AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mental Health: ಪೋಷಕರ ಈ ತಪ್ಪುಗಳಿಂದ ಮಕ್ಕಳ ಮಾನಸಿಕ ಆರೋಗ್ಯ ಹಾಳಾಗಬಹುದು

Mental Health:ಪೋಷಕರು ತಮಗೆ ಅರಿವಿಲ್ಲದೆಯೇ ಮಾಡುವಂತಹ ಕೆಲವು ತಪ್ಪುಗಳು ಮಕ್ಕಳ ಮಾನಸಿಕ ಆರೋಗ್ಯವನ್ನು ಹಾಳು ಮಾಡಬಹುದು. ಬೇರೆಯವರೊಂದಿಗೆ ಹೋಲಿಕೆ, ಹೀಗೆಯೇ ಓದಬೇಕೆನ್ನುವ ಒತ್ತಡ ಸೇರಿ ನೀವು ಮಾಡುವ ಕೆಲಸಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದು. ನೀ

Mental Health: ಪೋಷಕರ ಈ ತಪ್ಪುಗಳಿಂದ ಮಕ್ಕಳ ಮಾನಸಿಕ ಆರೋಗ್ಯ ಹಾಳಾಗಬಹುದು
Mental Health
TV9 Web
| Updated By: ನಯನಾ ರಾಜೀವ್|

Updated on:May 24, 2022 | 2:14 PM

Share

ಪೋಷಕರು ತಮಗೆ ಅರಿವಿಲ್ಲದೆಯೇ ಮಾಡುವಂತಹ ಕೆಲವು ತಪ್ಪುಗಳು ಮಕ್ಕಳ ಮಾನಸಿಕ ಆರೋಗ್ಯವನ್ನು ಹಾಳು ಮಾಡಬಹುದು. ಬೇರೆಯವರೊಂದಿಗೆ ಹೋಲಿಕೆ, ಹೀಗೆಯೇ ಓದಬೇಕೆನ್ನುವ ಒತ್ತಡ ಸೇರಿ ನೀವು ಮಾಡುವ ಕೆಲಸಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದು. ನೀವು ಮಕ್ಕಳೊಂದಿಗೆ ಮಕ್ಕಳಾಗಿ, ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಅವರ ಚಿಕ್ಕ ಚಿಕ್ಕ ಬೇಡಿಕೆಗಳನ್ನು ಈಡೇರಿಸುತ್ತಾ ಮುಂದುವರೆದರೆ ಮಕ್ಕಳು ಸಂತೋಷದಿಂದಿರುತ್ತಾರೆ.

ಬೇರೆಯವರೊಂದಿಗೆ ಹೋಲಿಕೆ ಮಾಡಬೇಡಿ ಮಕ್ಕಳನ್ನು ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ, ಇದು ಮಕ್ಕಳಲ್ಲಿ ಕೀಳರಿಮೆ, ಆತ್ಮವಿಶ್ವಾಸದ ಕೊರತೆಯನ್ನು ಉಂಟು ಮಾಡುತ್ತದೆ. ಇದರಿಂದ ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುತ್ತದೆ.

ಮಕ್ಕಳ ಭಾವನೆಗಳಿಗೆ ಬೆಲೆ ಕೊಡಿ ನಿಮ್ಮ ಮಕ್ಕಳ ಭಾವನೆಗಳಿಗೆ ಬೆಲೆ ಕೊಡಿ, ಮಕ್ಕಳು ಏನೇ ಹೇಳುತ್ತಿದ್ದರೂ ಅದನ್ನು ಆಲಿಸಿ, ಮಕ್ಕಳು ಮಾತು ಮುಗಿಸುವ ಮುನ್ನ ನಿಮ್ಮ ಭಾವನೆಗಳನ್ನು ಅವರ ಮೇಲೆ ಹೇರಬೇಡಿ. ಮಕ್ಕಳಿಗೆ ಸಣ್ಣ ನೋವುಂಟಾದರೂ ಸಾಂತ್ವನ ಹೇಳಿ, ನಿನ್ನ ಜತೆ ನಾವಿದ್ದೇವೆ ಎಂದು ನಂಬಿಕೆ ಇರುವ ರೀತಿ ನೋಡಿಕೊಳ್ಳಿ.

ಮಕ್ಕಳ ಮೇಲೆ ಒತ್ತಡ ಬೇಡ ಮಕ್ಕಳು ಪರಿಪೂರ್ಣರಾಗಲು ಅವರ ಮೇಲೆ ಒತ್ತಡ ಹಾಕುವುದು ಬೇಡ, ಮಕ್ಕಳ ಮೇಲೆ ಪೋಷಕರು ಬೆಟ್ಟದಷ್ಟು ಕನಸುಗಳನ್ನು ಕನಸುಗಳನ್ನು ಹೊಂದಿರುತ್ತಾರೆ ಅದು ನಿಜ. ಆದರೆ ಅವರ ಯಾವುದೇ ಆಸೆಗಳನ್ನು ಒತ್ತಡದ ರೀತಿ ಮಕ್ಕಳ ಮೇಲೆ ಹಾಕುವುದು ಬೇಡ.

ತಪ್ಪಿತಸ್ಥ ಭಾವನೆ ಮೂಡುವುದು ಪೋಷಕರು ಮಕ್ಕಳಲ್ಲಿ ತಪ್ಪಿತಸ್ಥ ಭಾವನೆ ಹುಟ್ಟುಹಾಕಬಾರದು, ಮಕ್ಕಳನ್ನು ಖಂಡಿಸದೇ ದೂಷಿಸದೇ ಮಕ್ಕಳ ಆಸೆಗಳನ್ನು ಪೂರೈಸಬೇಕು, ಆರೋಗ್ಯಕರ ಸಂವಾದವನ್ನು ನಡೆಸಬೇಕು.

ಎಲ್ಲಾ ಮಾತುಗಳನ್ನೂ ಕೇಳಬೇಕು ಎಂಬುದನ್ನು ಬಿಡಿ ಮಕ್ಕಳು ತಮ್ಮೆಲ್ಲಾ ಮಾತುಗಳನ್ನು ಕೇಳಬೇಕು, ತಾವು ಹೇಳಿದ ದಾರಿಯಲ್ಲೇ ನಡೆಯಬೇಕು, ಎಂದೂ ಮಾತು ಮೀರಬಾರದು ಎನ್ನುವ ಸಂಕುಚಿತ ಮನೋಭಾವವನ್ನು ಬಿಡಿ. ಹೀಗಾದಾಗ ಮಕ್ಕಳು ಹಾಗೂ ಪೋಷಕರ ನಡುವೆ ಅಂತರ ಹೆಚ್ಚಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Tue, 24 May 22