Sugar Benefits: ಚರ್ಮದ ಕಾಂತಿ ಹೆಚ್ಚಿಸುತ್ತೆ: ಸಕ್ಕರೆಯ ವಿವಿಧ ಪ್ರಯೋಜನಗಳ ಬಗ್ಗೆ ತಿಳಿಯಿರಿ

Sugar Benefits: ನಾವು ಯಾವುದೇ ಆಹಾರ ಸೇವಿಸಿದರೂ ಅದು ಆರೋಗ್ಯದ ಜತೆ ನಮ್ಮ ಚರ್ಮದ ಮೇಲೆ ಪರಿಣಾಮವನ್ನು ಬೀರುತ್ತದೆ. ಕೆಲವು ವಿಷಯಗಳು ನಿಮ್ಮ ತ್ವಚೆಗೆ ವರವಾಗಿ ಇರಬಹುದು.

Sugar Benefits: ಚರ್ಮದ ಕಾಂತಿ ಹೆಚ್ಚಿಸುತ್ತೆ: ಸಕ್ಕರೆಯ ವಿವಿಧ ಪ್ರಯೋಜನಗಳ ಬಗ್ಗೆ ತಿಳಿಯಿರಿ
Sugar Benefits
Follow us
TV9 Web
| Updated By: ನಯನಾ ರಾಜೀವ್

Updated on: May 24, 2022 | 4:21 PM

ನಾವು ಯಾವುದೇ ಆಹಾರ ಸೇವಿಸಿದರೂ ಅದು ಆರೋಗ್ಯದ ಜತೆ ನಮ್ಮ ಚರ್ಮದ ಮೇಲೆ ಪರಿಣಾಮವನ್ನು ಬೀರುತ್ತದೆ. ಕೆಲವು ವಿಷಯಗಳು ನಿಮ್ಮ ತ್ವಚೆಗೆ ವರವಾಗಿ ಇರಬಹುದು. ಆದರೆ ಕೆಲವು ವಿಷಯಗಳು ನಿಮ್ಮ ಚರ್ಮವನ್ನು ಘಾಸಿಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ತ್ವಚೆಗೆ ಯಾವ ಆಹಾರ ಪದಾರ್ಥಗಳ ಸೇವನೆ ಚೆನ್ನಾಗಿ ಒಗ್ಗಿಕೊಳ್ಳುತ್ತದೆ. ಮತ್ತು ಯಾವ ಆಹಾರ ಪದಾರ್ಥಗಳ ಸೇವನೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ.

ಸಕ್ಕರೆ, ಇದನ್ನು ಪ್ರತಿಯೊಬ್ಬರ ಮನೆಯಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವಾರು ಜನರು ಹೇಳುತ್ತಾರೆ. ಈ ಸಕ್ಕರೆಯನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದು ಸಾಬೀತಾಗಿದೆ. ಆದರೆ ಈ ಸಕ್ಕರೆ ನಿಮ್ಮ ತ್ವಚೆಯ ಅಂದ ಕಾಪಾಡಲು ಸಹಾಯ ಮಾಡುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ.

  1. -ಸಕ್ಕರೆಯಲ್ಲಿ ಗ್ಲೈಕೋಲಿಕ್ ಆಮ್ಲವು ಸಮೃದ್ಧವಾಗಿದ್ದು, ಚರ್ಮ ಕೋಶಗಳಿಗೆ ಚಿಕಿತ್ಸೆ ನೀಡುತ್ತದೆ. ಸೂರ್ಯನ ಕಿರಣ ಮತ್ತು ಧೂಳಿನಿಂದ ಚರ್ಮದ ಕೋಶಗಳು ಹಾನಿಯಾಗುವುದನ್ನ ತಡೆಯುತ್ತದೆ.
  2. ಚರ್ಮದ ಅಂದ ಕಾಪಾಡಿಕೊಳ್ಳಲು ತೇವಾಂಶ ಬಹಳ ಮುಖ್ಯ. ನಿಮ್ಮ ಚರ್ಮದ ತೇವಾಂಶ ಕಾಪಾಡಿಕೊಳ್ಳಲ್ಲಿ ಸಕ್ಕರೆ ನಿಮಗೆ ಸಹಾಯ ಮಾಡುತ್ತದೆ. ಸಕ್ಕರೆಯ ಸ್ಕ್ರಬ್​ ಬಳಕೆ ಮಾಡಿ.
  3. ಸಕ್ಕರೆ ನಿಮ್ಮ ರಕ್ತದ ಪರಿಚಲನೆಗೆ ಸಹ ಹೆಚ್ಚು ಸಹಾಯಕ. ಇದು ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಹೇಗೆ ಅಂದರೆ, ಸಕ್ಕರೆ ಸ್ಕ್ರಬ್​ ಮಾಡುವುದು ನಿಮಗೆ ಸಹಾಯ ಮಾಡುತ್ತದೆ.
  4. ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿ ಹೆಚ್ಚಾಗುತ್ತದೆ. ಅದಕ್ಕೆ ಪರಿಹಾರ ಬೇಕು ಅಂದರೆ ನಿಂಬೆ ಮತ್ತು ಸಕ್ಕರೆ ಸ್ಕ್ರಬ್​ ಬಳಕೆ ಮಾಡಿ. ಇದು ನಿಮ್ಮ ಟ್ಯಾನ್​ ಹೋಗಲಾಡಿಸುತ್ತದೆ. ನಿಂಬೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಗುಣ ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ.
  5. ಒಂದು ಬೌಲ್‌ನಲ್ಲಿ 3 ಚಮಚ ಸಕ್ಕರೆಗೆ 5 ಚಮಚ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್​ ತಯಾರಿಸಿಕೊಳ್ಳಿ. ಈ ಪೇಸ್ಟ್​ ಅನ್ನು ಮುಖದ ಮೇಲೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್​ ಮಾಡಿ.
  6. ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್‌ ಇದು ನಿಜಕ್ಕೂ ದೊಡ್ಡ ತಲೆನೋವಿನ ಪರಿಸ್ಥಿತಿ ಎನ್ನಬಹುದು. ಅದು ನಮ್ಮ ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಸಮಸ್ಯೆಗೆ ಸಹ ಸಕ್ಕರೆಯೇ ಪರಿಹಾರ.
  7. ಇನ್ನು ಇದು ಸತ್ತ ಚರ್ಮಕ್ಕೆ ಜೀವ ನೀಡುತ್ತದೆ. ಸಕ್ಕರೆಯನ್ನು ತ್ವಚೆಗೆ ಬಳಸುವುದರಿಂದ ಕಳೆಗುಂದಿರುವ ತ್ವಚೆಯ ಬಣ್ನವನ್ನು ಮರಳಿ ಪಡೆಯಬಹುದು.
  8. ಒಂದು ಬೌಲ್‌ನಲ್ಲಿ 3 ಚಮಚ ಸಕ್ಕರೆ, 1 ಚಮಚ ಆಲಿವ್ ಎಣ್ಣೆ ಮತ್ತು 2 ಚಮಚ ಹಾಲಿನ ಕೆನೆಯನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ, ಪೇಸ್ಟ್​ ತಯಾರಿಸಿಕೊಳ್ಳಿ. ಈ ಪೇಸ್ಟ್​ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್​ ಮಾಡಿ. ನಂತರ ಇದನ್ನು ತಣ್ಣನೆಯ ನೀರಿನಿಂದ ತೊಳೆಯಿರಿ.
  9. ಸಿಹಿ ಪದಾರ್ಥಗಳ ಅತಿಯಾದ ಸೇವನೆ ಬೇಡ: ಅತಿಯಾದ ಸಿಹಿ ಪದಾರ್ಥಗಳ ಸೇವನೆಯು ನಿಮ್ಮ ಚರ್ಮಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಕೊಲಾಜನ್ ನ್ನು ಒಡೆಯುತ್ತದೆ. ನಿಮ್ಮ ಚರ್ಮದ ಸಡಿಲಿಕೆ ಮತ್ತು ಮಂದವಾಗಿ ಕಾಣುವಂತೆ ಮಾಡುತ್ತದೆ. ಸಕ್ಕರೆಯ ಅತಿಯಾದ ಸೇವನೆಯಿಂದಾಗಿ, ನಿಮ್ಮ ಚರ್ಮದ ರಂಧ್ರಗಳು ಮುಚ್ಚಿಹೋಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ಚರ್ಮದ ಮೇಲೆ ಬಹಳಷ್ಟು ಬಿರುಕುಗಳು ಗೋಚರಿಸುತ್ತವೆ.
  10. ಕೆಫೀನ್ ಹೊಂದಿರುವ ಪದಾರ್ಥಗಳ ಸೇವನೆ ಕಡಿಮೆ ಮಾಡಿ: ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಅಂಶವಿರುವ ವಸ್ತುಗಳ ಸೇವನೆಯು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ನಿಮ್ಮ ಚರ್ಮವೂ ಅದರಿಂದ ಅಪಾಯಕ್ಕೆ ಗುರಿಯಾಗುತ್ತದೆ. ಅನೇಕ ಜನರು ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಚಹಾವನ್ನು ಕುಡಿಯುವ ಅಭ್ಯಾಸ ಹೊಂದಿದ್ದಾರ. ಈ ಸಂದರ್ಭದಲ್ಲಿ ಅದು ನಿಮ್ಮ ಚರ್ಮಕ್ಕೆ ಇನ್ನಷ್ಟು ಅಪಾಯ ತಂದೊಡ್ಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ