ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್: ವಾಟ್ಸ್​​ ಆ್ಯಪ್ ಚಾಟಿಂಗ್​ನಲ್ಲಿ ಸೆಟಲ್ಮೆಂಟ್ ಪ್ರಸ್ತಾಪ

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜತೆಗೆ ನಡೆಸಿದ್ದಾರೆನ್ನಲಾದ ವಾಟ್ಸ್​​ಆ್ಯಪ್ ಚಾಟಿಂಗ್ ವೈರಲ್ ಆಗಿದೆ.

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್: ವಾಟ್ಸ್​​ ಆ್ಯಪ್ ಚಾಟಿಂಗ್​ನಲ್ಲಿ ಸೆಟಲ್ಮೆಂಟ್ ಪ್ರಸ್ತಾಪ
ವೈರಲ್ ಆದ ವಾಟ್ಸ್ ಅಪ್ ಚಾಟಿಂಗ್, ಬಿಜೆಪಿ ಮುಖಂಡ ಅನಂತರಾಜು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:May 26, 2022 | 7:04 AM

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಸಾವಿನ ಪ್ರಕರಣ ದಿನಕ್ಕೊಂದು ದಿಕ್ಕಿಗೆ ತಿರುಗುತ್ತಿದೆ. ಸದ್ಯ ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜತೆಗೆ ನಡೆಸಿದ್ದಾರೆನ್ನಲಾದ ವೈರಲ್ ಆದ ವಾಟ್ಸ್​​ಆ್ಯಪ್ ಚಾಟಿಂಗ್​ನಲ್ಲಿ ಸೆಟಲ್ಮೆಂಟ್ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಅನಂತರಾಜು ಆತ್ಮಹತ್ಯೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ಯಾರ ಮಾರ್ಯಾದೆ ಕಳೆಯೋದಕ್ಕು ಸಿದ್ಧ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇದೆ. ಅದನ್ನ ಅವನ ಹೆಂಡತಿಗೆ ಕಳುಹಿಸಿದರೆ, ಅವಳೇ ಅನಂತರಾಜುನ ಸಾಯಿಸುತ್ತಾಳೆ. ಅಷ್ಟೊಂದು ಅಶ್ಲೀಲವಾಗಿದೆ ಆ ವಿಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜುನ ಮೇ 15 ರ ಒಳಗೆ ನನ್ನ ಭೇಟಿ ಮಾಡಬೇಕು.

ಇದನ್ನೂ ಓದಿ: Gold Price Today: ಬೆಂಗಳೂರು, ಮುಂಬೈ, ದೆಹಲಿಯಲ್ಲಿ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರವೂ ಹೆಚ್ಚಳ

ಸೆಟ್ಲಾಮೆಂಟ್ ಮಾಡಿಕೊಂಡು ನೆಮ್ಮದಿಯಾಗಿರಲಿ. ಇದು ರೇಖಾ ಹಾಗೂ ಮಧ್ಯವರ್ತಿಯೊಂದಿಗೆ ಮಾಡಿರೋ ವಾಟ್ಸಾಪ್ ಚಾಟ್. ಇದರ ಜೊತೆಗೆ ರೇಖಾ ಗೆಳತಿಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದ್ದು, ಇವೆಲ್ಲವನ್ನ ನೋಡಿದರೆ ಹನಿಟ್ರ್ಯಾಪ್ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಈ ಹಿಂದೆ ವೈರಲ್ ಆಗಿದ್ದ ಆಡಿಯೋಗಳು ಸುಮಾಳ ಮೇಲೆ ಅನುಮಾನ ಮೂಡಿಸಿತ್ತು. ಆ ಹಿನ್ನೆಲೆ ಸುಮಾಳನ್ನ ವಿಚಾರಣೆ ನಡೆಸಿದ್ದ ಪೊಲೀಸರು, ಸದ್ಯ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದರ ನಡುವೆಯೇ ನಿನ್ನೆ ಹನಿಟ್ರ್ಯಾಪ್ ಗ್ಯಾಂಗ್​ಗೆ ಜಾಮೀನು ಸಿಕ್ಕಿದೆ.

ಪೊಲೀಸರ ವಿಚಾರಣೆಗೆ ಹಾಜರಾದ ಅನಂತರಾಜು ಪತ್ನಿ ಸುಮಾ ಸಚಿವ ಎಸ್.ಟಿ.ಸೋಮಶೇಖರ್ ಆಪ್ತ, ಬಿಜೆಪಿ ನಾಯಕ ಅನಂತ್ರಾಜು, ಮೇ.12ರ ರಾತ್ರಿ ಬ್ಯಾಡರಹಳ್ಳಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ರು. ಇದಾದ ನಂತರ, ರೇಖಾ ಎಂಬಾಕೆಯನ್ನ ಹನಿಟ್ರ್ಯಾಪ್ ಆರೋಪದಡಿ ಬಂಧಿಸಲಾಗಿತ್ತು. ಆದ್ರೆ, ರೇಖಾ ಮತ್ತು ಅನಂತರಾಜು ಪತ್ನಿ ಸುಮಾ ಸಂಭಾಷಣೆ ವೈರಲ್ ಆಗ್ತಿದ್ದಂತೆ, ಪೊಲೀಸರು ಸುಮಾಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ರು. ಆದ್ರೆ, ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಬಾರದೇ ಏನೇನೊ ಕಾರಣ ಹೇಳಿ ತಪ್ಪಿಸಿಕೊಳ್ತಿದ್ದ ಸುಮಾ, ಇವತ್ತು(ಮೇ 24) ಪೊಲೀಸರ ಎದುರು ಹಾಜರಾಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:00 am, Thu, 26 May 22