ಮೊಸರಿನೊಂದಿಗೆ ಈ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ

Curd:ಮೊಸರಿಲ್ಲದೇ ಊಟವೇ ಪೂರ್ಣವಾಗುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲೂ ಮೊಸರಿನ ಬಳಕೆ ಮಾಡಲಾಗುತ್ತದೆ. ಆದರೆ ಮೊಸರಿನ ಜತೆ ಬೇರೆ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಮೊಸರಿನೊಂದಿಗೆ ಈ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ
Curd
Follow us
| Edited By: ನಯನಾ ರಾಜೀವ್

Updated on:May 24, 2022 | 3:39 PM

ಮೊಸರಿಲ್ಲದೇ ಊಟವೇ ಪೂರ್ಣವಾಗುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲೂ ಮೊಸರಿನ ಬಳಕೆ ಮಾಡಲಾಗುತ್ತದೆ. ಆದರೆ ಮೊಸರಿನ ಜತೆ ಬೇರೆ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಅದರಲ್ಲೂ ಬೇಸಿಯಲ್ಲಂತೂ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಲಸ್ಸಿ, ಮಜ್ಜಿಗೆ, ಮೊಸರು ಹೀಗೆ ಬೇರೆ ಬೇರೆ ವಿಧದಲ್ಲಿ ಮೊಸರನ್ನು ಸೇವಿಸುತ್ತಾರೆ.

ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೊಸರು ಬಳಸುವುದು ತುಂಬಾ ಮುಖ್ಯ. ಆದರೆ ಮೊಸರಿನೊಂದಿಗೆ ಕೆಲವು ಪದಾರ್ಥಗಳನ್ನು ಅಪ್ಪಿ ತಪ್ಪಿಯೂ ಸೇವಿಸಬಾರದು.

ಮೊಸರಿನೊಂದಿಗೆ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ. ಎರಡೂ ವಿಭಿನ್ನ ಕಿಣ್ವಗಳನ್ನು ಹೊಂದಿವೆ. ಎರಡೂ ವಸ್ತುಗಳ ಸೇವನೆಯು ಜೀರ್ಣಿಸಲು ತುಂಬಾ ಕಷ್ಟವಾಗುವಂತೆ ಮಾಡುತ್ತದೆ.

ಮೊಸರನ್ನು ಎಂದಿಗೂ ಬಿಸಿ ಚೀಸ್ ಮತ್ತು ಮೀನಿನೊಂದಿಗೆ ಸೇವಿಸಬಾರದು. ಈ ತಪ್ಪು ಮಾಡಿದಲ್ಲಿ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೇ, ಹೊಟ್ಟೆ ನೋವಾಗಬಹುದು.

ಕೆಲವೊಂದು ವಸ್ತುಗಳನ್ನು ಹಾಲಿನೊಂದಿಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಕೆಳಗೆ ನೀಡಿರುವ ವಸ್ತುಗಳು ಹಾಲಿನೊಂದಿಗೆ ಸೇವನೆ ಮಾಡುವುದು ಅಪಾಯಕಾರಿ.

ಈರುಳ್ಳಿ: ಪಲಾವ್ ಅಥವಾ ಪುಳಿಯೊಗರೆಗೆ ಮೊಸರಿನ ಜತೆಗೆ ಈರುಳ್ಳಿ ಬೆರೆಸಿ ರಾಯ್ತಾ ಮಾಡಿ ತಿನ್ನುವವರು ಕೂಡಲೇ ಇದನ್ನು ಬಿಟ್ಟುಬಿಡಿ. ಮೊಸರಿನ ಜತೆ ಯಾವುದೇ ಕಾರಣಕ್ಕೂ ಈರುಳ್ಳಿಯನ್ನು ಬೆರಕೆ ಮಾಡಬೇಡಿ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತವೆ.

ಮೀನು ಮತ್ತೆ ಮೊಸರನ್ನು ಒಟ್ಟಿಗೆ ಸೇವಿಸಬೇಡಿ: ಮೀನು ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿನ್ನಬೇಡಿ, ಇದನ್ನು ತಿನ್ನುವುದರಿಂದ ಹಲವು ರೀತಿಯ ತೊಂದರೆಗಳು ಉಂಟಾಗುತ್ತದೆ. ಅಜೀರ್ಣವೂ ನಿಮ್ಮನ್ನು ಕಾಡಬಹುದು.

ಮಾವಿನ ಹಣ್ಣು ತಿಂದ ಬಳಿಕ ಮೊಸರು ಸೇವನೆ ಬೇಡ: ಮ್ಯಾಂಗೋ ಮಿಲ್ಕ್​ ಶೇಕ್, ಅಥವಾ ಮೊಸರಿನೊಂದಿಗೆ ಮಾವಿನ ಹಣ್ಣನ್ನು ಬೆರೆಸಿ ಮಾಡಿದ ಪದಾರ್ಥಗಳಿಂದ ದೂರವಿರಿ. ಮೊಸರು ಬೆರೆಸಿದ ಮಾವಿನಹಣ್ಣನ್ನು ತಿನ್ನುವುದು ಅಥವಾ ಮಾವಿನ ಹಣ್ಣು ತಿಂದ ನಂತರ ಮೊಸರು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉದ್ಭವವಾಗುತ್ತದೆ.

ಉದ್ದಿನ ಬೇಳೆ: ಉದ್ದಿನ ಬೇಳೆ ಬಳಸಿ ಯಾವುದೇ ಪದಾರ್ಥವನ್ನು ಮಾಡಿದ್ದರೂ, ಅದನ್ನು ತಿಂದ ಬಳಿಕ ಮೊಸರು ಬಳಕೆ ಮಾಡದಿರುವುದು ಒಳಿತು. ಇದರಿಂದಾಗಿ ಹೊಟ್ಟೆ ಉಬ್ಬಸ, ಅಸಿಡಿಟಿ, ವಾಕರಿಗೆ ಇತ್ಯಾದಿ ಸಮಸ್ಯೆ ಆಗುತ್ತದೆ.

ಮೊಸರಿನಿಂದಾಗುವ ಪ್ರಯೋಜನಗಳು: ಮೊಸರು ಹಲ್ಲು ಹಾಗೂ ಮೂಳೆಗಳನ್ನು ಬಲಪಡಿಸಬಲ್ಲದಯ, ಜತೆಗೆ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಕೆಲವು ಪದಾರ್ಥಗಳೊಂದಿಗೆ ಮೊಸರನ್ನು ಬೆರೆಸಿ ತಿನ್ನುವುದರಿಂದ ಉಂಟಾಗುವ ಹಾನಿಯನ್ನು ಬಿಟ್ಟು, ಅದು ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Tue, 24 May 22

ತಾಜಾ ಸುದ್ದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ