Stress: ಮಾನಸಿಕ ಒತ್ತಡವನ್ನು ದೂರ ಮಾಡುವ ಈ ಆಸನಗಳ ಬಗ್ಗೆ ತಿಳಿಯಿರಿ
Stress:ಯೋಗ(Yoga) ದ ಮೂಲಕ ಮಾನಸಿಕ ಒತ್ತಡ(Mental Stress) ಹಾಗೂ ಖಿನ್ನತೆಯನ್ನು ನಿವಾರಿಸಬಹುದಾಗಿದೆ. ಖಿನ್ನತೆ ಸಮಸ್ಯೆ ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲಿಯೂ ಕಂಡು ಬರುತ್ತಿದೆ, ಯೋಗ ನಮ್ಮ ಮನಸ್ಸನ್ನು ಶಾಂತಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಯೋಗ(Yoga) ದ ಮೂಲಕ ಮಾನಸಿಕ ಒತ್ತಡ ಹಾಗೂ ಖಿನ್ನತೆಯನ್ನು ನಿವಾರಿಸಬಹುದಾಗಿದೆ. ಖಿನ್ನತೆ ಸಮಸ್ಯೆ ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲಿಯೂ ಕಂಡು ಬರುತ್ತಿದೆ, ಯೋಗ ನಮ್ಮ ಮನಸ್ಸನ್ನು ಶಾಂತಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಯೋಗದ ಕೆಲವೊಂದು ಆಸನಗಳು ನಮ್ಮ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ತುಂಬುವುದು ಹಾಗೂ ನಮ್ಮನ್ನು ಧನಾತ್ಮಕವಾಗಿ ಯೋಚಿಸುವಂತೆ ಮಾಡುವುದು.
ಮಾನಸಿಕ ಖಿನ್ನತೆಯನ್ನು ಹೋಗಲಾಡಿಸುವ ಆಸನಗಳು ಸುಖಾಸನ, ಶವಾಸನ, ಬಾಲಾಸನ, ಸೂರ್ಯ ನಮಸ್ಕಾರ, ತಾಡಾಸನ, ತ್ರಿಕೋನಾಸನ, ವಾರಿಯರ್ ಪೋಸ್ ಹಾಗೂ ಪ್ರಾಣಯಾಮ
ಸುಖಾಸನ ಸುಖಾಸನ ಇದು ಯೋಗದ ಮೂಲ ಆಸನ. ಒತ್ತಡವನ್ನು ನಿವಾರಿಸಲು ಈ ಆಸನವು ತುಂಬಾ ಸಹಾಕಾರಿ. ಇದಕ್ಕಾಗಿ ನೀವು ಚಕ್ಕಳ ಮಕ್ಕಳ ಹಾಕಿಕೊಂಡು ಕೂರಬೇಕು. ನಂತರ ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸಿ. ಇದು ನಿಮ್ಮ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಜೊತೆಗೆ ನಿಮ್ಮ ಬೆನ್ನು ಮೂಳೆಗು ಸಹ ವಿಶ್ರಾಂತಿಯನ್ನು ನೀಡುತ್ತದೆ.
ಬಾಲಾಸನ
ಬಾಲಾಸನ ಮಗುವಿನ ಆಸನವು ನಮ್ಮ ಮೆದುಳಿನ ಮೇಲೆ ಅಮೋಘವಾದ ಮನಃಶಾಸ್ತ್ರೀಯ ಪರಿಣಾಮವನ್ನು ಬೀರುತ್ತದೆ. ಇದಕ್ಕಾಗಿ ನೀವು ಭ್ರೂಣದಂತೆ ಕೂರಬೇಕಾಗುತ್ತದೆ. ನೀವು ಮಗುವಿನಂತೆ ಕೂರುವುದರಿಂದ ತಾಯಿಯ ಗರ್ಭದಲ್ಲಿರುವಂತಹ ಅನುಭವವನ್ನು ನಿಮ್ಮದಾಗಿಸಿಕೊಳ್ಳುವಿರಿ. ಇದರಿಂದ ನಿಮ್ಮ ಮನಸ್ಸಿಗೆ ಆರಾಮ ದೊರೆಯುವುದು.
ಸೂರ್ಯ ನಮಸ್ಕಾರ ಸುರ್ಯ ನಮಸ್ಕಾರದ 12 ಭಂಗಿಗಳನ್ನು ಅಭ್ಯಾಸ ಮಾಡಿ. ಕಡಿಮೆಯೆಂದರೂ 6 ಸುತ್ತು ಮಾಡಿ.
ತಾಡಾಸನ ಇದನ್ನು ಮೌಂಟೇನ್ ಪೋಸ್ ಎಂದು ಕರೆಯುತ್ತಾರೆ. ನೇರವಾಗಿ ನಿಂತುಕೊಳ್ಳಬೇಕು, ಕಾಲಿನ ಹೆಬ್ಬರಳು ಸಮೀಪದಲ್ಲಿರಬೇಕು, ಕಾಲಿನ ಪಾದಗಳು ಸ್ವಲ್ಪ ದೂರವಿರಬೇಕು. ನಂತರ ಕೈಗಳನ್ನು ಮೆಲ್ಲನೆ ಮೇಲಕ್ಕೆ ಎತ್ತಿ ಒಂದು ಕೈಯಿಂದ ಮತ್ತೊಂದು ಕೈ ಹಿಡಿದು ನಿಲ್ಲುವ ಪೋಸ್.
ಶವಾಸನ ಶವಾಸನ ಶವದಂತೆ ಮಲಗುವ ಈ ಆಸನವು ಯೋಗಾಸನದಲ್ಲಿ ವಿಶ್ರಾಂತಿಯನ್ನು ಪಡೆಯಲು ಬಳಸುವ ಸಾಧನವಾಗಿದೆ. ನಿಮ್ಮ ಕಾಲು, ಕೈಗಳನ್ನು ಚಾಚಿಕೊಂಡು ಶವದಂತೆ ಮಲಗಿಕೊಳ್ಳಿ. ಯಾವಾಗ ನಿಮ್ಮ ದೇಹವನ್ನು ಶವದಂತೆ ವಿಶ್ರಾಂತಿಗೆ ತಳ್ಳುತ್ತೀರೋ, ಆಗ ಒತ್ತಡವು ಸಹ ಹೇಳದೆ ಕೇಳದೆ ಮಾಯವಾಗುತ್ತದೆ.
ಪ್ರಾಣಯಾಮ ಇನ್ನು ಮಾನಸಿಕ ಒತ್ತಡ ಕಡಿಮೆಮಾಡುವಲ್ಲಿ ಪ್ರಾಣಯಾಮ ಕೂಡ ತುಂಬಾ ಪ್ರಯೋಜನಕಾರಿ. ಈ ಆಸನಗಳನ್ನು ಪರಿಣಿತರ ಸಲಹೆ ಪಡೆದು ಅಭ್ಯಾಸ ಮಾಡಿದರೆ ಮಾನಸಿಕ ಒತ್ತಡ ಹೋಗಲಾಡಿಸಬಹುದು.
ವಾರಿಯರ್ ಪೋಸ್ ಹೆಸರೇ ಸೂಚಿಸುವಂತೆ ಇದು ಯುದ್ಧಕ್ಕೆ ರೆಡಿಯಾದ ಯೋಧನ ಪೋಸ್. ನೇರವಾಗಿ ನಿಂತು ನಿಧಾನಕ್ಕೆ ಒಂದು ಕಾಲನ್ನು ಹಿಂದಕ್ಕೆ ಚಾಚಬೇಕು, ನಂತರ ಒಂದು ಕೈಯನ್ನು ಮುಂದೆಕ್ಕೆ ಮತ್ತೊಂದು ಕೈಯನ್ನು ಹಿಂದಕ್ಕೆ ಚಾಚಿರಬೇಕು, ಮಂಡಿ ಸ್ವಲ್ಪ ಮಡಚಿರಬೇಕು, ಈ ರೀತಿ ನಿಲ್ಲುವುದರಿಂದ ದೇಹದ ಸಾಮರ್ಥ್ಯ ಕೂಡ ಹೆಚ್ಚಾಗುವುದು.
ತ್ರಿಕೋನಾಸನ ಇದರಲ್ಲಿ ನೇರವಾಗಿ ನಿಂತು, ನಂತರ ಒಂದು ಕಾಲನ್ನು ಮುಂದಕ್ಕೆ ಚಾಚಬೇಕು, ಈಗ ಒಂದು ಕೈಯಿಂದ ಪಾದ ಮುಟ್ಟಿ, ಮತ್ತೊಂದು ಕೈಯನ್ನು ಮೇಲಕ್ಕೆ ಎತ್ತಬೇಕು. ಈ ರೀತಿ 10 ಸೆಕೆಂಡ್ ಇರಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ