AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Water: ನೀರಿಗೂ ಎಕ್ಸ್​ಪೈರಿ ದಿನಾಂಕವಿದೆಯೇ? ಇಲ್ಲಿದೆ ಉಪಯುಕ್ತ ಮಾಹಿತಿ

Water: ನೀರಿಗೂ ಎಕ್ಸ್​ಪೈರಿ ದಿನಾಂಕವಿರುತ್ತದೆಯೇ?, ನೀರನ್ನು ಎಷ್ಟು ದಿನಗಳ ಕಾಲ ಶೇಖರಿಸಿಡಬಹುದು, ಹೆಚ್ಚು ದಿನಗಳ ಕಾಲ ನೀರು ಕುಡಿಯಲು ಯೋಗ್ಯವಾಗಿಡುವಂತೆ ಮಾಡುವುದು ಹೇಗೆ? ಇದರ ಕುರಿತು ಇಲ್ಲಿದೆ ಮಾಹಿತಿ.

Water: ನೀರಿಗೂ ಎಕ್ಸ್​ಪೈರಿ ದಿನಾಂಕವಿದೆಯೇ? ಇಲ್ಲಿದೆ ಉಪಯುಕ್ತ ಮಾಹಿತಿ
Water
Follow us
TV9 Web
| Updated By: ನಯನಾ ರಾಜೀವ್

Updated on:May 23, 2022 | 2:25 PM

ನೀರಿಗೂ ಎಕ್ಸ್​ಪೈರಿ ದಿನಾಂಕವಿದೆಯೇ?, ನೀರನ್ನು ಎಷ್ಟು ದಿನಗಳ ಕಾಲ ಶೇಖರಿಸಿಡಬಹುದು, ಹೆಚ್ಚು ದಿನಗಳ ಕಾಲ ನೀರು ಕುಡಿಯಲು ಯೋಗ್ಯವಾಗಿಡುವಂತೆ ಮಾಡುವುದು ಹೇಗೆ? ಇದರ ಕುರಿತು ಇಲ್ಲಿದೆ ಮಾಹಿತಿ. ನೀವು ಎಲ್ಲೋ ಪ್ರಯಾಣಿಸುವಾಗ ನೀರಿನ ಬಾಟಲಿ ಖರೀದಿಸುತ್ತೀರಿ, ಬಾಟಲಿ ಮೇಲಿರುವ ಲೇಬಲ್​ ನೋಡಿದಾಗ ಒಂದೊಮ್ಮೆ ಎಕ್ಸ್​ಪೈರಿ ದಿನಾಂಕ ಮುಗಿದಿದ್ದರೆ ಆಶ್ಚರ್ಯಪಡಬೇಡಿ.

ನೀರಿಗೆ ಎಕ್ಸ್​ಪೈರಿ ದಿನಾಂಕವೆಂಬುದೇ ಇಲ್ಲ, ಎಕ್ಸ್​ಪೈರಿ ದಿನಾಂಕವಿರುವುದು ಕೇವಲ ಪ್ಲಾಸ್ಟಿಕ್ ಬಾಟಲಿಗೆ ಮಾತ್ರ ಹೌದು, ಪ್ಲಾಸ್ಟಿಕ್ ಬಾಟಲಿಯಲ್ಲಿ ಹೆಚ್ಚು ದಿನ ನೀರು ಶೇಖರಿಸಿದ್ದರೆ ಕ್ರಮೇಣವಾಗಿ ಬಾಟಲಿ ತನ್ನ ಅಂಶವನ್ನು ನೀರಿನಲ್ಲಿ ಬಿಡುತ್ತದೆ ಹೀಗಾಗಿ ಆ ನೀರನ್ನು ಕುಡಿಯಬಾರದು ಅಷ್ಟೇ.

ನೀರು ಸ್ವಚ್ಛವಾಗಿದ್ದರೆ ಅದಕ್ಕೆ ಎಕ್ಸ್​ಪೈರಿ ದಿನಾಂಕವೇ ಇರುವುದಿಲ್ಲ, ತಾಪಮಾನದ ಬದಲಾವಣೆಯಿಂದಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿರುವ ಕೆಮಿಕಲ್ ಅಂಶವು ನೀರನ್ನು ಸೇರುವುದರಿಂದ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ.

ಎಕ್ಸ್​ಪೈರಿ ದಿನಾಂಕ ಮುಗಿದ ಬಳಿಕ ನೀರಿನ ಬಾಟಲಿ ಏನಾಗುತ್ತದೆ? ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಸಂಶೋಧನೆಯಲ್ಲಿ ಕೆಲವು ಅಂಶಗಳು ಬೆಳಕಿಗೆ ಬಂದಿವೆ. ಘನ ಪ್ಲಾಸ್ಟಿಕ್ ಅಥವಾ ಪಾಲಿಕಾರ್ಬೋನೇಟ್ ಬಾಟಲಿಗಳಲ್ಲಿ ಒಂದು ವಾರಗಳ ಕಾಲ ನೀರು ಕುಡಿದವರ ಮೂತ್ರದಲ್ಲಿ ಕೆಮಿಕಲ್ ಬಿಸ್ಪೋನೇಲ್ ಕಂಡುಬಂದಿತ್ತು.

ನಲ್ಲಿ ನೀರನ್ನು ಉತ್ತಮವಾಗಿ ಶೇಖರಿಸಿಟ್ಟರೆ ಆರು ತಿಂಗಳುಕಾಲ ಕುಡಿದರೂ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಿರಲಿಲ್ಲ. ಹಾಗಾಗಿ ಶುದ್ಧ ನೀರನ್ನು ಶೇಖರಿಸಿಟ್ಟರೆ 1 ರಿಂದ 2 ವರ್ಷಗಳ ಕಾಲ ಬಳಕೆ ಮಾಡಬಹುದು ಎಂಬುದು ಸಾಬೀತಾದಂತಾಗಿದೆ. ಒಂದೊಮ್ಮೆ ನೀರಿನ ಜತೆ ಕಾರ್ಬನ್ ಡಯಾಕ್ಸೈಡ್ ಸೇರಿಕೊಂಡರೆ ನೀರಿನ ರುಚಿ ಬದಲಾಗುತ್ತದೆ.

ನೀರು ಶೇಖರಣೆ ಹೇಗೆ? ಹೆಚ್ಚು ದಿನಗಳ ಕಾಲ ನೀರನ್ನು ಬಳಕೆ ಮಾಡಬೇಕೆಂದರೆ ಫಿಲ್ಟರ್ ಮಾಡಬೇಕು, 15 ನಿಮಿಷಗಳ ಕಾಲ ಕುದಿಸಬೇಕು, ತಣ್ಣಗಾಗಲು ಬಿಡಬೇಕು, ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ವಾಟರ್ ಪ್ಯೂರಿಫೈಯರ್​ಗಳಿವೆ.

ನಲ್ಲಿ ನೀರು ಕಲುಷಿತಗೊಳ್ಳುತ್ತದೆಯೇ? ನಾವು ಎರಡು ಬಗೆಯ ನೀರನ್ನು ಕುಡಿಯುತ್ತೇವೆ, ಮೇಲ್ಮೈ ನೀರು ಹಾಗೂ ಅಂತರ್ಜಲ, ಮೇಲ್ಮೈ ನೀರನ್ನು ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳು ಒದಗಿಸುತ್ತವೆ ಅದರಲ್ಲಿ ಮೈಕ್ರೋಬ್ಸ್​ಗಳು ಇರುತ್ತವೆ. ಮತ್ತೊಂದು ಅಂತರ್ಜಲ ಅದಕ್ಕೆ ಬೋರ್​ವೆಲ್ ನೀರು ಎನ್ನಬಹುದು. ಇದು ಸುರಕ್ಷಿತವಾಗಿದ್ದು, ಇದನ್ನು ಹೆಚ್ಚು ದಿನಗಳ ಕಾಲ ಶೇಖರಿಸಿಡಬಹುದಾಗಿದೆ.

ನಮ್ಮ ಮನೆಗಳಲ್ಲಿ ನಲ್ಲಿ ನೀರು ತುಂಬಾ ಸುಲಭವಾಗಿ ಲಭ್ಯವಾಗುತ್ತದೆ. ಆದರೆ ಹೆಚ್ಚು ದಿನಗಳ ಕಾಲ ಈ ನೀರನ್ನು ಶೇಖರಿಸಿಡಲು ಸಾಧ್ಯವಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Mon, 23 May 22

VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ