AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಕವಿ ಕುವೆಂಪು ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಉಲ್ಲೇಖದ ಬಗ್ಗೆ ಸ್ಪಷ್ಟನೆ ನೀಡಿದ ಬರಗೂರು ರಾಮಚಂದ್ರಪ್ಪ

ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲಿರುವ ಕುವೆಂಪು ಕುರಿತ ಪರಿಚಯ ನನ್ನ ನೇತೃತ್ವದ ಸಮಿತಿ ಬರೆದಿದ್ದು ಎಂದು ಹೇಳಿದ್ದಾರೆ. ಆದರೆ ಈ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪಠ್ಯ ಪರಿಷ್ಕರಣೆ ವೇಳೆ ಬರೆದದ್ದಲ್ಲ.

ರಾಷ್ಟ್ರಕವಿ ಕುವೆಂಪು ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಉಲ್ಲೇಖದ ಬಗ್ಗೆ ಸ್ಪಷ್ಟನೆ ನೀಡಿದ ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ
TV9 Web
| Edited By: |

Updated on:May 25, 2022 | 6:06 PM

Share

ಬೆಂಗಳೂರು: ರಾಷ್ಟ್ರಕವಿ ಕುವೆಂಪು(Kuvempu) ಅವರನ್ನು ಪರಿಚಯಿಸುವ ವಿಚಾರದಲ್ಲಿ ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಉಲ್ಲೇಖ ಮಾಡಲಾಗಿದೆ. ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಸೇರಿರುವ ಈ ಉಲ್ಲೇಖ ಕುವೆಂಪು ಬಗ್ಗೆ ಹೀಗೆ ಬರೆದಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸದ್ಯ ಈ ಬಗ್ಗೆ ಬರಗೂರು ರಾಮಚಂದ್ರಪ್ಪ(Baraguru Ramachandrappa) ಸ್ಪಷ್ಟನೆ ನೀಡಿದ್ದಾರೆ. ಈ ಸಾಲು ತಮ್ಮ ಕಾಲದಲ್ಲಿ ಬರೆದಿದ್ದಲ್ಲ ಎಂದು ಈ ಹಿಂದಿನ‌ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿಯ ಮುಖ್ಯಸ್ಥರಾಗಿದ್ದ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲಿರುವ ಕುವೆಂಪು ಕುರಿತ ಪರಿಚಯ ನನ್ನ ನೇತೃತ್ವದ ಸಮಿತಿ ಬರೆದಿದ್ದು ಎಂದು ಹೇಳಿದ್ದಾರೆ. ಆದರೆ ಈ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪಠ್ಯ ಪರಿಷ್ಕರಣೆ ವೇಳೆ ಬರೆದದ್ದಲ್ಲ. ಕುವೆಂಪು ಅವರ ಮನುಜ‌ ಮತ, ವಿಶ್ವಪಥ ಬೆಳಕಿನಲ್ಲಿ ಸಾಗುತ್ತಿರುವವನು ನಾನು. ನಾನು ಮತ್ತು ನನ್ನಂಥವರು ಕುವೆಂಪು ಅವರ ಅಪೂರ್ವ ಸಾಧನೆಯನ್ನು ಸ್ವಲ್ಪವೂ ಕಡೆಗಣಿಸಲು ಸಾಧ್ಯವೇ ಇಲ್ಲ. ಪಠ್ಯ ಪುಸ್ತಕ ವಿಷಯದಲ್ಲಿ ಈಗ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಲು ಸಿಎಂ ಮಧ್ಯಪ್ರವೇಶಿಸಬೇಕು. ಜನರಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದು ತಮ್ಮ ನೇತೃತ್ವದ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ ಕುವೆಂಪು ಬಗ್ಗೆ ಬರೆದ ಪರಿಚಯವನ್ನು ಬರಗೂರು ರಾಮಚಂದ್ರಪ್ಪ ನೀಡಿದ್ದಾರೆ. ಇದನ್ನೂ ಓದಿ: IPL 2022: ನಾಕೌಟ್ ಪಂದ್ಯಗಳಲ್ಲಿ ಕೈ ಕೊಡುವ ಕೊಹ್ಲಿ: ಬದಲಾಗಲಿದೆಯಾ ಇತಿಹಾಸ?

ಅನೇಕರ ಪೋತ್ಸಾಹದಿಂದ ಕುವೆಂಪು ಬೆಳೆದರು ಎಂಬುದಿಲ್ಲ. ಸವಿಸ್ತಾರವಾಗಿ ಕುವೆಂಪು ಬಗ್ಗೆ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಚಯ ಮಾಡಿಕೊಟ್ಟಿದೆ. ಕುವೆಂಪು ಅವರ ರಾಮಾಯಣ ದರ್ಶನ, ನೆನಪಿನ ದೋಣಿಯಲ್ಲಿ ಸೇರಿದಂತೆ 70 ಕೃತಿ ರಚನೆ ಎಂದು ಉಲ್ಲೇಖ ಮಾಡಲಾಗಿದೆ. ಕುವೆಂಪು ಅವರಿಗೆ ಬಂದ ಎಲ್ಲ ಪ್ರಮುಖ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕುವೆಂಪು ಬಗ್ಗೆ ಬರೆದಿದ್ದು ಬರಗೂರು ಗ್ಯಾಂಗ್ ಎಂದ ಚಕ್ರತೀರ್ಥ ಪಠ್ಯದಲ್ಲಿ ಸದ್ಯ ಇರೋ ಕುವೆಂಪು ಪರಿಚಯ ಬರೆದಿದ್ದೇ ಬರಗೂರು ಗ್ಯಾಂಗ್ ಅಂತಾ ಫೇಸ್‌ಬುಕ್ ಪೋಸ್ಟ್ ಮಾಡಿರೋ ರೋಹಿತ್ ಚಕ್ರವರ್ತಿ, ಬರಗೂರು ರಾಮಚಂದ್ರಪ್ಪ ಅವ್ರೇ ಪಠ್ಯ ಪುಸ್ತಕವನ್ನ ಕುಲಗೆಡಿಸಿದ್ದಾರೆ ಅಂತಾ ಆರೋಪಿಸಿದ್ರು. ಇದನ್ನೂ ಓದಿ: 8 Years Of Modi Government: ಚಿಕ್ಕ ವಯಸ್ಸಲ್ಲೆ RSS​ ಪ್ರಚಾರಕನಾಗಿ ಸಮಾಜಮುಖಿಯಾದ ನರೇಂದ್ರ ಮೋದಿ, ಮುಂದೆ ದೇಶ ಸೇವೆಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ!

ಕುವೆಂಪು ಪಾಠವನ್ನ ತೆಗೆದಿಲ್ಲ ಎಂದು ಬರಗೂರು ತಿರುಗೇಟು ರೋಹಿತ್ ಚಕ್ರತೀರ್ಥ ಮತ್ತು ಸಚಿವರ ಸಚಿವರ ಆರೋಪಗಳಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ತಿರುಗೇಟು ಕೊಟ್ಟಿದ್ದಾರೆ. ನಾವೆಂದೂ ಕುವೆಂಪು ಅವರ ಪಾಠಗಳನ್ನ ಪುಸ್ತಕದಿಂದ ತೆಗೆದಿಲ್ಲ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ.

Published On - 6:06 pm, Wed, 25 May 22

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?