Art Of Yoga: ದೇಹಕ್ಕೆ ಹೊಸ ಚೈತನ್ಯ ತುಂಬುವ ಯೋಗ, ಪ್ರಾಣಾಯಾಮದ ಮಹತ್ವದ ಬಗ್ಗೆ ತಿಳಿಯಿರಿ
Pranayama Benefits: ಆಧುನಿಕ ಯುಗದಲ್ಲಿ ಜನರು ಬೇರೆ ಬೇರೆ ರೋಗಗಳಿಗೆ ಚಿಕಿತ್ಸೆ ನೀಡುತ್ತಾ, ಪ್ರಮುಖವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಜಾಗೃತಗೊಳಿಸುವುದನ್ನೇ ಮರೆತಿದ್ದಾರೆ.
ಆಧುನಿಕ ಯುಗದಲ್ಲಿ ಜನರು ಬೇರೆ ಬೇರೆ ರೋಗಗಳಿಗೆ ಚಿಕಿತ್ಸೆ ನೀಡುತ್ತಾ, ಪ್ರಮುಖವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಜಾಗೃತಗೊಳಿಸುವುದನ್ನೇ ಮರೆತಿದ್ದಾರೆ. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಲ್ಲ, ರೋಗ ಬಾರದ ರೀತಿ ತಡೆಯುವುದು ಕೂಡ ಮುಖ್ಯವಾಗಿರುತ್ತದೆ. ವಿವಿಧ ರೀತಿಯ ಯೋಗಗಳ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ದೇಹವನ್ನು ರೀಚಾರ್ಜ್ ಮಾಡಿ ರೋಗ ನಿರೋಧಕ ಶಕ್ತಿಯನ್ನು ಜಾಗೃತಗೊಳಿಸುವ ಅಗತ್ಯವಿದೆ.
ಬುದ್ಧಿ, ದೇಹ, ಮನಸ್ಸು ಎಲ್ಲವನ್ನು ನಿಯಂತ್ರಿಸಿ ಆರೋಗ್ಯ ಕೊಡುವ ಶಕ್ತಿ ಯೋಗದಲ್ಲಿದೆ. ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಇದು ಭಾರತದ ಶಕ್ತಿ.
ಮೊದಲನೆಯದು ಪ್ರಾಣಾಯಾಮ
ನಾಲ್ಕು ಬಗೆಗಳು ಪ್ರಾಣಾಯಾಮ ಇದು ಯೋಗ ವಿಜ್ಞಾನದ ಅತಿ ಪ್ರಮುಖ ಭಾಗ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಭಾಗ್ಯ ನೀಡುವ ಪ್ರಾಣಾಯಾಮವು ಉಸಿರಾಡುವ ಕಲೆಯನ್ನು ಕಲಿಸುವ ವಿಶಿಷ್ಟ ಯೋಗ.
- ಮೊದಲು ಉಸಿರನ್ನು ತೆಗೆದುಕೊಳ್ಳಬೇಕು( 1,2,3,4)
- ಉಸಿರನ್ನು ತಡೆ ಹಿಡಿಯಬೇಕು( 1,2,3,4)
- ನಿಧಾನವಾಗಿ ಉಸಿರನ್ನು ಬಿಡಬೇಕು(1,2,3,4)
- ಮತ್ತೆ ಉಸಿರನ್ನು ತಡೆ ಹಿಡಿಯಬೇಕು( 1,2,3,4) ನಿತ್ಯ 3ಕ್ಕಿಂತ ಹೆಚ್ಚು ಬಾರಿ ಮಾಡಬೇಕು
ಉಸಿರು ತಡೆ ಹಿಡಿದಾಗ ಶ್ವಾಸಕೋಶಕ್ಕೆ ವಿಶ್ರಾಂತಿ ಸಿಗುತ್ತದೆ. ಟಿಬಿಯಿಂದ ಬಳಲುತ್ತಿರುವವರಿಗೂ ಪ್ರಾಣಾಯಾಮ ಸಹಕಾರಿ. ನಿಮ್ಮ ಉಸಿರಾಟವು 1:2 ಹಾಗೂ 1:1 ಕ್ರಮಾಂಕವಿರಬೇಕು. ಪ್ರಾಣ ಎಂಬುದು ಉಸಿರಾಟ ಅಥವಾ ದೇಹದ ಪ್ರಮುಖ ಶಕ್ತಿ. ಪ್ರಾಣ ಎಂಬ ಶಬ್ದ ಜೀವ ಶಕ್ತಿಯನ್ನು ಹಾಗೂ ಯಾಮ ಶಬ್ದ ನಿಯಂತ್ರಣವನ್ನು ಸೂಚಿಸುತ್ತದೆ. ಅಂದರೆ ಉಸಿರಾಟದ ನಿಯಂತ್ರಣವೇ ಪ್ರಾಣಾಯಾಮ. ಪ್ರಾಣಾ ಯಾಮದ ಮೂಲಕ ಜೀವಶಕ್ತಿಲಯದ ಮೇಲೆ ನಿಯಂತ್ರಣ ಸಾಧಿಸಿ, ದೇಹ ಹಾಗೂ ಮನಸ್ಸಿನ ಆರೋಗ್ಯ ವೃದ್ಧಿಸಿಕೊಳ್ಳ ಬಹುದು.
ಪ್ರಾಣಾಯಾಮ ಮಾಡುವಾಗ ಪೂರಕ(ಉಸಿರನ್ನು ಮೂಗಿನ ಮೂಲಕ ಶರೀರದ ಒಳಗೆ ತೆಗೆದುಕೊಳ್ಳುವುದು) ರೇಚಕ (ಉಸಿರನ್ನು ಶರೀರದಿಂದ ಮೂಗಿನ ಮೂಲಕ ಹೊರ ಹಾಕುವುದು) ಕುಂಬಕ(ಉಸಿರನ್ನು ನಿಲ್ಲಿಸುವುದು) ಎಂಬ ಮೂರು ಸ್ಥಿತಿಗಳಿದ್ದು ಇವುಗಳಲ್ಲಿ ಕುಂಬಕ ಸ್ಥಿತಿಗೆ ಸ್ತಂಭವೃತ್ತಿ ಎಂದೂ ಅಂತರ್ ಕುಂಬಕಕ್ಕೆ (ಉಸಿರನ್ನು ಶರೀರದ ಒಳಗೆ ತೆಗೆದುಕೊಂಡು ಹಾಗೆ ನಿಲ್ಲಿಸುವ ಒಂದು ಸ್ಥಿತಿ) ಅಭ್ಯಂತರ ವೃತ್ತಿ ಎಂದೂ ಬಾಹ್ಯ ಕುಂಬಕಕ್ಕೆ(ಉಸಿರನ್ನು ಹೊರಹಾಕಿ ಹಾಗೆ ನಿಲ್ಲಿಸುವುದಕ್ಕೆ) ಬಾಹ್ಯವೃತ್ತಿ ಎಂದೂ ಕರೆಯುತ್ತಾರೆ.
ಪೂರಕ ಮತ್ತು ರೇಚಕವನ್ನು ಚೆನ್ನಾಗಿ ಅಭ್ಯಸಿಸಿದ ನಂತರವೇ ಕುಂಬಕವನ್ನು ಅಭ್ಯಾಸಿಸಬೇಕು. ಪ್ರಾರಂಭದಲ್ಲಿ ಅಂತರ್ ಕುಂಬಕ ಅಭ್ಯಸಿಸಿ ನಂತರ ಅಂತರ್ ಕುಂಬಕ ಅಭ್ಯಾಸ ಮಾಡಬಹುದು. ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ ಇರುವವರು ಕುಂಬಕ ಅಭ್ಯಾಸ ಮಾಡಬಾರದು. ಪ್ರಾಣಾಯಾಮದಲ್ಲಿನ ಪೂರಕ, ರೇಚಕ ಮತ್ತು ಕುಂಬಕಗಳಿಂದ ಮನಸ್ಸು ಶುದ್ಧಿಯಾಗುತ್ತದೆ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ.
ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ. ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಚಕ್ರ ಹಾಗೂ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ