ಸರ್ಕಾರದ ವಿರುದ್ಧ ಸಿಟ್ಟಿಗೆದ್ದ ವಿಧಾನಸಭೆ ಸಚಿವಾಲಯ! ಮೇ 27ರಂದು ಸಾಮೂಹಿಕ ರಜೆ ಹಾಕಿ ಬಂದ್: ಅಸಲಿ ಕಾರಣ ಏನು?
542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ. ನಿವೃತಿಯಾದ ಅಧಿಕಾರಿ, ನೌಕರರ ಪುನರ್ ನೇಮಕಾತಿ ರದ್ದುಪಡಿಸಬೇಕು. ಸಚಿವಾಲಯ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶ ಮರುಸ್ಥಾಪಿಸಲು ಒತ್ತಾಯ ಕೇಳಿ ಬಂದಿದೆ.
ಬೆಂಗಳೂರು: ಮೇ 27ರಂದು ವಿಧಾನಸಭೆ ಸಚಿವಾಲಯ ಬಂದ್ ಮಾಡಲು ಸಚಿವಾಲಯ ನೌಕರರ ಸಂಘ ನಿರ್ಧಾರ ಮಾಡಿದ್ದು ಬಂದ್ಗೆ ಕರೆ ಕೊಟ್ಟಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 27ರಂದು ಸಾಮೂಹಿಕ ರಜೆ ಹಾಕುವ ಮೂಲಕ ಬಂದ್ಗೆ ಮುಂದಾಗಿದ್ದಾರೆ.
542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ. ನಿವೃತಿಯಾದ ಅಧಿಕಾರಿ, ನೌಕರರ ಪುನರ್ ನೇಮಕಾತಿ ರದ್ದುಪಡಿಸಬೇಕು. ಸಚಿವಾಲಯ ಅಧಿಕಾರಿಗಳು ನಿಯೋಜನೆ ಮೇರೆಗೆ ಇತರೆ ಇಲಾಖೆಗೆ ಹೋಗುವ ಅವಕಾಶ ಮರುಸ್ಥಾಪಿಸಲು ಒತ್ತಾಯ ಕೇಳಿ ಬಂದಿದೆ. ಹಾಗೂ ಎಲ್ಲಾ ಇಲಾಖೆಗಳ ಹುದ್ದೆಗಳ ಕಡಿತ ಪ್ರಸ್ತಾವನೆ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವಾಲಯ ಬಂದ್ಗೆ ನೌಕರರ ಸಂಘ ಮುಂದಾಗಿದೆ. ನೌಕರರು ಶುಕ್ರವಾರ ಸಾಮೂಹಿಕ ರಜೆ ಹಾಕುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ರಶ್ಮಿಕಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ಗೆ ರೆಡಿ; ಕನ್ನಡದಲ್ಲಿ ಮಾತ್ರ ಆಗಲ್ಲ ಬಿಡುಗಡೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:06 pm, Wed, 25 May 22