Family Conflict: ಮಕ್ಕಳ ಮುಂದೆ ಜಗಳವಾಡುವುದು ಕಡಿಮೆ ಮಾಡಿ ಮಾನಸಿಕ ಆರೋಗ್ಯ ಕಾಪಾಡಿ
ಕುಟುಂಬದಲ್ಲಿನ ಸಮಸ್ಯೆ, ಕಲಹವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿತ್ಯ ಮಕ್ಕಳ ಎದುರು ಜಗಳ ಮಾಡುವುದರಿಂದ ಮಕ್ಕಳ ಆರೋಗ್ಯ ಹಾಳಾಗುವುದಲ್ಲದೆ ಓದಿನಲ್ಲೂ ಹಿಂದೆ ಬೀಳುವ ಸಾಧ್ಯತೆ ಹೆಚ್ಚಿದೆ.
ಕುಟುಂಬದಲ್ಲಿನ ಸಮಸ್ಯೆ, ಕಲಹವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿತ್ಯ ಮಕ್ಕಳ ಎದುರು ಜಗಳ ಮಾಡುವುದರಿಂದ ಮಕ್ಕಳ ಆರೋಗ್ಯ ಹಾಳಾಗುವುದಲ್ಲದೆ ಓದಿನಲ್ಲೂ ಹಿಂದೆ ಬೀಳುವ ಸಾಧ್ಯತೆ ಹೆಚ್ಚಿದೆ. ಮಕ್ಕಳು ಚಿಕ್ಕವರು. ಅವರಿಗೇನು ಗೊತ್ತಾಗುತ್ತದೆ ಎಂದು ಬಹಳಷ್ಟು ಪೋಷಕರು ಅಂದುಕೊಂಡು ಜಗಳವಾಡುತ್ತಾರೆ. ಆದರೆ ಮಕ್ಕಳು ಬೆಳೆಯುವ ಈ ಹಂತದಲ್ಲಿ ಅವರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗಮನಹರಿಸಬೇಕು ಎನ್ನುತ್ತಾರೆ ತಜ್ಞರು.
ಮಕ್ಕಳ ಮುಂದಿನ ಭವಿಷ್ಯ ಅವರು ಯಾವ ವಾತಾವರಣದಲ್ಲಿ ಬೆಳೆಯುತ್ತಾರೆ ಎಂಬುದರ ಮೇಲೆ ಅವಲಂಬಿತವಅಗಿರುತ್ತದೆ. ಹಾಗಾದರೆ ಮನೆಯಲ್ಲಿ ಕಲಹ ಕಡಿಮೆ ಮಾಡುವುದು ಹೇಗೆ ಮತ್ತು ಆ ಕಲಹಗಳು ಮಕ್ಕಳ ಮೇಲೆ ಪರಿಣಾಮ ಬೀರದಂತೆ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಮಕ್ಕಳ ಮುಂದೆ ಜಗಳವಾಡಬೇಡಿ: ದಂಪತಿ ನಡುವೆ ಭಿನ್ನಾಭಿಪ್ರಾಯ, ಜಗಳ ಎಲ್ಲವೂ ಸಾಮಾನ್ಯ ಆದರೆ ಮಕ್ಕಳ ಮುಂದೆ ಜಗಳವಾಡದಂತೆ ನೋಡಿಕೊಳ್ಳಿ, ಒಂದೊಮ್ಮೆ ಮಕ್ಕಳ ಮುಂದೆ ಜಗಳವಾಡಿದಾಗ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮಕ್ಕಳ ಎದುರೇ ಸಮಸ್ಯೆ ಬಗೆಹರಿಸಿಕೊಳ್ಳಿ: ಒಂದೊಮ್ಮೆ ಮಕ್ಕಳ ಎದುರು ಜಗಳವಾಡಿದ್ದರೆ ಅವರ ಎದುರೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಈ ಕಲಹ ಮುಗಿದಿದೆ ಎನ್ನುವ ನಂಬಿಕೆ ಮಕ್ಕಳಿಗೆ ಬರಬೇಕು.
ಸಮಸ್ಯೆಗಳಿಗೆ ಮಕ್ಕಳನ್ನು ಜರಿಯಬೇಡಿ: ಆಗುತ್ತಿರುವ ಸಮಸ್ಯೆಗಳಿಗೆ ಮಕ್ಕಳೇ ಕಾರಣ ಎಂದು ಜರಿಯಬೇಡಿ, ಮನೆಯಲ್ಲಿ ಸಾಮಾನ್ಯ ಜಗಳವಾಗುವುದು ಗಂಡ ಹೆಂಡತಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ, ಆದರೆ ಅದರಲ್ಲಿ ಮಕ್ಕಳ ಪಾತ್ರ ಏನೂ ಇಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ನಿಮ್ಮ ಮಗುವಿಗಾಗಿ ಏನು ಮಾಡಬಹುದು? ಹೆಚ್ಚಿನ ಪೋಷಕರು ತಮ್ಮ ಮಗುವಿನ ಕಡೆಯೂ ಗಮನಹರಿಸಲು ಪ್ರಯತ್ನಿಸುತ್ತಾರೆ. ಮಗುವಿನ ಜತೆಗೆ ಇರಲು ಪ್ರಯತ್ನಿಸುವುದು ಹೀಗೆ ಮುಂತಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನಿಮ್ಮ ಮಕ್ಕಳೂ ಹೆತ್ತವರ ನಡುವಿನ ಉದ್ವಿಗ್ನತೆಯನ್ನು ಗ್ರಹಿಸುವುದರಿಂದ ನೀವು ಅವರನ್ನು ಗೊಂದಲಕ್ಕೀಡುಮಾಡುತ್ತೀರಿ. ಆದರೆ ಪೋಷಕರು ಮಕ್ಕಳ ಮುಂದೆ ಯಾವಾಗಲೂ ಜಗಳವಾಡುತ್ತಿದ್ದರೆ, ಅದು ಅವರ ಸ್ಥಿರ ವಾತಾವರಣ ಮತ್ತು ಅವರೊಂದಿಗಿನ ನಿಮ್ಮ ಸಂಬಂಧವನ್ನು ತೀವ್ರವಾಗಿ ಹಾಳು ಮಾಡುತ್ತದೆ. ನಿಮ್ಮ ಜಗಳ ಮಗುವಿನ ಮೆದುಳು ಮತ್ತು ದೇಹದ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರುತ್ತದೆ
ಮಕ್ಕಳು ದುರ್ಬಲರಾಗುತ್ತಾರೆ ಮಕ್ಕಳಿಗೆ, ತಮ್ಮ ಜೀವನದಲ್ಲಿ ಮುಂದೆ ಏನಾಗಬೇಕೆಂಬ ಗುರಿಯ ಅಗತ್ಯವಿರುತ್ತದೆ. ಆದರೆ ಅವರಿಗೆ ಮುಂದೆ ಏನಾಗಬಹುದು ಎಂದು ಊಹಿಸಲು ಸಾಧ್ಯವಾಗದಿದ್ದಾಗ, ಅದು ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದಲೇ ತಮ್ಮ ಹೆತ್ತವರ ಜಗಳಕ್ಕೆ ಸಾಕ್ಷಿಯಾಗುತ್ತಿರುವ ಹೆಚ್ಚಿನ ಮಕ್ಕಳು ತಮ್ಮ ಮನೆಗಳಲ್ಲಿ ದುರ್ಬಲ ಮತ್ತು ಅಸ್ಪಷ್ಟ ಮನಸ್ಸಿನವರಾಗಿರುತ್ತಾರೆ.
ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಪೋಷಕರು ಮಕ್ಕಳ ಮುಂದೆ ಸದಾ ಜಗಳವಾಡುವುದರಿಂದ, ಮಗುವನ್ನು ಖಿನ್ನತೆ, ಕೆಲವು ಅಸ್ವಸ್ಥತೆಗಳಿಗೆ ಒಳಗಾಗುವಂತೆ ಮಾಡುತ್ತದೆ. ಮಕ್ಕಳ ಬೆಳವಣಿಗೆಯ ಹಂತದಲ್ಲಿ ಅವರಿಗೆ ಬೆಂಬಲ, ಗಮನ ಕೊಡುವಲ್ಲಿ ಪೋಷಕರು ವಿಫಲರಾಗುವುದು ಇದಕ್ಕೆ ಮುಖ್ಯ ಕಾರಣ.
ಜೀವನಶೈಲಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ