AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

White Hair: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಇಲ್ಲಿವೆ ಮನೆಮದ್ದುಗಳು

White Hair:ವಯಸ್ಸಾಗುತ್ತಿದ್ದಂತೆ ಕಪ್ಪು ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಸಾಮಾನ್ಯ, ಆದರೆ ಬದಲಾದ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತಿದೆ. 

White Hair: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಇಲ್ಲಿವೆ ಮನೆಮದ್ದುಗಳು
ಬಿಳಿ ಕೂದಲು
TV9 Web
| Updated By: ನಯನಾ ರಾಜೀವ್|

Updated on: May 25, 2022 | 5:41 PM

Share

ವಯಸ್ಸಾಗುತ್ತಿದ್ದಂತೆ ಕಪ್ಪು ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಸಾಮಾನ್ಯ, ಆದರೆ ಬದಲಾದ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತಿದೆ.  ಬಿಳಿ ಕೂದಲಿನ ಸಮಸ್ಯೆಯಿಂದ ನೀವೂ ತೊಂದರೆಗೀಡಾಗಿದ್ದರೆ ಕೆಲವು ನೈಸರ್ಗಿಕ ಮನೆಮದ್ದುಗಳಿಂದ ನೀವು ಇದರಿಂದ ಪರಿಹಾರ ಪಡೆಯಬಹುದು.

ಕೂದಲು ಬೆಳ್ಳಗಾಗಲು ಹೆಚ್ಚುತ್ತಿರುವ ಮಾಲಿನ್ಯ, ಒತ್ತಡ, ರೋಗಗಳು, ತಪ್ಪು ಆಹಾರ ಪದ್ಧತಿ ಸೇರಿದಂತೆ ಹಲವು ಕಾರಣಗಳಿರಬಹುದು. ನೈಸರ್ಗಿಕವಾಗಿ ಉದ್ದವಾದ, ಕಪ್ಪಾದ ಕೂದಲನ್ನು ಪಡೆಯಲು ಬಹಳ ನಿಮಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳು ಸಹಕಾರಿ ಆಗಿವೆ.

ತೆಂಗಿನೆಣ್ಣೆ ಮತ್ತು ನಿಂಬೆ ತೆಂಗಿನೆಣ್ಣೆ ಮತ್ತು ಲಿಂಬೆಯು ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲಿನ ಕಿರುಚೀಲದ ಕೋಶಗಳು ವರ್ಣಕಳೆದುಕೊಳ್ಳದಂತೆ ತಡೆಯುವುದು ಮತ್ತು ದಿನಕಳೆದಂತೆ ಕೂದಲು ಕಪ್ಪಾಗುವಂತೆ ಮಾಡುವುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ದಿನ ಇದನ್ನು ಬಳಸಿಕೊಳ್ಳಿ.

ಆಲೂಗಡ್ಡೆ ಕೂದಲನ್ನು ಕಪ್ಪು ಮಾಡಲು ಆಲೂಗಡ್ಡೆ ಬಳಸಿಕೊಂಡು ನೀವು ಮನೆಯಲ್ಲೇ ಮಾಸ್ಕ್ ತಯಾರಿಸಿಕೊಳ್ಳಬಹುದು. ನೀವು ಆಲೂಗಡ್ಡೆಯನ್ನು ಚೆನ್ನಾಗಿ ಕುದಿಸಿ, ಪಿಷ್ಠದ ಸೊಲ್ಯೂಷನ್ ಉತ್ಪತ್ತಿಯಾಗುವಂತೆ ಮಾಡಬೇಕು. ಇದರ ಬಳಿಕ ಸೋಸಿಕೊಂಡ ದ್ರವನ್ನು ಪಡೆದುಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಇದರ ಬಳಿಕ ನೀರಿನಿಂದ ತೊಳೆಯಿರಿ.

ಶುಂಠಿ ಮೊದಲು, ಶುಂಠಿಯನ್ನು ತುರಿಯಿರಿ. ನಂತರ ಅದಕ್ಕೆ ಜೇನುತುಪ್ಪ ಸೇರಿಸಿ. ಈ ಪೇಸ್ಟ್ ಅನ್ನು ವಾರಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಬಿಳಿಯಾಗುವುದು ಕಡಿಮೆಯಾಗುತ್ತದೆ.

ನೆಲ್ಲಿಕಾಯಿ ಮೊದಲನೆಯದಾಗಿ, ನೆಲ್ಲಿಕಾಯಿಯನ್ನು ಹಿಸುಕಿ ಮತ್ತು ಅದರ ಕಾಳುಗಳನ್ನು ತೆಗೆದುಹಾಕಿ. ಅದರ ನಂತರ ಅದನ್ನು ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ. ನಂತರ ಅದರಲ್ಲಿ ಗೋರಂಟಿ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ.

ಬ್ಲ್ಯಾಕ್ ಟೀ ಬ್ಲ್ಯಾಕ್ ಟೀಯನ್ನು ಕೂದಲಿಗೆ ಹಚ್ಚಿಕೊಂಡರೆ ಕೂದಲು ಕಪ್ಪಾಗುವುದು. ಇದು ಕೂದಲು ದಪ್ಪವಾಗಿ ಬೆಳೆದು ಕಾಂತಿಯುತವಾಗುವಂತೆ ಮಾಡುವುದು. ಬ್ಲ್ಯಾಕ್ ಟೀ ಮಾಸ್ಕ್ ನ್ನು ವಾರದಲ್ಲಿ ಎರಡು ಸಲ ಬಳಸಿ ಮತ್ತು ಇದರ ಬಳಿಕ ಶಾಂಪೂ ಬಲಸಬೇಡಿ.

ಈರುಳ್ಳಿ ಬಿಳಿ ಕೂದಲು ಹೋಗಲಾಡಿಸುತ್ತದೆ ಈರುಳ್ಳಿಯನ್ನು ಪೇಸ್ಟ್ ಮಾಡಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಒಂದು ಗಂಟೆ ಅದನ್ನು ಹಾಗೆಯೇ ಬಿಡಿ. ಒಂದು ಗಂಟೆಯ ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ