ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಇಡಿ ಶಾಕ್! ಹೊಸದಾಗಿ ಚಾರ್ಜ್ಶೀಟ್ ಸಲ್ಲಿಕೆ
ಇಡಿ ದಾಳಿ ನಡೆದು ಎರಡೂವರೆ ವರ್ಷದ ಬಳಿಕ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. 2019ರಲ್ಲಿ ಐಟಿ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ನಿವಾಸಗಳ ಮೇಲೆ ದಾಳಿ ನಡೆದಿತ್ತು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಹೊಸದಾಗಿ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಇಡಿ ಶಾಕ್ ಕೊಟ್ಟಿದೆ. 2019ರಲ್ಲಿ ನಡೆದಿದ್ದ ದಾಳಿ ಸಂಬಂಧ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ಕೋರ್ಟ್ಗೆ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇಡಿ ದಾಳಿ ನಡೆದು ಎರಡೂವರೆ ವರ್ಷದ ಬಳಿಕ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. 2019ರಲ್ಲಿ ಐಟಿ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ನಿವಾಸಗಳ ಮೇಲೆ ದಾಳಿ ನಡೆದಿತ್ತು. ದಾಳಿ ವೇಳೆ ಬರೋಬ್ಬರಿ 8 ಕೋಟಿ ರೂ. ಹಣ ಪತ್ತೆಯಾಗಿತ್ತು. ಬಳಿಕ ಈ ಪ್ರಕರಣ ಇಡಿಗೆ ವರ್ಗಾವಣೆಗೊಂಡಿತ್ತು. ಜೊತೆಗೆ ಜಾರಿ ನಿರ್ದೇಶನಾಲಯ ಡಿಕೆಶಿಯನ್ನು ಬಂಧಿಸಿ ವಿಚಾರಣೆ ನಡೆಸಿತ್ತು.
ಹೋಮ ಹವನದಲ್ಲಿ ಡಿಕೆಶಿ ಭಾಗಿ: ಡಿಕೆ ಶಿವಕುಮಾರ್ ನಿವಾಸದಲ್ಲಿ ಹೋಮ ಹವನ ನಡೆಯುತ್ತಿದೆ. ಕುಟುಂಬಸ್ಥರ ಜೊತೆ ಪೂಜಾಕಾರ್ಯದಲ್ಲಿ ಡಿಕೆಶಿ ಭಾಗಿಯಾಗಿದ್ದಾರೆ. ಸುಮಾರು 7 ಕ್ಕೂ ಹೆಚ್ಚು ಪುರೋಹಿತರು ಭಾಗಿಯಾಗಿ ಚಂಡಿಕಾ ಹೋಮ ನೆರವೇರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಹೋಮ ನಡೆಯುತ್ತಿದೆ. ಆದರೆ ಕಳೆದೆರಡು ವರ್ಷಗಳಿಂದ ಪೂಜಾ ಕಾರ್ಯ ನಡೆದಿರಲಿಲ್ಲ. ಕೊರೊನಾ ಕಾರಣದಿಂದ ನಡೆದಿರಲಿಲ್ಲ ಎಂದು ತಿಳಿದುಬಂದಿದೆ
ಇದನ್ನೂ ಓದಿ: Family Conflict: ಮಕ್ಕಳ ಮುಂದೆ ಜಗಳವಾಡುವುದು ಕಡಿಮೆ ಮಾಡಿ ಮಾನಸಿಕ ಆರೋಗ್ಯ ಕಾಪಾಡಿ
ಡಿಕೆಶಿ ವಿರುದ್ದ ಇಡಿ ಆರೋಪಗಳು: 317 ಅಕೌಂಟ್ಗಳ ಮೂಲಕ ಹಣ ವರ್ಗಾವಣೆಯಾಗಿದೆ. ಶಿವಕುಮಾರ್ ಮತ್ತು ಅವರ ಕುಟುಂಬದ ಬಳಿ 300 ಅಧಿಕ ಆಸ್ತಿಗಳಿವೆ. ಡಿಕೆ ಶಿವಕುಮಾರ್, ಅವರ ಪತ್ನಿ ಉಷಾ ಶಿವಕುಮಾರ್ ಮತ್ತು ತಾಯಿ ಗೌರಮ್ಮ ಅವರ ಬ್ಯಾಂಕ್ ಖಾತೆಗಳಲ್ಲಿ ಆರು ವರ್ಷದಲ್ಲಿ ಸುಮಾರು 180 ಕೋಟಿ ವಹಿವಾಟು ನಡೆದಿದೆ. ಏಳು ವರ್ಷದಲ್ಲಿ ಕೃಷಿಯಿಂದ 120 ಕೋಟಿ ಆದಾಯ ತೋರಿಸಿದ್ದಾರೆ. ಗೌರಮ್ಮ ಕೃಷಿಯಿಂದ ಒಂದು ಕೋಟಿ ಆದಾಯ ಗಳಿಸಿದ್ದಾರೆ. ಆದರೆ ಅವರ ಖಾತೆಯಲ್ಲಿ ಐವತ್ತು ಕೋಟಿ ಹಣ ಜಮೆಯಾಗಿತ್ತು. ಕೃಷಿಯಿಂದ ಈ ಪ್ರಮಾಣದ ಹಣ ಬರಲು ಸಾಧ್ಯವೇ ಎಂದು ಇಡಿ ಪ್ರಶ್ನೆ ಮಾಡಿತ್ತು. ಉಷಾ ಶಿವಕುಮಾರ್ ಆರು ವರ್ಷಗಳಲ್ಲಿ ನಾಲ್ಕು ವರ್ಷ ಕೃಷಿ ಮತ್ತು ಎರಡು ವರ್ಷ ಕೃಷಿಯೇತರ ಆದಾಯ ತೋರಿಸಿದ್ದಾರೆ. ಅವರ ಖಾತೆಯಲ್ಲಿ 17 ಕೋಟಿ ವ್ಯವಹಾರ ನಡೆದಿದೆ. ಇದು ಹೇಗೆ ಎನ್ನುವುದು ಇಡಿ ಅನುಮಾನ ವ್ಯಕ್ತಪಡಿಸಿದೆ.
ಇನ್ನು ಪುತ್ರಿ ಐಶ್ವರ್ಯಾ ಹೆಸರಿನಲ್ಲಿ 102 ಕೋಟಿ ರೂ. ಆಸ್ತಿ ಇದೆ. 23 ವರ್ಷ ಐಶ್ವರ್ಯಾ ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಭಾವಿಯಾಗಲು ಸಾಧ್ಯವೆ? ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ಹಣ ಸಂಪಾದನೆ, ಆದಾಯ ಗಳಿಸಲು ಹೇಗೆ ಸಾಧ್ಯ| ದೆಹಲಿಯ ಪ್ಲಾಟ್ನಲ್ಲಿ ಸಿಕ್ಕ ಹಣಕ್ಕೆ 8.58 ಕೋಟಿ ಹಣಕ್ಕೆ ಸೂಕ್ತ ದಾಖಲೆ ನೀಡಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸೋದರ ಡಿಕೆ ಸುರೇಶ್, ಇದು ರಾಜಕೀಯ ಪ್ರೇರಿತ, ಬಿಜೆಪಿಗೆ ಶರಣಾಗುವ ಪ್ರಶ್ನೆಯೇ ಇಲ್ಲ. ಕೋರ್ಟ್ ಮೂಲಕ ಪ್ರತಿ ಪಡೆಯುವಂತೆ ವಕೀಲರಿಗೆ ಸೂಚಿಸುತ್ತೇವೆ ಎಂದರು.
ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ನ ಹೋರಾಟ ಮುಂದುವರಿಯುತ್ತದೆ. ಕಳೆದ 4 ವರ್ಷದಿಂದ ತನಿಖೆ ನಡೆಯುತ್ತಿದೆ. ಅವರು ಏನು ಬೇಕಾದರು ಮಾಡಲಿ. 8 ವರ್ಷ ಆಯ್ತು ಬಿಜೆಪಿ ಅಧಿಕಾರಕ್ಕೆ ಬಂದು. ಎಲ್ಲಾ ಸಂಸ್ಥೆಗಳನ್ನ ದುರುಪಯೋಗ ಮಾಡುತ್ತಿದ್ದಾರೆ. ಇವರಿಂದ ನಮಗೆ ನ್ಯಾಯ ಸಿಗುತ್ತಾ? ನಾವು ಎಲ್ಲದಕ್ಕೂ ಸಿದ್ದರಾಗಿದ್ದೇವೆ. ಅದಾಗುತ್ತೆ ಇದಾಗುತ್ತೆ ಅಂತಾ ಭಯ ಪಡುವ ವಿಷಯವೇ ಇಲ್ಲ ಎಂದು ಸುರೇಶ್ ಅಭಿಪ್ರಾಯಪಟ್ಟರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:25 am, Thu, 26 May 22