ಪಠ್ಯಪುಸ್ತಕಗಳ ಪರಿಷ್ಕರಣೆ ವಿಚಾರ; ಸಿಎಂಗೆ ಪತ್ರ ಬರೆದ ಬರಗೂರು ರಾಮಚಂದ್ರಪ್ಪ, ನಾಡೋಜ ಡಾ.ಹಂಪ ನಾಗರಾಜಯ್ಯ

ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಬರಗೂರು ರಾಮಚಂದ್ರಪ್ಪ, ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಪಠ್ಯಪುಸ್ತಕಗಳ ಪರಿಷ್ಕರಣೆ ವಿಚಾರ; ಸಿಎಂಗೆ ಪತ್ರ ಬರೆದ ಬರಗೂರು ರಾಮಚಂದ್ರಪ್ಪ, ನಾಡೋಜ ಡಾ.ಹಂಪ ನಾಗರಾಜಯ್ಯ
ಬರಗೂರು ರಾಮಚಂದ್ರಪ್ಪ, ನಾಡೋಜ ಡಾ.ಹಂಪ ನಾಗರಾಜಯ್ಯ ಸಿಎಂ ಪತ್ರ ಬರೆದಿದ್ದಾರೆ
Follow us
TV9 Web
| Updated By: sandhya thejappa

Updated on:May 26, 2022 | 8:33 AM

ಬೆಂಗಳೂರು: ಪ್ರೌಢಶಿಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿವಾದಕ್ಕೆ ಸರ್ಕಾರ ತಕ್ಷಣ ತೆರೆ ಎಳೆಯಬೇಕೆಂದು ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa), ನಾಡೋಜ ಡಾ.ಹಂಪ ನಾಗರಾಜಯ್ಯ (Hampa Nagarajaiah) ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರು ತಕ್ಷಣ ಮಧ್ಯಪ್ರವೇಶಿಸಬೇಕು ಅಂತಾ ಮನವಿ ಮಾಡಿರುವ ಹಂಪ ನಾಗರಾಜಯ್ಯ ಅವರು ಪರಿಷ್ಕೃತ ಚಕ್ರತೀರ್ಥ ಪಠ್ಯವನ್ನು ತಡೆಹಿಡಿಯುವಂತೆ ಒತ್ತಾಯಿಸಿದ್ದಾರೆ.

ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಬರಗೂರು ರಾಮಚಂದ್ರಪ್ಪ, ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 4ನೇ ತರಗತಿ ‘ಪರಿಸರ ಅಧ್ಯಯನ’ ಪುಸ್ತಕದ ಪರಿಷ್ಕರಣೆ ಮಾಡಿಲ್ಲ. ಕುವೆಂಪು ಕುರಿತ ಪರಿಚಯ ನನ್ನ ನೇತೃತ್ವದ ಸಮಿತಿಯೂ ಬರೆದಿಲ್ಲ. ಈ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಇದನ್ನು ಬರೆದಿಲ್ಲ. ನಾನು ‘ಮನುಜ ಮತ ವಿಶ್ವಪಥ’ ಸಂದೇಶದ ಬೆಳಕಿನಲ್ಲಿ ಸಾಗುತ್ತಿದ್ದೇನೆ. ನಾವು ಕುವೆಂಪು ಅವರ ಅರ್ಥಪೂರ್ಣ ಸಾಧನೆ ಸ್ವಲ್ಪವೂ ಕಡೆಗಣಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!

ಇದನ್ನೂ ಓದಿ
Image
ಮುಷ್ಕರಕ್ಕೆ ಮುಂದಾದ ಸ್ಟೇಷನ್ ಮಾಸ್ಟರ್​ಗಳು: ರೈಲು ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ
Image
Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!
Image
8 Years of Modi Government ನೂತನ ತಂತ್ರಜ್ಞಾನದೊಂದಿಗೆ ದಾಪುಗಾಲು; ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಭಾರತದ ಸಾಧನೆ ಅದ್ವಿತೀಯ
Image
INR USD Exchange Rate: ಅಮೆರಿಕ ಡಾಲರ್ ಸೇರಿ ಪ್ರಮುಖ ಕರೆನ್ಸಿ ವಿರುದ್ಧ ಭಾರತದ ರೂಪಾಯಿ ಮೇ 25ಕ್ಕೆ ಎಷ್ಟಿದೆ?

ಪಠ್ಯದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ?- ಈಶ್ವರಪ್ಪ: ಬಾಗಲಕೋಟೆ: ಪಠ್ಯಪುಸ್ತಕದಲ್ಲಿ ಹೆಡಗೆವಾರ್ ಭಾಷಣ ಸೇರಿಸಿದ್ದಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ,  ದೇಶದ ಸಂಸ್ಕೃತಿ ವಿಚಾರದಲ್ಲಿ ಹೆಡಗೆವಾರ್ ಮಾಡಿರುವ ಭಾಷಣದ ಒಂದಂಶವನ್ನು ಸೇರಿಸಲಾಗಿದೆ. ಪಠ್ಯದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ? ಈಶ್ವರ ಲಿಂಗ ಒಡೆದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ? ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ಗ್ರೇಟ್ ಇವುಗಳನ್ನು ನಮ್ಮ ಮಕ್ಕಳು ಓದುತ್ತಿದ್ದರು. ಯಾರು ನಮ್ಮ ದೇಶವನ್ನು ಹಾಳು ಮಾಡಿದ್ರೋ, ನಮ್ಮ ಸಂಸ್ಕೃತಿಯನ್ನು ಒಡೆದು ಪುಡಿ ಪುಡಿ ಮಾಡಿದ್ರೋ, ಅಂಥವರ ವೈಭವೀಕರಣ ನಮ್ಮ ಪಠ್ಯದಲ್ಲಿ ಇತ್ತು. ಭಗತ್ ಸಿಂಗ್ ಪಠ್ಯ ತೆಗೆದಿದ್ದು ಸುಳ್ಳು. ನಾರಾಯಣ್ ಗುರು ವಿಚಾರ ತೆಗೆದಿದ್ದು ಸುಳ್ಳು ಎಂದು ತಿಳಿಸಿದರು.

1925 ರಲ್ಲಿ ಹಿಂದೂ ಸಮಾಜ ಒಂದು ಮಾಡುವ ಪ್ರಯತ್ನವನ್ನು ಹೆಡಗೆವಾರ್ ಮಾಡಿದ್ದರು. ಹೆಡಗೆವಾರ್ ವಿಚಾರ ಹರಡದೇ ಇದ್ದಿದ್ದರೆ ಈ ದೇಶ ತುಂಡು ತುಂಡಾಗಿ ಹೋಗುತ್ತಿತ್ತು. ಹಿಂದುತ್ವ ಇಷ್ಟೂ ಜಾಗೃತವಾಗಿರೋವಾಗಲೇ ರಾಷ್ಟ್ರ ದ್ರೋಹಿಗಳು, ಭಯೋತ್ಪಾದಕರು ಆಟ ಆಡುತ್ತಿದ್ದಾರೆ. ವಿಚಾರವಾದಿಗಳು ಅಂತಾ ಹೇಳಿಕೊಂಡು ತಿರುಗಾಡೋರಿಗೆ ಅದೇ ಆನಂದ. ಟಿಪ್ಪು ಸುಲ್ತಾನ್ ಬಗ್ಗೆ ಹೇಳಿದರೆ ಅದೇ ಆನಂದ ಅಂತ ಈಶ್ವರಪ್ಪ ಗರಂ ಆದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 am, Thu, 26 May 22