ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರವರ ಶೈಕ್ಷಣಿಕ ಅರ್ಹತೆ ಬಿಡುಗಡೆ

ಬರವಣಿಗೆಯಿಂದ ಬಿಡುವು ಸಿಕ್ಕಾಗ ಪ್ರವಾಸಕ್ಕೆ ತೆರಳುವ ಹವ್ಯಾಸ ರೂಢಿಸಿಕೊಂಡಿರುವ ರೋಹಿತ್ ಚಕ್ರತೀರ್ಥ, ಐಐಟಿ, ಸಿಇಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಾರೆ.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರವರ ಶೈಕ್ಷಣಿಕ ಅರ್ಹತೆ ಬಿಡುಗಡೆ
ರೋಹಿತ್ ಚಕ್ರತೀರ್ಥ
Follow us
| Updated By: sandhya thejappa

Updated on:May 26, 2022 | 2:43 PM

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರ ಅರ್ಹತೆ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohit Chakrathirtha) ಅವರು ತಮ್ಮ ಸಾಧನೆ, ಪಡೆದ ಪದವಿ, ಶೈಕ್ಷಣಿಕ ಅರ್ಹತೆಯನ್ನು (Education Qualification) ಬಿಡುಗಡೆ ಮಾಡಿದ್ದಾರೆ. ರೋಹಿತ್ ಚಕ್ರತೀರ್ಥ ಅವರು ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ 4 ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಲ್ಲಿ ಈಗಾಗಲೇ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಈವರೆಗೆ 35 ಪುಸ್ತಕಗಳು ಪ್ರಕಟಣೆಗೊಂಡಿವೆ.

ಬರವಣಿಗೆಯಿಂದ ಬಿಡುವು ಸಿಕ್ಕಾಗ ಪ್ರವಾಸಕ್ಕೆ ತೆರಳುವ ಹವ್ಯಾಸ ರೂಢಿಸಿಕೊಂಡಿರುವ ರೋಹಿತ್ ಚಕ್ರತೀರ್ಥ, ಐಐಟಿ, ಸಿಇಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಾರೆ. ಹಲವು ಕಾಲೇಜುಗಳಲ್ಲಿ ಗಣಿತ ವಿಷಯ ಬೋಧಿಸಿದ್ದಾರೆ. ಸೂತ್ರ ಎಂಬ ವಿಜ್ಞಾನ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ರೋಹಿತ್ ಚಕ್ರತೀರ್ಥ, ಐಐಟಿ, ಸಿಇಟಿ ಪ್ರೊಫೆಸರ್ ಎಂದು ಸಚಿವರು ಮಾತನಾಡುವ ಬರದಲ್ಲಿ ಹೇಳಿರಬಹುದು. ನಾನು ಐಐಟಿ ಹಾಗು ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ತಯಾರು ಮಾಡಿದ್ದೇನೆ. ನಾನು ಐಐಟಿ ಹಾಗೂ ಸಿಇಟಿ ಪ್ರೋಪೆಷರ್ ಎಂಬುದನ್ನ ನಿರಾಕರಣೆ ಮಾಡುತ್ತೀನಿ. ಐಐಟಿ ಹಾಗೂ ಸಿಇಟಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ
Image
Fussy Eater: ಊಟ ಮಾಡುವಾಗ ಮಕ್ಕಳು ಹಠ ಮಾಡುತ್ತಾರೆ ಏಕೆ?
Image
Karan Johar: ರಶ್ಮಿಕಾ, ವಿಜಯ್ ದೇವರಕೊಂಡ, ಸಲ್ಮಾನ್..; ಕರಣ್ ಜೋಹರ್​​ ಬರ್ತ್​ಡೇ ಪಾರ್ಟಿಯಲ್ಲಿ ಭಾಗವಹಿಸಿದ ತಾರೆಯರು ಯಾರೆಲ್ಲಾ?
Image
Agriculture: ಹಾದಿಯೇ ತೋರಿದ ಹಾದಿ: ‘ಈ 300 ಭತ್ತದ ತಳಿಗಳು ನನ್ನವಲ್ಲ, ಇಡೀ ರೈತ ಸಮುದಾಯದ್ದು’
Image
Rajat Patidar: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ

ಇದನ್ನೂ ಓದಿ: Agriculture: ಹಾದಿಯೇ ತೋರಿದ ಹಾದಿ: ‘ಈ 300 ಭತ್ತದ ತಳಿಗಳು ನನ್ನವಲ್ಲ, ಇಡೀ ರೈತ ಸಮುದಾಯದ್ದು’

ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಅರ್ಹತೆ ಬಿಡುಗಡೆ ಮಾಡಿದ್ದಾರೆ

ಕರವೇ ನಾರಾಯಣ ಗೌಡ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ರೋಹಿತ್ ಚಕ್ರತೀರ್ಥ, ಸಮಿತಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿದ್ದೇನೆ ಹೊರತು, ನಾನು ವಯಕ್ತಿಕವಾಗಿ ಕೆಲಸ ಮಾಡಿಲ್ಲ. ನನ್ನ ಆಲೋಚನೆಗಳು ಕೊಳಕಾಗಿದೆತೋ, ಇಲ್ಲವೋ ಅಂತ ಜನರಿಗೆ ಗೊತ್ತು. ಬರಹಗಳ ಮೂಲಕ ಹೇಳಿರುವ ವಿಚಾರ ಜನರಿಗೆ ತಿಳಿದಿದೆ. ನನ್ನ ಮಾತಿನಲ್ಲಿ, ಬರಹದಲ್ಲಿ ದೋಷಗಳಿದ್ದರೆ ಪರಸ್ಪರ ಚರ್ಚೆಗೆ ನಾನು ಸಿದ್ಧ. ತಪ್ಪು ಕಲ್ಪನೆಗಳು ಬರುವುದು ಸಹಜ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಾನು ಅನೇಕ ಕನ್ನಡದ ಕೆಲಸಗಳನ್ನು ಮಾಡಿದ್ದೇನೆ. ನನಗೆ ವೈಯಕ್ತಿಕವಾಗಿ ಅವರ ಜತೆ ಏನು ಶತ್ರು ತತ್ವ ಇಲ್ಲ. ನನಗೆ ಅವರ ಹೋರಾಟದ ಬಗ್ಗೆ ಆಕ್ಷೇಪ ಇದೆ. ಹೋರಾಟದ ರೀತಿಯ ದಾಟಿಯ ಬಗ್ಗೆ ನನ್ನ ವಿರೋಧ ಇದೆ ಎಂದರು.

ಕುಮಾರಸ್ವಾಮಿ ಅವರು ರಾಜಕಾರಣಿ, ನಾನಲ್ಲ- ರೋಹಿತ್: ರೋಹಿತ್ ಚಕ್ರತೀರ್ಥನ ಒದ್ದು ಒಳಗಾಗಿ ಎಂಬ ಮಾಜಿ ಸಿಎಂ ಎಚ್​ಡಿಕೆ ಹೇಳಿಕೆ ಬಗ್ಗೆ ಮಾತನಾಡಿದ ರೋಹಿತ್ ಚಕ್ರತೀರ್ಥ, ಕುಮಾರಸ್ವಾಮಿ ಅವರು ರಾಜಕಾರಣಿ, ನಾನಲ್ಲ. ರಾಜಕೀಯಕ್ಕಾಗಿ ಕುಮಾರಸ್ವಾಮಿ ಮಾತನಾಡ್ತಿದ್ದಾರೆ. ಈ ವಿರೋಧ ಮಾಡ್ತಿರೋರೆಲ್ಲಾ ರಾಜಕೀಯ ಕಾರಣಕ್ಕೆ ಮಾಡ್ತಿರೋದು. ಈ ವಿಚಾರ ಮುಂದಿನ ಚುನಾವಣೆ ತನಕ ಈ ವಿಚಾರವನ್ನ ಉಳಿಸಿಕೊಳ್ಳಬೇಕು ಅನ್ನೋ ಉದ್ದೇಶ ಇರಬೇಕು. ನಾಡಗೀತೆ ವಿಚಾರದ ಬಗ್ಗೆ ಹಾಕಿದ್ದ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿ ಆಗಿದೆ. ಅದು ಹಳೆಯ ವಿಚಾರ ಈಗ ಸುಮ್ಮನೆ ಕೆದಕುತ್ತಿದ್ದಾರೆ. ಈ‌ ಹಿಂದೆಯೇ ಈ ವಿಚಾರದ ಬಗ್ಗೆ ಕಾನೂನು ಪ್ರಕ್ರಿಯೆಗಳನ್ನು ಎದುರಿಸಿ ಆಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:20 am, Thu, 26 May 22

ತಾಜಾ ಸುದ್ದಿ
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ