ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮಕ್ಕಳ ವರ್ತನೆ ನಿಭಾಯಿಸುವುದು ಹೇಗೆ?

ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮಕ್ಕಳ ವರ್ತನೆ ನಿಭಾಯಿಸುವುದು ಹೇಗೆ?
Parents

Children Behavior:ಮಕ್ಕಳ ವರ್ತನೆಯು ಅವರ ಭಾವನೆಗಳ ಮೇಲೆ ನಿಂತಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ವರ್ತನೆಯನ್ನು ನಿರ್ವಹಿಸುವುದೇ ಪೋಷಕರಿಗೆ ಬಹುದೊಡ್ಡ ತಲೆನೋವಾಗಿದೆ.

TV9kannada Web Team

| Edited By: Nayana Rajeev

May 23, 2022 | 3:46 PM

ಮಕ್ಕಳ ವರ್ತನೆಯು ಅವರ ಭಾವನೆಗಳ ಮೇಲೆ ನಿಂತಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ವರ್ತನೆಯನ್ನು ನಿರ್ವಹಿಸುವುದೇ ಪೋಷಕರಿಗೆ ಬಹುದೊಡ್ಡ ತಲೆನೋವಾಗಿದೆ. ಮಕ್ಕಳು ಹೇಳಿದ ಮಾತನ್ನೇ ಕೇಳುವುದಿಲ್ಲ ಎಂದು ದೂರುತ್ತಾರೆ. ಹಾಗಾದರೆ ಇಂತಹ ಸಮಯದಲ್ಲಿ ಪೋಷಕರು ಮಕ್ಕಳ ಬಳಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ. ಪ್ರಯಾಣವೆಂದರೆ ಮಕ್ಕಳಿಗೆ ಅಹ್ಲಾದಕರವೆನಿಸಿದರೂ, ಕೆಲವೊಮ್ಮೆ ಮಕ್ಕಳ ವರ್ತನೆಯಿಂದಾಗಿ ಪೋಷಕರಿಗೆ ಮುಜುಗರವಾಗುವುದುಂಟು ಹಾಗೆಯೇ ಆ ಸಂದರ್ಭದಲ್ಲಿ ಬರುವ ಕೋಪದಿಂದಾಗಿ ಇಡೀ ದಿನವನ್ನೇ ಹಾಳು ಮಾಡಿಕೊಳ್ಳುತ್ತಾರೆ.

ನಿಮ್ಮ ಮಗು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗಿರುತ್ತದೆ. ಮಕ್ಕಳಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇರಿಸುಮುರುಸು ಅನುಭವಿಸದೇ ಇರಲು ಮೊದಲೇ ತಯಾರಿ ನಡೆಸಬೇಕು. ಇಲ್ಲಿದೆ ಕೆಲವು ಟಿಪ್ಸ್

ಮಕ್ಕಳು ಕೇಳುವ ಮಾಹಿತಿ ಎಲ್ಲವನ್ನೂ ಮೊದಲೇ ನೀಡಿ ನೀವು ಮನೆಯಿಂದ ಹೊರಗೆ ಹೋಗುವ ಮೊದಲು ಮಕ್ಕಳಿಗೆ ನೀವು ಎಲ್ಲಿಗೆ ಹೋಗುತ್ತಿದ್ದೀರಿ, ಅಲ್ಲಿಯ ಹವಾಮಾನ ಹೇಗಿರುತ್ತದೆ, ಊಟ ಸರಿಯಾದ ಸಮಯಕ್ಕೆ ಸಿಗುತ್ತದೋ ಇಲ್ಲವೋ, ಅಲ್ಲಿ ಅವರ ವರ್ತನೆ ಹೇಗಿರಬೇಕು ಎಂಬುದನ್ನು ಮೊದಲೇ ತಿಳಿಸಿಕೊಡಿ. ಆಗ ಮಕ್ಕಳು ಕೂಡ ಎಲ್ಲವನ್ನು ಎದುರಿಸಲು ಮಾನಸಿಕವಾಗಿ ಸಿದ್ಧವಾಗಿರುತ್ತಾರೆ. ಇಲ್ಲವಾದರೆ ಅವರು ಕೇಳುವ ಪ್ರಶ್ನೆಗಳಿಂದಲೇ ನಿಮಗೆ ಕಿರಿಕಿರಿ ಉಂಟಾಗುತ್ತದೆ.

ಮಕ್ಕಳ ಮಾತು ಕೇಳುವುದು ಕೂಡ ಮುಖ್ಯ ಮಕ್ಕಳು ತಾವು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದುಕೊಂಡಿರುತ್ತಾರೆ, ಮಧ್ಯೆ ಏನನ್ನೂ ಹೇಳದೆ ಅವರ ಮಾತುಗಳನ್ನು ಆಲಿಸಿ ಇದರಿಂದಾಗಿ ಮಕ್ಕಳಿಗೆ ನಿಮ್ಮ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳನ್ನು ಸುಧಾರಿಸುವುದು ಹೇಗೆ? ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ವರ್ತನೆಯು ಬದಲಾಗುತ್ತಿದೆ ಎನ್ನುವಾಗ ಆ ವಿಷಯವನ್ನು ತುಂಬಾ ಕೂಲ್ ಆಗಿ ಹ್ಯಾಂಡಲ್ ಮಾಡಬೇಕು, ನಿಮ್ಮ ಮಕ್ಕಳ ಬೇಡಿಕೆ ಉತ್ತಮವಾಗಿದ್ದರೆ ಅದು ಸರಿ ಇಲ್ಲವಾದರೆ ಅವರ ವಯಸ್ಸಿಗೆ ತಕ್ಕಂತೆ ನೀವು ನಡೆದುಕೊಳ್ಳಿ ಅಗತ್ಯಬಿದ್ದರೆ ಶಿಕ್ಷಿಸಿ.

ಮಕ್ಕಳ ಹೊಟ್ಟೆ ತುಂಬಿರಲಿ ಮನೆಯಿಂದ ಹೊರಗೆ ಹೊರಟಾಗ ಮಕ್ಕಳ ಹೊಟ್ಟೆಯು ತುಂಬಿರುವಂತೆ ನೋಡಿಕೊಳ್ಳಿ, ಒಂದೊಮ್ಮೆ ಹಸಿವಾದರೂ ಮಕ್ಕಳ ಹಠ ಹೆಚ್ಚಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada