AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೋಟೀನ್ ಪೌಡರ್ ಅತಿಯಾಗಿ ಬಳಸ್ತೀರಾ, ಈ ಅಡ್ಡಪರಿಣಾಮಗಳ ಬಗ್ಗೆ ಎಚ್ಚರವಿರಲಿ

Protein Powder: ಫಿಟ್​ನೆಸ್​ ಎನ್ನುವ ವಿಚಾರ ಬಂದರೆ ಪ್ರೋಟೀನ್ ಪೌಡರ್ ಎಲ್ಲಾ ಆಹಾರಗಳಿಗಿಂತ ಮುಂಚೂಣಿಯಲ್ಲಿ ಬಂದು ನಿಲ್ಲುತ್ತದೆ. ದೇಹದಾರ್ಢ್ಯ ಪಟುಗಳು ಹೆಚ್ಚಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಅಥವಾ ಸ್ಪರ್ಧೆಗಳಲ್ಲಿ ಭಾಗಿಯಾಗಲು  ಪ್ರೋಟೀನ್ ಪಾನೀಯ ಸೇವನೆ ಮಾಡುತ್ತಾರೆ.

ಪ್ರೋಟೀನ್ ಪೌಡರ್ ಅತಿಯಾಗಿ ಬಳಸ್ತೀರಾ, ಈ ಅಡ್ಡಪರಿಣಾಮಗಳ ಬಗ್ಗೆ ಎಚ್ಚರವಿರಲಿ
Protein Powder
TV9 Web
| Updated By: ನಯನಾ ರಾಜೀವ್|

Updated on:May 24, 2022 | 10:19 AM

Share

ಫಿಟ್​ನೆಸ್​ ಎನ್ನುವ ವಿಚಾರ ಬಂದರೆ ಪ್ರೋಟೀನ್ ಪೌಡರ್ ಎಲ್ಲಾ ಆಹಾರಗಳಿಗಿಂತ ಮುಂಚೂಣಿಯಲ್ಲಿ ಬಂದು ನಿಲ್ಲುತ್ತದೆ. ದೇಹದಾರ್ಢ್ಯ ಪಟುಗಳು ಹೆಚ್ಚಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಅಥವಾ ಸ್ಪರ್ಧೆಗಳಲ್ಲಿ ಭಾಗಿಯಾಗಲು  ಪ್ರೋಟೀನ್ ಪಾನೀಯ ಸೇವನೆ ಮಾಡುತ್ತಾರೆ. ಪ್ರೋಟೀನ್ (ಎನ್ನುವ ಶಬ್ದವು ಗ್ರೀಕ್​ನ ಪ್ರೋಟೋಸ್ ಎನ್ನುವ ಶಬ್ದದಿಂದ ಬಂದಿದೆ. ಪ್ರೋಟೀನ್ ಪೌಡರ್​ ಅನ್ನು ಹಾಲು ಅಥವಾ ಸ್ಮೂದಿಯಲ್ಲಿ ಬೆರೆಸಿ ಕುಡಿಯುತ್ತಾರೆ. ಆದರೆ ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಕೂಡ ಇವೆ.

ಆದರೆ ಪ್ರೋಟೀನ್ ಪಾನೀಯವನ್ನು ಮೊಟ್ಟೆ, ಹಾಲು ಮತ್ತು ಸೋಯಾದಿಂದ ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಪ್ರೋಟೀನ್ ಪಾನೀಯದಲ್ಲಿ ಸಂಸ್ಕರಿತ ಪ್ರೋಟೀನ್ ಸೇರಿಸಲಾಗುತ್ತದೆ. ಇದರಲ್ಲಿ ಕೆಲವೊಂದು ವಿಷಕಾರಿ ಅಂಶಗಳಾದ ಸೀಸ, ಆರ್ಸೆನಿಕ್ ಮತ್ತು ಪಾದರಸದ ಅಂಶಗಳು ಇರುತ್ತವೆ.

ನೀವು ಪ್ರೋಟೀನ್ ಪಾನೀಯ ಸೇವನೆ ಮಾಡುವುದಾದರೆ ಯಾವುದೇ ರೀತಿಯ ವಿಷಕಾರಿ ಅಂಶಗಳು ಇಲ್ಲದೆ ಇರುವಂತಹ ಪ್ರೋಟೀನ್ ಪಾನೀಯ ಸೇವನೆ ಮಾಡಿ.

ದೇಹಕ್ಕೆ ಯಾವ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಬೇಕು ನಿಮ್ಮ ತೂಕವನ್ನು ಪೌಂಡ್ಸ್​ ಮೂಲಕ ಕಾಲ್ಕ್ಯೂಲೇಟ್ ಮಾಡಿ ಅಂದರೆ ಒಂದೊಮ್ಮೆ ನಿಮ್ಮ ಕೆಜಿ ನಿಮಗೆ 50 ವರ್ಷ ವಯಸ್ಸಾಗಿದ್ದು ನಿಮ್ಮ ತೂಕ 63 ಕೆಜಿ ಇದ್ದರೆ(140 ಪೌಂಡ್ಸ್) ಅಂತವರಿಗೆ 53ಗ್ರಾಂನಷ್ಟು ಪ್ರೋಟೀನ್​ನ ಅಗತ್ಯವಿದೆ.

ಪ್ರೋಟೀನ್ ಪೌಡರ್​ಗೆ ಏನೇನು ಬೆರೆಸುತ್ತಾರೆ ಪ್ರೋಟೀನ್ ಪೌಡರ್​ ಅನ್ನು ಸೋಯಾಬೀನ್, ಅಕ್ಕಿ, ಆಲೂಗಡ್ಡೆ ಇಂದ ತಯಾರಿಸಿರಬಹುದು, ಅದಕ್ಕೆ ಸಕ್ಕರೆ, ಆರ್ಟಿಫಿಷಿಯಲ್ ಫ್ಲೇವರ್, ವಿಟಮಿನ್ ಹಾಗೂ ಮಿನರಲ್ಸ್​ ಬೆರಕೆ ಮಾಡಲಾಗುತ್ತದೆ.

ಪ್ರೋಟೀನ್ ಪೌಡರ್ ಬದಲು ಏನು ಬಳಕೆ ಮಾಡಬಹುದು? ಯೋಗರ್ಟ್​, ಹಾಲು, ತುಪ್ಪ, ಮೀನು, ಮೊಟ್ಟೆ ಹಾಗೂ ಮಾಂಸವನ್ನು ಸೇವಿಸಿ.

ಹೊಟ್ಟೆನೋವು ಪ್ರೋಟೀನ್ ಶೇಕ್ ಸುರಕ್ಷಿತವೇ ಎನ್ನುವ ಪ್ರಶ್ನೆ ಮೊದಲು ಉದ್ಭವಿಸಲಿದೆ. ಹಾಲಿನಿಂದ ಮಾಡಲ್ಪಡುವ ಪ್ರೋಟೀನ್ ಶೇಕ್ ನಲ್ಲಿ ಹಾಲಿನ ಸಕ್ಕರೆ ಲ್ಯಾಕ್ಟೋಸ್ ಇರುವುದು. ಇದು ಹೊಟ್ಟೆಯ ನೋವಿಗೆ ಕಾರಣವಾಗಬಹುದು. ಲ್ಯಾಕ್ಟೋಸ್ ಸೂಕ್ಷ್ಮತೆ ಇರುವವರಲ್ಲಿ ಇದು ಕಂಡುಬರಬಹುದು. ಇದರಿಂದಾಗಿ ಗ್ಯಾಸ್, ಹೊಟ್ಟೆ ಉಬ್ಬರ, ಭೇದಿ, ಹೊಟ್ಟೆಯಲ್ಲಿ ಭಾರವಾದ ಅನುಭವ ಉಂಟಾಗುವುದು.

ಅಲರ್ಜಿ ಭೇದಿ, ವಾಂತಿ ಮತ್ತು ನಿರ್ಜಲೀಕರಣ ಉಂಟಾಗಬಹುದು. ಇದು ಪ್ರೋಟೀನ್ ಪಾನೀಯದ ದೊಡ್ಡ ಅಪಾಯ. ಸೋಯಾ, ಹಾಲು ಮತ್ತು ಮೊಟ್ಟೆಯ ಪ್ರೋಟೀನ್ ಶೇಕ್ ನಿಂದಾಗಿ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ.

ವಿವಿಧ ಅಂಗಗಳಿಗೆ ಹಾನಿ ಅತಿಯಾದ ಪ್ರೋಟೀನ್ ನಿಂದಾಗಿ ಕಿಡ್ನಿ ಮತ್ತು ಯಕೃತ್ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ ಕಿಡ್ನಿ ಅಥವಾ ಯಕೃತ್ ಸಮಸ್ಯೆ ಇರುವವರಿಗೆ ಇದು ಮಾರಕ. ಇದು ಪ್ರೋಟೀನ್ ಪೌಡರ್​ನ ಹಾನಿಕಾರಕ ಪರಿಣಾಮ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಅಗಿರುವುದಿಲ್ಲ, ಸಾಮಾನ್ಯ ಮಾಹಿತಿ ಆಧರಿಸಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:18 am, Tue, 24 May 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ