Jaggery Tea: ಬೆಲ್ಲದ ಚಹಾ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ?
Jaggery Tea: ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಬದಲು ಬೆಲ್ಲವನ್ನು ಬಳಸಿ ಎಂದು ಸಲಹೆ ನೀಡುತ್ತಾರೆ. ಆದರೆ ಬೆಲ್ಲದ ಚಹಾ ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಎಷ್ಟು ಮಂದಿಗೆ ಗೊತ್ತಿದೆ.
ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಬದಲು ಬೆಲ್ಲವನ್ನು ಬಳಸಿ ಎಂದು ಸಲಹೆ ನೀಡುತ್ತಾರೆ. ಆದರೆ ಬೆಲ್ಲದ ಚಹಾ ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಎಷ್ಟು ಮಂದಿಗೆ ಗೊತ್ತಿದೆ.
ಸಕ್ಕರೆ ಬದಲಿಗೆ ಬೆಲ್ಲದ ಉಪಯೋಗ ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಸಕ್ಕರೆಯನ್ನು ಬೆಲ್ಲ ಮತ್ತು ಜೇನುತುಪ್ಪದಂತಹ ಆರೋಗ್ಯಕರ ಪರ್ಯಾಯಗಳೊಂದಿಗೆ ಬದಲಾಯಿಸುವ ಮನಸ್ಥಿತಿಗೆ ಬಂದಿದ್ದಾರೆ.
ಈಗಂತೂ ಮರುಕಟ್ಟೆಯಲ್ಲಿ ಸಕ್ಕರೆಯನ್ನು ಬಳಸದೆ ಬೆಲ್ಲವನ್ನು ಬಳಸಿ ಅನೇಕ ಲಾಡುಗಳು, ಜಿಲೇಬಿ ಮತ್ತು ಅನೇಕ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿದ್ದು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರಿಗಾಗಿ ಲಭ್ಯವಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ರಕ್ತದ ಸಕ್ಕರೆಯ ಮಟ್ಟ ಬೆಲ್ಲದ ಚಹಾವನ್ನು ಆಗಾಗ್ಗೆ ಕುಡಿಯುವುದರಿಂದ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಒಂದು ದಿನದಲ್ಲಿ 2-3 ಕಪ್ಗಳಿಗಿಂತ ಹೆಚ್ಚು ಚಹಾವನ್ನು ಕುಡಿಯಬೇಡಿ.
ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೆಲ್ಲ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿದ್ದರೂ ಸಹ ಜೀವಸತ್ವಗಳು, ರಂಜಕ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದ್ದರೂ, ಹಾಲಿನೊಂದಿಗೆ ಅದರ ಸಂಯೋಜನೆಯು ಹಾನಿಕಾರಕವಾಗಬಹುದು.
ಜೀರ್ಣಕ್ರಿಯೆ ಸಮಸ್ಯೆಗಳು ಬೆಲ್ಲದ ಚಹಾವನ್ನು ಅತಿಯಾಗಿ ಸೇವಿಸುವುದರಿಂದ ಅಜೀರ್ಣ ಉಂಟಾಗುತ್ತದೆ. ನೀವು ದಿನಕ್ಕೆ 4 ಕಪ್‌ಗಿಂತ ಹೆಚ್ಚು ಬೆಲ್ಲದ ಚಹಾವನ್ನು ಸೇವಿಸಿದರೆ, ಅದು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು.
ಮೂಗಿನಿಂದ ರಕ್ತಸ್ರಾವ ಬೆಲ್ಲದ ಚಹಾವನ್ನು ಹೆಚ್ಚು ಕುಡಿಯುವುದರಿಂದ ಮೂಗಿನಿಂದ ರಕ್ತಸ್ರಾವವಾಗಬಹುದು. ಬೆಲ್ಲದ ತುಂಬಾ ರುಚಿಕರಾವಗಿರುತ್ತದೆ. ಮತ್ತು ಅದರ ಅತಿಯಾದ ಸೇವನೆಯು ಹಾನಿಯನ್ನುಂಟುಮಾಡುತ್ತದೆ.
ಪ್ರಯೋಜನಗಳು -ಬೆಲ್ಲದ ಟೀ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ತೂಕವನ್ನು ಕಡಿಮೆ(Weight Loss) ಮಾಡಲು ಸಹ ಸಹಾಯ ಮಾಡುತ್ತದೆ.
-ಬೆಲ್ಲವು ಕಬ್ಬಿಣದಲ್ಲಿ ಸಮೃದ್ಧವಾಗಿದೆ ಮತ್ತು ದೇಹಕ್ಕೆ ಕಬ್ಬಿಣದ ಅಗತ್ಯವಿರುತ್ತದೆ, ಏಕೆಂದರೆ ಇದು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸಲು ಕೆಲಸ ಮಾಡುತ್ತದೆ.
-ಬೆಲ್ಲದ ಟೀ ಸೇವನೆಯಿಂದ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
-ಬೆಲ್ಲದ ಟೀ ಕುಡಿಯುವುದರಿಂದ ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ