AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Buttermilk Side Effects: ದಿನವೂ ಮಜ್ಜಿಗೆ ಕುಡಿಯುತ್ತೀರಾ?; ಇದರ ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿದಿರಲಿ!

Health Tips: ರಾತ್ರಿಯಲ್ಲಿ ಮಜ್ಜಿಗೆ ಕುಡಿಯಬೇಡಿ. ಮಜ್ಜಿಗೆಯಲ್ಲಿ ಹೆಚ್ಚಿನ ಸೋಡಿಯಂ ಅಂಶ ಇರುವುದರಿಂದ ಇದು ಮೂತ್ರಪಿಂಡದ ಕಾಯಿಲೆಗಳು ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಒಳ್ಳೆಯದಲ್ಲ.

Buttermilk Side Effects: ದಿನವೂ ಮಜ್ಜಿಗೆ ಕುಡಿಯುತ್ತೀರಾ?; ಇದರ ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿದಿರಲಿ!
ಮಜ್ಜಿಗೆ
TV9 Web
| Updated By: ಸುಷ್ಮಾ ಚಕ್ರೆ|

Updated on: Apr 25, 2022 | 5:42 PM

Share

ಈ ಬೇಸಿಗೆಯಲ್ಲಿ ಬಾಯಾರಿಕೆ ಕಡಿಮೆಯಾಗುವುದೇ ಇಲ್ಲ. ತಣ್ಣಗೆ ಜ್ಯೂಸ್ (Juice) ಅಥವಾ ಮಜ್ಜಿಗೆಯಿದ್ದರೆ (Butter Milk) ಊಟವೂ ಬೇಡ ಎನಿಸಿಬಿಡುತ್ತದೆ. ಮಜ್ಜಿಗೆ ಆರೋಗ್ಯಕರವಾಗಿರುವುದರಿಂದ ಅದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ನೀವಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಮಜ್ಜಿಗೆ ಬೇಸಿಗೆಯ (Summer Days) ದಿನಗಳಲ್ಲಿ ನಮ್ಮನ್ನು ತಂಪಾಗಿರಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಮ್ಮ ಚರ್ಮಕ್ಕೆ ಕೂಡ ಅತ್ಯಂತ ಪ್ರಯೋಜನಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ, ಬಾಯಿಯ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಅಲ್ಲದೆ, ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಮಜ್ಜಿಗೆ ಕೂಡ ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ?

ಮಜ್ಜಿಗೆಯನ್ನು ಕುಡಿದರೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯಲ್ಲಾಗುವ ಕಿರಿಕಿರಿ, ಕರುಳಿನ ಕಾಯಿಲೆಗಳು, ರಕ್ತಹೀನತೆ ಮತ್ತು ಹಸಿವಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಮಜ್ಜಿಗೆಯಲ್ಲಿ ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್, ಜೀವಸತ್ವಗಳು ಮತ್ತು ಕಿಣ್ವಗಳು ಇರುವುದರಿಂದ ಇದು ಬಹಳ ಆರೋಗ್ಯಕಾರಿಯಾದ ಪಾನೀಯ. ಮಜ್ಜಿಗೆ ಕುಡಿಯುವುದರಿಂದ ಮಲಬದ್ಧತೆ ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಕೂಡ ದೂರವಾಗುತ್ತವೆ

ಒಂದು ಕಪ್ (245 ಮಿಲಿ) ಮಜ್ಜಿಗೆ 98 ಕ್ಯಾಲೋರಿಗಳು, 8 ಗ್ರಾಂ ಪ್ರೋಟೀನ್, 3 ಗ್ರಾಂ ಫೈಬರ್, 22% ಕ್ಯಾಲ್ಸಿಯಂ, 16% ಸೋಡಿಯಂ ಮತ್ತು 22% ವಿಟಮಿನ್ ಬಿ 12 ಅನ್ನು ನಮ್ಮ ದೇಹಕ್ಕೆ ನೀಡುತ್ತದೆ. ಆದರೆ, ಮಜ್ಜಿಗೆಯು ಕೆಲವು ವ್ಯಕ್ತಿಗಳಲ್ಲಿ ಅಲರ್ಜಿಯನ್ನು ಉಂಟುಮಾಡುತ್ತದೆ. ಕಡಿಮೆ ಕೊಬ್ಬಿನ ಮಜ್ಜಿಗೆಯು ಹೆಚ್ಚಿನ ಕೊಬ್ಬಿನ ಆವೃತ್ತಿಗಳಿಗಿಂತ ಹೆಚ್ಚಿನ ಸೋಡಿಯಂ ಅನ್ನು ಹೊಂದಿರುತ್ತದೆ.

ಪ್ರತಿದಿನ ಮಜ್ಜಿಗೆ ಕುಡಿದರೆ ಉಂಟಾಗುವ ದುಷ್ಪರಿಣಾಮಗಳಿವು: ಶೀತ, ಜ್ವರ ಅಥವಾ ಅಲರ್ಜಿಯ ಸಮಯದಲ್ಲಿ ರಾತ್ರಿಯಲ್ಲಿ ಮಜ್ಜಿಗೆ ಕುಡಿಯಬೇಡಿ. ಮಜ್ಜಿಗೆಯನ್ನು ಮೊಸರನ್ನು ಕಡೆದು, ಬೆಣ್ಣೆಯನ್ನು ತೆಗೆದು ತಯಾರಿಸಲಾಗುತ್ತದೆ. ಈ ಕೆನೆ ಹೆಚ್ಚಾಗಲು ಹಲವು ದಿನಗಳವರೆಗೆ ಇಡಬೇಕು. ಆದ್ದರಿಂದ ಬೆಣ್ಣೆಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬಂದು ಗಂಟಲಿನ ಸೋಂಕು ಮತ್ತು ಶೀತವನ್ನು ಉಂಟುಮಾಡುವ ಕಾರಣ ಮಕ್ಕಳಿಗೆ ಮಜ್ಜಿಗೆ ನೀಡದಂತೆ ಸಲಹೆ ನೀಡಲಾಗುತ್ತದೆ. ಮೂತ್ರಪಿಂಡದ ಕಾಯಿಲೆ ಇರುವ ವ್ಯಕ್ತಿಯು ಮಜ್ಜಿಗೆಯನ್ನು ಸೇವಿಸಬಾರದು, ಏಕೆಂದರೆ ಅದರಲ್ಲಿ ಸೋಡಿಯಂ ಇರುತ್ತದೆ.

ರಾತ್ರಿಯಲ್ಲಿ ಮಜ್ಜಿಗೆ ಕುಡಿಯುವುದನ್ನು ತಪ್ಪಿಸಿ. ಏಕೆಂದರೆ ಇದು ಜ್ವರ, ಶೀತ ಅಥವಾ ಪರಾಗ ಅಲರ್ಜಿಯ ಅಪಾಯವನ್ನು ಹೆಚ್ಚಿಸುತ್ತದೆ. ಮಜ್ಜಿಗೆಯಲ್ಲಿ ಹೆಚ್ಚಿನ ಸೋಡಿಯಂ ಅಂಶ ಇರುವುದರಿಂದ ಇದು ಮೂತ್ರಪಿಂಡದ ಕಾಯಿಲೆಗಳು ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಒಳ್ಳೆಯದಲ್ಲ. ಸೋಡಿಯಂ ದೀರ್ಘಾವಧಿಯಲ್ಲಿ ಈ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು.

ಇದನ್ನೂ ಓದಿ: Buttermilk For Weight Loss: ದೇಹದ ಅತಿಯಾದ ತೂಕ ಇಳಿಕೆಗೂ ಮಜ್ಜಿಗೆ ಸಹಕಾರಿ

ಊಟದ ನಂತರ ಒಂದು ಲೋಟ ಮಜ್ಜಿಗೆ ಕುಡಿದು ವಜ್ರಾಸನ ಮಾಡಿ; ದೇಹದಲ್ಲಿನ ಬದಲಾವಣೆ ನಿಮ್ಮನ್ನು ಅಚ್ಚರಿಗೊಳಿಸುತ್ತದೆ