Schizophrenia: ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶೇ.7ರಷ್ಟು ಮಂದಿಗೆ ಸ್ಕಿಜೋಫ್ರೇನಿಯಾ

TV9 Digital Desk

| Edited By: ನಯನಾ ರಾಜೀವ್

Updated on:May 25, 2022 | 10:11 AM

Schizophrenia:ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶೇ.7ರಷ್ಟು ಮಂದಿ ಸ್ಕಿಜೋಫ್ರೇನಿಯಾಗೆ ತುತ್ತಾಗಿದ್ದಾರೆ. ಇಂತವರು ವಾಸ್ತವದಲ್ಲಿರುವುದಿಲ್ಲ ಸದಾ ಭಾವನಾಲೋಕದಲ್ಲೇ ಕಾಲ ಕಳೆಯುತ್ತಾರೆ.

Schizophrenia: ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶೇ.7ರಷ್ಟು ಮಂದಿಗೆ ಸ್ಕಿಜೋಫ್ರೇನಿಯಾ
Schizophrenia

ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶೇ.7ರಷ್ಟು ಮಂದಿ ಸ್ಕಿಜೋಫ್ರೇನಿಯಾಗೆ ತುತ್ತಾಗಿದ್ದಾರೆ. ಇಂತವರು ವಾಸ್ತವದಲ್ಲಿರುವುದಿಲ್ಲ ಸದಾ ಭಾವನಾಲೋಕದಲ್ಲೇ ಕಾಲ ಕಳೆಯುತ್ತಾರೆ. ಯಾರೋ ಕರೆದಂತಾಗುತ್ತದೆ. ಇನ್ಯಾರೋ ತಮ್ಮನ್ನು ಕೊಲ್ಲಲು ಬಂದಂತೆ ಅನಿಸುತ್ತದೆ. ಬೇರೆಯವರಿಗ್ಯಾರಿಗೂ ಕಾಣಿಸದ್ದು ಇವರಿಗೆ ಮಾತ್ರ ಕಾಣಿಸುತ್ತದೆ. ಅದೆಲ್ಲ ಭ್ರಮೆ ಎಂದರೆ ನಂಬುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ ಯಾಕೆಂದರೆ ಅವರು ಮಾನಸಿಕ ಅಸ್ವಸ್ಥರಾಗಿರುತ್ತಾರೆ.

ತಜ್ಞರ ಪ್ರಕಾರ, ಸ್ಕಿಜೋಫ್ರೇನಿಯಾ ರೋಗವನ್ನು ನಿರ್ಣಯಿಸಿ ಪತ್ತೆ ಹಚ್ಚಲು ಹಾಗೂ ನಿರ್ವಹಿಸಲು ಜನರಲ್ಲಿನ ಆಜ್ಞಾನ, ಅರಿವಿನ ಕೊರತೆ ಮತ್ತು ಮಾನಸಿಕ ಅಸ್ವಸ್ಥತೆ ಸಾಮಾಜಿಕ ಕಳಂಕವೆಂಬ ಅಂಶಗಳು ಅಡ್ಡಗೋಡೆಗಳಾಗಿವೆ. ಆದರೆ ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಇದು ನಿಭಾಯಿಸಲಾಗದ ಸಮಸ್ಯೆ ಅಲ್ಲ.

ವಿಶ್ವಾದ್ಯಂತ ಲಕ್ಷಾಂತರ ಜನರು ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದಾರೆ. ಇವರಿಗೆ ದಿನನಿತ್ಯದ ಸಾಮಾನ್ಯ ವಿಷಯಗಳು ದೊಡ್ಡ ಸವಾಲಿನಂತೆ ಕಾಣುತ್ತದೆ.

ಸ್ಕಿಜೋಫ್ರೇನಿಯಾದ ಲಕ್ಷಣಗಳೇನು? -ಆತಂಕ ಹುಟ್ಟಿಸುವ ನಡವಳಿಕೆ, ಸುತ್ತಲಿನ ಜನರೊಡನೆ ಬೆರೆಯಲು ಆಸಕ್ತಿ ಇರುವದಿಲ್ಲ.

-ಒಂಟಿಯಾಗಿ ಇರಲು ಬಯಸುತ್ತಾರೆ. ಹಲವು ಬಾರಿ ಆಕ್ರಮಣಕಾರಿ ಮತ್ತು ನಿಂದಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಎಲ್ಲ ರೋಗ ಲಕ್ಷಣಕ್ಕಿಂತ ಸವಾಲಿನದ್ದೆಂದರೆ ತಮಗೆ ಮಾನಸಿಕ ಸಮಸ್ಯೆಯಿದೆ ಎಂದು ಒಪ್ಪಿಕೊಳ್ಳುವುದಿಲ್ಲ ಹಾಗೂ ವೈದ್ಯರ ಸಹಾಯ ಪಡೆಯಲು ಮುಂದಾಗುವುದಿಲ್ಲ. ಇದೊಂದು ಪ್ರಾಚೀನ ಬಗೆಯ ಸ್ಕಿಜೋಫ್ರೇನಿಯಾ ರೋಗವಾಗಿದ್ದು, ಇದು ಹಲವಾರು ಲಕ್ಷಣಗಳನ್ನು ಒಳಗೊಂಡಿರುತ್ತದೆ.

-ಜನರು ತನಗೆ ತೊಂದರೆ ಮತ್ತು ನೋವುಂಟು ಮಾಡಲು ಬಂದಿದ್ದಾರೆ ಎಂಬ ನಂಬಿಕೆ. ಜನರು ತನ್ನ ಊಟಕ್ಕೆ ವಿಷ ಹಾಕುವರು ಮತ್ತು ನೀರನ್ನು ಹಾಗೂ ಇತರೆ ತಾನು ಸೇವಿಸುವುದನ್ನು ಮಲೀನ ಮಾಡುವರು ಎಂದುಕೊಳ್ಳುವುದು.

-ಕೆಲ ರೋಗಿಗಳು ಊಟ ಮತ್ತು ನೀರನ್ನು ತೆಗೆದುಕೊಳ್ಳದಂತರ ಅತಿರೇಕಕ್ಕೆ ಹೊಗುವರು ಅಥವಾ ಕೆಳಗೆ ಬಗ್ಗುವುದಿಲ್ಲ ಕಾರಣ ತಲೆಯಲ್ಲಿ ಕೇಳುವ ಶಬ್ಧವು ಹಾಗೆ ಸೂಚಿಸುವುದು.

ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಅಧ್ಯಾಯನಗಳ ಪ್ರಕಾರ, ಸಾವಿರಕ್ಕೆ 1.5 ಮತ್ತು 7ರಂತೆ ಸ್ಕಿಜೋಫ್ರೇನಿಯಾ ಕಾಯಿಲೆಯ ಅಪಾಯ ಬೆಳೆಯುತ್ತಿದೆ. ಭಾರತದಲ್ಲಿ ಸ್ಕಿಜೋಫ್ರೇನಿಯಾ ರೋಗಿಗಳು ವರದಿಗೆ ಸಿಗುವುದಿಲ್ಲ ಹಾಗೂ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಆದರೆ ಇದೀಗ ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಶೇ. 7 ರಷ್ಟು ಮಂದಿ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಭಾರತದಲ್ಲಿ ಮಾನಸಿಕ ಆರೋಗ್ಯ ಮತ್ತು ಅಸ್ವಸ್ಥತೆಯ ಬಗ್ಗೆ ವಿಶಾಲವಾಗಿ ಯೋಚಿಸಿ, ಮಾನಸಿಕ ರೋಗಿಗಳನ್ನು ಯಾವುದೇ ಮುಜುಗರ ಅಥವಾ ನಾಚಿಕೆ ಪಡದೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಮುಂದಾಗುವಂತೆ ಪ್ರೋತ್ಸಾಹಿಸಬೇಕು. ಭಾರತದಲ್ಲಿ ಮಾನಸಿಕ ಆಸ್ವಸ್ಥತೆಯನ್ನು ಸಾಮಾಜಿಕ ಕಳಂಕ ಎಂದು ಜನರು ನಂಬಿದ್ದಾರೆ, ಅದು ಕೂಡ ಬೇರೆ ಕಾಯಿಲೆಗಳಂತೆ ಸಹಜ,ಸೂಕ್ಷ್ಮ ಮನಸ್ಸಿನವರು ಇಂಥಾ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಈ ರೋಗ ಲಕ್ಷಣಗಳ ಬಗ್ಗೆ ಅರಿವು ಮತ್ತು ರೋಗಕ್ಕೆ ಅಗತ್ಯವಾದ ಚಿಕಿತ್ಸೆಯನ್ನು ಪಡೆಯುವುದರಿಂದ ಸ್ಕಿಜೋಫ್ರೇನಿಯಾ ಕಾಯಿಲೆಯನ್ನು ತಡೆಗಟ್ಟಬಹುದು.

ಆರೋಗ್ಯ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada