PSI Exam Scam: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ‌ ನಡೆದಿರುವ ಬಗೆಗಿನ ಸಾಕ್ಷಿ ಹೇಳುವ ಪತ್ರ ಮತ್ತು ಚಾಟಿಂಗ್ ಸ್ಕ್ರಿನ್ ಶಾಟ್ಸ್ ವೈರಲ್

| Updated By: ಆಯೇಷಾ ಬಾನು

Updated on: May 25, 2022 | 9:25 PM

ಅಭ್ಯರ್ಥಿ, ಡೀಲರ್ ಜೊತೆ ಮಾಡಿದ ಚಾಟ್ಸ್ ಸ್ಕ್ರೀನ್ ಶಾಟ್  ವೈರಲ್ ಆಗಿದೆ. ಆ ಚಾಟಿಂಗ್​ನಲ್ಲಿ ಅಭ್ಯರ್ಥಿ ಯಾರ ಮೂಲಕ ಬ್ರೋಕರ್ ಸಂಪರ್ಕ ಮಾಡಿದ್ದೆ ಅಂತಾ ಹೇಳಿದ್ದಾರೆ. ಅಲ್ಲದೇ ಎಷ್ಟು ಹಣ ಕೊಡಬೇಕು ಅನ್ನೋ ಬಗ್ಗೆ ಚಾಟಿಂಗ್ ಆಗಿದೆ.

PSI Exam Scam: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ‌ ನಡೆದಿರುವ ಬಗೆಗಿನ ಸಾಕ್ಷಿ ಹೇಳುವ ಪತ್ರ ಮತ್ತು ಚಾಟಿಂಗ್ ಸ್ಕ್ರಿನ್ ಶಾಟ್ಸ್ ವೈರಲ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: 545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ‌ ಪ್ರಕರಣಕ್ಕೆ ಸಂಬಂಧಿಸಿ ಬಗೆದಷ್ಟು ಅಕ್ರಮ ಹೊರ ಬೀಳುತ್ತಿದೆ. ಸದ್ಯ ಈಗ ಈ ಅಕ್ರಮಕ್ಕೆ ಪುಷ್ಟಿ ನೀಡುವಂತಹ ಸಾಕ್ಷಿ ಸಿಕ್ಕಿದೆ. ಸದ್ಯ ಹಣ ಕೊಟ್ಟು ಕೆಲಸ ಪಡೆದವರಿಂದ ಡಿಜಿ&ಐಜಿಪಿಗೆ ಬರೆಯಲಾಗಿದೆ ಎನ್ನಲಾದ ಪತ್ರ ಮತ್ತು ಚಾಟಿಂಗ್ ಸ್ಕ್ರಿನ್ ಶಾಟ್ಸ್ ವೈರಲ್ ಆಗಿದೆ. ಇದರ ಜೊತೆ ಯಾರಿಗೆ ಹಣ ಕೊಟ್ಟಿದ್ದೇವೆ ಅನ್ನೋ ಸಾಕ್ಷಿ ಸಹ ಸಲ್ಲಿಸಲಾಗಿದೆ. ಸದ್ಯ ನೀಡಿರುವ ಸಾಕ್ಷಿಗಳ ಪರಿಶೀಲನೆಗೆ ಸಿಐಡಿ ಮುಂದಾಗಿದೆ.

ಚಾಟಿಂಗ್ನಲ್ಲಿ ಏನೇನಿದೆ?
ಅಭ್ಯರ್ಥಿ, ಡೀಲರ್ ಜೊತೆ ಮಾಡಿದ ಚಾಟ್ಸ್ ಸ್ಕ್ರೀನ್ ಶಾಟ್  ವೈರಲ್ ಆಗಿದೆ. ಆ ಚಾಟಿಂಗ್​ನಲ್ಲಿ ಅಭ್ಯರ್ಥಿ ಯಾರ ಮೂಲಕ ಬ್ರೋಕರ್ ಸಂಪರ್ಕ ಮಾಡಿದ್ದೆ ಅಂತಾ ಹೇಳಿದ್ದಾರೆ. ಅಲ್ಲದೇ ಎಷ್ಟು ಹಣ ಕೊಡಬೇಕು ಅನ್ನೋ ಬಗ್ಗೆ ಚಾಟಿಂಗ್ ಆಗಿದೆ. ಹಣ ಹೊಂದಿಸಲು ಪ್ರಾಪರ್ಟಿ ಸೇಲ್ ಮಾಡಿರುವ ಬಗ್ಗೆ ಕೂಡ ಚರ್ಚೆ ಆಗಿದೆ. ಮೊದಲ ಕಂತು ಕೊಟ್ಟು ಎರಡನೇ ಕಂತು ಯಾವಾಗ ಅಂತಾ ಚರ್ಚೆ ಮಾಡಿದ್ದಾರೆ. ಬರೋಬ್ಬರಿ 75 ಲಕ್ಷ ಹಣ ನೀಡಿದ್ದಾಗಿ ಚಾಟಿಂಗ್ ನಲ್ಲಿ ಮಾತುಕತೆಯಾಗಿದೆ. ಎಲ್ಲಿ ಯಾವಾಗ ಯಾವ ವ್ಯಕ್ತಿ ಕೊಟ್ಟಿದ್ದೆನೆ ಅನ್ನೋ ಬಗ್ಗೆಯೂ ಚರ್ಚೆ ನಡೆದಿದೆ. ಎಕ್ಸಾಂ ರಿಸಲ್ಟ್ ಬಂದು ಸೆಲೆಕ್ಟ್ ಆದ ಬಗ್ಗೆಯೂ ಸಹ ಚಾಟಿಂಗ್ ಮಾಡಿದ್ದಾರೆ. ಬಳಿಕ ಎಕ್ಸಾಂ ಕ್ಯಾನ್ಸಲ್ ಆಗಿ ಮರು ಪರೀಕ್ಷೆ ಬಗ್ಗೆಯೂ ಚರ್ಚೆಯಾಗಿದೆ. ಮೊದಲು 50 ಲಕ್ಷ, ಎಕ್ಸಾಂ ರಿಸಲ್ಟ್ ಬಳಿಕ 25 ಲಕ್ಷ ಕೊಡುವ ಬಗ್ಗೆ ಅಭ್ಯರ್ಥಿ & ಬ್ರೋಕರ್ ಚಾಟಿಂಗ್ ಮಾಡಿರುವ ಸ್ಕ್ರೀನ್ ಶಾಟ್ಗಳು ಸಿಕ್ಕಿವೆ. ಇನ್ನು ಇಷ್ಟೆಲ್ಲಾ ಚಾಟ್ ಮಾಡಿರುವ ವ್ಯಕ್ತಿಯ ಹೆಸರು ಮಹೇಶ್ ಎನ್.ಪಿ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ. ಕೃತಿಕ್ ಎಂಬಾತ ಬ್ಲೂಟೂತ್ ಕೊಟ್ಟಿದ್ದು ಸಹ ಉಲ್ಲೇಖಿಸಲಾಗಿದೆ. ತಾನೊಬ್ಬ ಅಸಹಾಯಕ ಆಕಾಂಕ್ಷಿ ಎಂಬ ಹೆಸರಲ್ಲಿ ಡಿಜಿಐಜಿಗೆ ಪತ್ರ ಬರೆದಿರುವುದಾಗಿ ಲೆಟರ್ ವೈರಲ್ ಆಗಿದೆ. ಜನವರಿ 25, 2021 ರಿಂದ ಏಪ್ರಿಲ್ 30ರ ತನಕದ ಚಾಟಿಂಗ್ ಅಂದರೆ ಬರೋಬ್ಬರಿ 15 ದಿನಗಳ ಚಾಟಿಂಗ್ ಮಾತುಕತೆ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:25 pm, Wed, 25 May 22