Art Of Yoga: ಪಾರ್ಷಿಯಲ್ ಬ್ರೀಥಿಂಗ್ ಎಂದರೇನು? ಅಡ್ಡಪರಿಣಾಮಗಳ ಬಗ್ಗೆ ಯೋಗ ತಜ್ಞರು ಏನು ಹೇಳುತ್ತಾರೆ?

Partial Breathing: ದೇಹದ ಪ್ರತಿಯೊಂದು ಜೀವಕೋಶಕ್ಕೂ ಶಕ್ತಿಯನ್ನು ನೀಡುವ ಪ್ರಣಾಯಾಮದ ಅಭ್ಯಾಸ ಸರಳವಾಗಿ ಕಂಡರೂ ನಿಯಮಿತ ತರಬೇತಿ ಅಗತ್ಯ. ಪ್ರಾಣಾಯಾಮವು ಸಾಮಾನ್ಯವಾಗಿ ಸರಿಯಾದ ಉಸಿರಾಟದ ಅಭ್ಯಾಸವನ್ನು ಕಲಿಸುತ್ತದೆ. ಇದರಲ್ಲಿ ದೇಹದ ಎಲ್ಲ ಭಾಗಗಳೂ ಒಳಗೊಳ್ಳುವುದರಿಂದ ತಾಜಾ ಆಮ್ಲಜನಕ ದೇಹದ ಪ್ರತಿಯೊಂದು ಅಂಗಕ್ಕೂ ತಲುಪುತ್ತದೆ.

Art Of Yoga: ಪಾರ್ಷಿಯಲ್ ಬ್ರೀಥಿಂಗ್ ಎಂದರೇನು? ಅಡ್ಡಪರಿಣಾಮಗಳ ಬಗ್ಗೆ ಯೋಗ ತಜ್ಞರು ಏನು ಹೇಳುತ್ತಾರೆ?
Kamala Bharadwaj
TV9kannada Web Team

| Edited By: Nayana Rajeev

May 25, 2022 | 3:36 PM

ದೇಹದ ಪ್ರತಿಯೊಂದು ಜೀವಕೋಶಕ್ಕೂ ಶಕ್ತಿಯನ್ನು ನೀಡುವ ಪ್ರಣಾಯಾಮದ ಅಭ್ಯಾಸ ಸರಳವಾಗಿ ಕಂಡರೂ ನಿಯಮಿತ ತರಬೇತಿ ಅಗತ್ಯ. ಪ್ರಾಣಾಯಾಮವು ಸಾಮಾನ್ಯವಾಗಿ ಸರಿಯಾದ ಉಸಿರಾಟದ ಅಭ್ಯಾಸವನ್ನು ಕಲಿಸುತ್ತದೆ. ಇದರಲ್ಲಿ ದೇಹದ ಎಲ್ಲ ಭಾಗಗಳೂ ಒಳಗೊಳ್ಳುವುದರಿಂದ ತಾಜಾ ಆಮ್ಲಜನಕ ದೇಹದ ಪ್ರತಿಯೊಂದು ಅಂಗಕ್ಕೂ ತಲುಪುತ್ತದೆ.

ಇದು ದೇಹದಲ್ಲಿ ಶಕ್ತಿಯ ಹರಿವನ್ನು ಸಮ ತೋಲನದಲ್ಲಿರಿಸುತ್ತದೆ. ಸ್ಥಿರವಾದ ಮತ್ತು ನಿಯಮಿತವಾದ ಪ್ರಾಣಾಯಾಮದಿಂದ ಮನಸ್ಸು ಮತ್ತು ದೇಹವನ್ನು ರೋಗ ಮುಕ್ತಗೊಳಿಸಲು ಸಾಧ್ಯವಿದೆ.

ಪ್ರಾಣಾಯಾಮದಿಂದ ಆಮ್ಲಜನಕವು ಎಲ್ಲ ಅಂಗಗಳಿಗೂ ತಲುಪುವುದರಿಂದ ಜೀರ್ಣಾಂಗ ವ್ಯವಸ್ಥೆ ಸಮತೋಲನದಲ್ಲಿರುತ್ತದೆ. ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ. ಚೈತನ್ಯವನ್ನು ವೃದ್ಧಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಶಕ್ತಿಯೂ ಪ್ರಾಣಾಯಾಮಕ್ಕೆ ಇದೆ.

ಮತ್ತಷ್ಟು ಓದಿ

ಹಾಗೆಯೇ ಪಾರ್ಷಿಯಲ್ ಬ್ರೀಥಿಂಗ್ ಎಂದರೇನು? ಅದರಿಂದಾಗುವ ಅಡ್ಡ ಪರಿಣಾಮಗಳೇನು? ಎಂಬುದರ ಬಗ್ಗೆ ಯೋಗ ತಜ್ಞೆ ಕಮಲಾ ಭಾರಧ್ವಾಜ್ ನಡೆಸಿರುವ ಕೇಸ್ ಸ್ಟಡಿ ಇಲ್ಲಿದೆ.

2020ರಲ್ಲಿ ಸುಮಾ(ಹೆಸರು ಬದಲಿಸಲಾಗಿದೆ)ಸತಿ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿಗೆ ಬರುವಾಗ ತುಂಬಾ ನಿಶ್ಯಕ್ತಿ ಅವರನ್ನು ಆವರಿಸಿತ್ತು, ಸುಸ್ತು, ಆಯಾಸದಿಂದ ಬಳಲುತ್ತಿದ್ದರು. ಹೆಚ್ಚು ನಡೆಯಲಾರದ ಪರಿಸ್ಥಿತಿ ಅವರದ್ದಾಗಿತ್ತು.

ಮತ್ತಷ್ಟು ಓದಿ

ಬೆಳಗ್ಗೆಯಿಂದ ಸಂಜೆಯಾಗುವಷ್ಟೊತ್ತಿಗೆ ಅವರ ಶಕ್ತಿಯು ಕ್ರಮೇಣವಾಗಿ ಕಡಿಮೆಯಾಗುತ್ತಾ, ಅಂತ್ಯದಲ್ಲಿ ನಡೆದಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದಕ್ಕೆ ಕಾರಣವೇನೆಂಬುದು ತಿಳಿಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಮುದ್ದಾದ ಮಕ್ಕಳು, ಒಳ್ಳೆಯ ಗಂಡ, ಅತ್ತೆ ಮಾವನ ಪ್ರೀತಿ, ಉತ್ತಮ ಕೆಲಸ ಕೈತುಂಬಾ ಸಂಬಳ ಹೀಗಿರುವಾಗ ಆಕೆಯ ಈ ಸ್ಥಿತಿಗೆ ಕಾರಣವೇನೆಂದುವ ತಿಳಿಯುವುದು ಸವಾಲಾಗಿತ್ತು.

ಕೇಸ್​ ಸ್ಟಡಿ ಹೇಗಿತ್ತು? ಆಕೆಗೆ ಆಗಿರುವ ತೊಂದರೆಯಾದರೂ ಏನು ಎಂಬುದನ್ನು ಅರಿಯಲು ಆಕೆಯ ಕೇಸ್​ ಸ್ಟಡಿ ಮಾಡಲೇಬೇಕಿತ್ತು, ಆಕೆಯ ದಿನಚರಿಯ ಬಗ್ಗೆ ಮೊದಲು ಪ್ರಶ್ನೆಗಳನ್ನು ಕೇಳಲಾಯಿತು, ಆಕೆಯ ದಿನಚರಿಯೂ ಚೆನ್ನಾಗಿಯೇ ಇತ್ತು ಏನು ತೊಂದರೆ ಇರಲಿಲ್ಲ, ಬೆಳಗ್ಗೆ ಎದ್ದು ಕುಕಿಂಗ್, ಕ್ಲೀನಿಂಗ್ ಸೇರಿದಂತೆ ಎಲ್ಲಾ ಕೆಲಸವನ್ನು ಮಾಡುತ್ತಿದ್ದರು. ಆದರೂ ಈ ಸಮಸ್ಯೆ ಇತ್ತು. ಖಿನ್ನತೆ ಏನೂ ಇರಲಿಲ್ಲ. ಆದರೂ ಜೀವನಶೈಲಿ ಬದಲಾವಣೆ ಮಾಡಿನೋಡೋಣವೆಂದು ಕುಟುಂಬದವರ ಒತ್ತಾಯದ ಮೇರೆಗೆ ಸಿಂಗಾಪುರಕ್ಕೂ ಹೋಗಿ ಬಂದರು, ಆದರೂ ಹೆಚ್ಚಿನ ಬದಲಾವಣೆಯೇನೂ ಗೋಚರಿಸಲಿಲ್ಲ.

ಆಕೆಯಿಂದ ಕ್ರಮೇಣವಾಗಿ ಬಂಧುಗಳು ದೂರ ಹೋಗಲು ಶುರು ಮಾಡಿದ್ದರು, ಯಾರೂ ಮಾತನಾಡುತ್ತಿರಲಿಲ್ಲ ಇದು ಸ್ವಲ್ಪ ಆಕೆಗೆ ಚಿಂತೆಯನ್ನುಂಟು ಮಾಡಿತ್ತು. ಅಷ್ಟೊರೊಳಗಾಗಲೇ ಆಕೆಯ ಉಸಿರಾಡುವ ವಿಧಾನದ ಬಗ್ಗೆ ಅನುಮಾನ ಬಂದಿತ್ತು.

ಪಾರ್ಷಿಯಲ್ ಬ್ರೀಥಿಂಗ್ ಕಾರಣ ಸುಮಾ ಪಾರ್ಷಿಯಲ್ ಬ್ರೀಥಿಂಗ್ ಮಾಡುತ್ತಿದ್ದರು, ಅಂದರೆ ಭಾಗಶಃ ಉಸಿರಾಟ ಎನ್ನಬಹುದು, ಉಸಿರನ್ನು ತೆಗೆದುಕೊಳ್ಳುವಾಗ ಹೊಟ್ಟೆ ಬಲೂನ್​ನಂತೆ ಉಬ್ಬಬೇಕು, ಉಸಿರನ್ನು ಬಿಡುವಾಗ ಹೊಟ್ಟೆ ಒಳಗೆ ಹೋಗಬೇಕು. ಆದರೆ ಸುಮಾ ಅವರು ಮಾಡುತ್ತಿದ್ದುದು ಸಂಪೂರ್ಣ ವಿರುದ್ಧ ಕ್ರಿಯೆ. ಒಂದೊಮ್ಮೆ ಈ ಪಾರ್ಷಿಯಲ್ ಬ್ರೀಥಿಂಗ್ ಹೆಚ್ಚು ದಿನಗಳ ಕಾಲ ಮಾಡಿದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹಾಗೆಯೇ ಸುಮಾ ಸಮಸ್ಯೆ ಏನೆಂಬುದು ತಿಳಿದಿತ್ತು. ಸುಮಾ ಅವರು ಮಲಗುವ ಕೋಣೆಯಲ್ಲಿ ಶುದ್ಧ ಗಾಳಿ ಬರುತ್ತಿರಲಿಲ್ಲ, ಜೀರೋ ಕ್ರಾಸ್ ವೆಂಟಿಲೇಷನ್ ಇತ್ತು. ಹೀಗಾಗಿ ಈ ಸಮಸ್ಯೆ ಉಂಟಾಗಿತ್ತು.

ಉಸಿರಾಟ ವ್ಯವಸ್ಥೆ ಸರಿ ಮಾಡುವುದು ಹೇಗೆ? ಉಸಿರಾಟ ವ್ಯವಸ್ಥೆಯನ್ನು ಸರಿ ಮಾಡಬೇಕೆಂದರೆ ಬೆಳಗ್ಗೆ 15 ನಿಮಿಷ ಮಧ್ಯಾಹ್ನ 15 ನಿಮಿಷಗಳ ಕಾಲ 21 ದಿನ ರೇಷಿಯೋ ಕಂಟ್ರೋಲ್ಡ್​ ಬ್ರೀಥಿಂಗ್(1:2 1:1) ಮಾಡಿ ಇದರಿಂದ ನಿಮಗೆ ಹೆಚ್ಚು ಶಕ್ತಿ ಲಭ್ಯವಾಗಿ ದೇಹಕ್ಕೆ ಚೈತನ್ಯ ನೀಡುತ್ತದೆ ಎಂದು ಕಮಲಾ ಭಾರಧ್ವಾಜ್ ಹೇಳಿದ್ದಾರೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ.

ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ. ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಚಕ್ರ ಹಾಗೂ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada