಕೂಡಲೆ ಎಫ್.ಐ.ಆರ್ ದಾಖಲಾಗಬೇಕು. ಈ ಹಲ್ಲೆ ಕೇಸ್ ನಲ್ಲಿ ಎಸ್ಪಿ ಹೇಳಿಕೆಯನ್ನೇ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಹಿರಿಯ ಅಧಿಕಾರಿಗಳು ಕಾನ್ಸ್‌ಟೇಬಲ್ ಗೆ ಹಲ್ಲೆ ಮಾಡಬಹುದಾ? ಈ ಬಗ್ಗೆ ಹೋಂ ಮಿನಿಸ್ಟರ್ ಹೇಳಲಿ, ಡಿಜಿ ಹೇಳಲಿ ಎಂದು ಡಿವೈಎಸ್ಪಿ ಉದಯಭಾಸ್ಕರ್ ವಿರುದ್ದ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಹೇಳೋರು ಕೇಳೋರು ಯಾರು ಇಲ್ಲಾ ಅನ್ನೊ ಹಾಗಾಗಿದೆ. ನನಗೆ ಸರ್ಕಾರದ ಪ್ರಭಾವ ಇದೆ ಎಂದು ಏನು ಬೇಕಾದರೂ ಮಾಡಬಹುದು ಅನ್ನೋ ಹಾಗಾಗಿದೆ. ಕೂಡಲೆ ಡಿವೈಎಸ್ಪಿ ಮೇಲೆ ಕೇಸ್ ದಾಖಲಿಸಿ ಅವರನ್ನು ಅಮಾನತು ಮಾಡಬೇಕು ಎಂದು ರೇವಣ್ಣ ಒತ್ತಾಯಿಸಿದರು.
ಡಿವೈಎಸ್ಪಿ ಉದಯಭಾಸ್ಕರ್ ವಿರುದ್ದ ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಇದರ ಪರಿಣಾಮ ಎಸ್ಪಿ ಎದುರಿಸಬೇಕಾಗುತ್ತೆ ಎಂದು ರೇವಣ್ಣ ಎಚ್ಚರಿಸಿದರು. ಮೊನ್ನೆ ನಮ್ಮ ಕೌನ್ಸಿಲರ್ ಪ್ರಶಾಂತ್ ಕೊಲೆ ಆರೋಪಿಗಳಿಗೆ ಬಿರಿಯಾನಿ ಕೊಟ್ಟು ಕಳಿಸಿದಾರೆ. ಕರ್ನಾಟಕ ಪೊಲೀಸ್ ಇಲಾಖೆಗೆ ಇಂತಹ ಅಧಿಕಾರಿಗಳಿಂದ ಧಕ್ಕೆಯಾಗುತ್ತಿದೆ. ಕೂಡಲೆ ಕೇಸ್ ದಾಖಲಿಸಿ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದರು.
Published On - 6:08 pm, Fri, 24 June 22