- Kannada News Photo gallery Chankya Niti Chanakya says its foolish to expect mercy and kindness from these 5 what are they know here
ಚಾಣಕ್ಯ ನೀತಿ: ಈ ಜನರಿಂದ ದಯೆಯನ್ನು ನಿರೀಕ್ಷಿಸಲೇಬೇಡಿ; ಕಾರಣ ಅವರಿಗೆ ಯಾವುದೇ ಭಾವನೆಗಳಿರುವುದಿಲ್ಲ!
Chanakya Niti: ಆಚಾರ್ಯ ಚಾಣಕ್ಯರು ತಮ್ಮ ಕರ್ತವ್ಯ ಬದ್ಧತೆ, ಸ್ವಭಾವ, ಪ್ರವೃತ್ತಿ ಇತ್ಯಾದಿಗಳಲ್ಲಿ ಇತರರ ಬಗ್ಗೆ ಯಾವುದೇ ಸಹಾನುಭೂತಿಯನ್ನು ಹೊಂದಿರದ ಕೆಲವು ಜನರನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಅವರು ತಮ್ಮ ಕಾರ್ಯ ಸಾಧನೆಯ ಬಗ್ಗೆ ಮಾತ್ರ ಚಿಂತಿಸುತ್ತಾರೆಯೇ ಹೊರತು ಬೇರೆಯವರ ಬಗ್ಗೆ ದಯೆ ಹೊಂದಿರುವುದಿಲ್ಲ. ಕಾನೂನಿನ ಚೌಕಟ್ಟಿಗೆ ಒಳಪಟ್ಟ ರಾಜ, ಕಳ್ಳ, ವೇಶ್ಯೆ, ಬೆಂಕಿಗೆ ಯಾವುದೇ ಭಾವನೆಗಳು/ ದಯೆ ಇರುವುದಿಲ್ಲ ಎನ್ನುತ್ತಾನೆ ಚಾಣಕ್ಯ.
Updated on: Apr 02, 2022 | 8:02 AM

ಈ ಜನರಿಂದ ಕರುಣೆ/ ದಯೆಯನ್ನು ನಿರೀಕ್ಷಿಸುವುದು ಮೂರ್ಖತನ ಎನ್ನುತ್ತಾನೆ ಚಾಣಕ್ಯ. ಅವರು ಯಾರೆಲ್ಲಾ? ಇಲ್ಲಿದೆ ನೋಡಿ. ಈ ಪಟ್ಟಿಯಲ್ಲಿ ಮೊದಲ ಹೆಸರು ರಾಜ. ಒಬ್ಬ ರಾಜನು ಸಹಾನುಭೂತಿ ಹೊಂದಿದ್ದರೆ ಅಥವಾ ಸಹಾನುಭೂತಿಯಿಂದ ನಿರ್ಧಾರವನ್ನು ತೆಗೆದುಕೊಂಡರೆ, ಎಂದಿಗೂ ನ್ಯಾಯಯುತ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ರಾಜನು ಎಂದಿಗೂ ತನ್ನ ಕರ್ತವ್ಯಕ್ಕೆ ಬದ್ಧನಾಗಿರುತ್ತಾನೆ. ರಾಜನು ಯಾವುದೇ ನಿರ್ಧಾರವನ್ನು ಕೇವಲ ಸಾಕ್ಷ್ಯದ ಆಧಾರದ ಮೇಲೆ ತೆಗೆದುಕೊಳ್ಳುತ್ತಾನೆ ಮತ್ತು ಕಾನೂನಿನ ಚೌಕಟ್ಟಿನೊಳಗೆ ಇರುತ್ತಾನೆ. ಅವನಿಂದ ಕರುಣೆಯನ್ನು ನಿರೀಕ್ಷಿಸಲಾಗದು ಎನ್ನುತ್ತಾನೆ ಚಾಣಕ್ಯ.

ಚಿಕ್ಕ ಮಕ್ಕಳು: ಪುಟಾಣಿ ಮಕ್ಕಳು ಸುಮ್ಮನೆ ಖುಷಿಯಾಗಿರುತ್ತಾರೆ. ಅವರಿಗೆ ತಮ್ಮದೇ ಲೋಕ, ಬೇಕನಿಸಿದ್ದನ್ನು ಮಾಡುತ್ತಾರೆ. ನಿಮ್ಮ ಅಸಮಾಧಾನ ಅಥವಾ ಕಷ್ಟ ಅವರಿಗೆ ತಿಳಿಯುವುದಿಲ್ಲ. ಅದಕ್ಕಾಗಿಯೇ ಅವರಿಂದಲೂ ನಮ್ಮ ಸಮಸ್ಯೆಗಳಿಗೆ ದಯೆಯನ್ನು ಅಪೇಕ್ಷಿಸಬಾರದು.

ವೇಶ್ಯೆಯೂ ಕೂಡ ದಯೆಯನ್ನು ಹೊಂದಿರುವುದಿಲ್ಲ. ಅವರಿಗೆ ಹಣ ಗಳಿಸುವ ಉದ್ದೇಶವಿರುತ್ತದೆ, ಆದ್ದರಿಂದ ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಅವಳು ಏನು ಬೇಕಾದರೂ ಮಾಡಬಹುದು. ನೀವು ಎಷ್ಟೇ ದುಃಖಿತರಾಗಿದ್ದರೂ, ವೇಶ್ಯೆಯು ನಿಮ್ಮ ದುಃಖವನ್ನು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ ಎನ್ನುತ್ತಾನೆ ಚಾಣಕ್ಯ.

ಕಳ್ಳನು ಕದಿಯಲು ಹೋದಾಗ, ಅವನು ಯೋಚಿಸುವುದು ತನ್ನ ಸ್ವಂತ ಮಾತ್ರ. ನಾಳೆ ಅದರಿಂದ ಬೇರೆಯವರಿಗೆ ಹಾನಿಯಾಗುತ್ತದೆ ಎಂದು ಆತ ಯೋಚಿಸುವುದಿಲ್ಲ. ಅವರಿಂದ ಎಂದಿಗೂ ದಯೆಯನ್ನು ನಿರೀಕ್ಷಿಸಬೇಡಿ.

ಬೆಂಕಿಯ ಪ್ರವೃತ್ತಿಯು ಸುಡುವುದು. ನೀವು ಬೆಂಕಿಯ ಬಳಿ ಹೋದರೆ, ನೀವೇ ತೊಂದರೆಯನ್ನು ಎದುರು ಹಾಕಿಕೊಳ್ಳುತ್ತೀರಿ. ಒಬ್ಬರ ಕಷ್ಟವನ್ನು ನೋಡಿ ಬೆಂಕಿ ತನ್ನ ಸ್ವಭಾವವನ್ನು ಬದಲಾಯಿಸಲಾರದು. ಆದ್ದರಿಂದ ಅಗ್ನಿಯಿಂದಲೂ ಕರುಣೆ/ ದಯೆ ನಿರೀಕ್ಷಿಸಬೇಡಿ ಎನ್ನುತ್ತಾನೆ ಚಾಣಕ್ಯ.




