Narendra Modi Kundli: ಜಾಗತಿಕ ಮಟ್ಟದ ನಾಯಕರಾಗಲಿದ್ದಾರೆ ಪ್ರಧಾನಿ ಮೋದಿ ಎಂಬುದನ್ನು ಸೂಚಿಸುತ್ತಿದೆ ಜಾತಕ

8 Years of Modi Government: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೋದಿ ಜನ್ಮಜಾತಕವನ್ನು ಮಾಡರ್ನ್ ಅಸ್ಟ್ರಾಲಜಿ ನಿಯತಕಾಲಿಕೆ ಸಂಪಾದಕಿ ಗಾಯತ್ರಿ ದೇವಿ ವಾಸುದೇವ್ ಮಾಡಿದ್ದಾರೆ.

Narendra Modi Kundli: ಜಾಗತಿಕ ಮಟ್ಟದ ನಾಯಕರಾಗಲಿದ್ದಾರೆ ಪ್ರಧಾನಿ ಮೋದಿ ಎಂಬುದನ್ನು ಸೂಚಿಸುತ್ತಿದೆ ಜಾತಕ
ಗಾಯತ್ರಿ ದೇವಿ ವಾಸುದೇವ್
Follow us
TV9 Web
| Updated By: Srinivas Mata

Updated on:May 26, 2022 | 11:16 AM

ಮೇ 24ನೇ ತಾರೀಕಿಗೆ (24, 2022) ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಎಂಟು ವರ್ಷಗಳನ್ನು ಪೂರ್ತಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ವಿಮರ್ಶೆ ಮಾಡಿದಂತೆಯೇ ನರೇಂದ್ರ ಮೋದಿ ಅವರ ಜಾತಕ ವಿಶ್ಲೇಷಣೆಯ ಎರಡನೆ ಕಂತು ಸಹ ಇಲ್ಲಿದೆ. ಮಾಡರ್ನ್ ಅಸ್ಟ್ರಾಲಜಿ ನಿಯತಕಾಲಿಕೆ ಸಂಪಾದಕಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ಜ್ಯೋತಿಷಿಯಾಗಿದ್ದ ಬಿ.ವಿ. ರಾಮನ್ ಅವರ ಮಗಳು ಗಾಯತ್ರಿ ದೇವಿ ವಾಸುದೇವ್ ಅವರನ್ನು ಟಿವಿ9 ಕನ್ನಡ ಡಿಜಿಟಲ್ ಸಂಪರ್ಕಿಸಿದಾಗ, ಪತ್ರಿಕೆಯಲ್ಲಿ ಅದಾಗಲೇ ಮುದ್ರಿಸಿದ ಕೆಲವು ಅಂಶಗಳನ್ನು ನಮ್ಮ ಮಾಧ್ಯಮದಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಾರೆ. ಹಾಗೂ ಅದೇ ರೀತಿ ಸ್ವತಃ ಅವರು ಕೆಲ ಮುಖ್ಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮಾಡರ್ನ್ ಅಸ್ಟ್ರಾಲಜಿ ನಿಯತಕಾಲಿಕೆಯಲ್ಲಿ ಪ್ರಕಟವಾದ ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಸುಳಿವು, ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು, ಅಷ್ಟೇ ಅಲ್ಲ, ಭಾರತದ ಪ್ರಮುಖ ಸೇನಾಧಿಕಾರಿಯ ಜೀವಕ್ಕೆ ಇರುವ ಅಪಾಯದ ಬಗೆಗಿನ ಭವಿಷ್ಯ ಕರಾರುವಾಕ್​ ಆಗಿ ನಡೆದಿದೆ. ಅಂದ ಹಾಗೆ ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ, ಭವಿಷ್ಯದ ವಿಚಾರಗಳು ಸಂಪೂರ್ಣವಾಗಿ ಲೇಖಕಿಯದೇ ವಿನಾ ಸಂಸ್ಥೆಗೆ ಯಾವುದೇ ಸಂಬಂಧ ಇಲ್ಲ.

ನರೇಂದ್ರ ಮೋದಿ ಅವರ ಜನ್ಮ ದಿನಾಂಕ ಸೆಪ್ಟೆಂಬರ್ 17, 1950, ಬೆಳಗ್ಗೆ 9.50 ನಿಮಿಷ. ಜನನ ಕಾಲಕ್ಕೆ ಅವರಿಗೆ ಶನಿ ದಶೆ 10 ವರ್ಷ 1 ತಿಂಗಳು 3 ದಿನ ಬಾಕಿ ಇತ್ತು. 2022ರ ಏಪ್ರಿಲ್ ತನಕ ಅವರಿಗೆ ಕುಜ ದಶೆಯಲ್ಲಿ ರಾಹು ಭುಕ್ತಿ. ರಾಹು ಮತ್ತು ಕುಜ ಎರಡೂ ಉತ್ತಮ ಸ್ಥಿತಿಯಲ್ಲಿ ಇದ್ದರೂ ಪ್ರಧಾನಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಎಂಟನೇ ಸ್ಥಾನದಲ್ಲಿ ಇದ್ದವು. ಆದ್ದರಿಂದ 2022ನೇ ಇಸವಿ ಬಹಳ ಸವಾಲಿನ ವರ್ಷ ಆಗಲಿದೆ. ಅಷ್ಟೇ ಅಲ್ಲ, ಕಷ್ಟಗಳನ್ನು ಎದುರಿಸಲಿದ್ದಾರೆ. ಈ ಎರಡೂ ಗ್ರಹದ ಪ್ರಭಾವದಿಂದಾಗಿ ವಿಭಜನೆಗಳು, ಕೋಮು ಗಲಭೆ, ಹಿಂಸಾಚಾರ ಹಾಗೂ ಸ್ಫೋಟದಂಥ ಕೃತ್ಯಗಳಿಗೆ ಎಡೆ ಮಾಡಿಕೊಡುತ್ತದೆ. ಇಸ್ಲಾಮಿಕ್ ಮೂಲಭೂತವಾದಿ ಹಾಗೂ ಜಿಹಾದಿಳಿಂದಾಗಿ ಭಾರತ ವಿರೋಧಿ ಕಾರ್ಯಸೂಚಿಯೊಂದಿಗೆ ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡುತ್ತವೆ.

ಯಾವಾಗ ಕುಜ-ಶನಿಯ ಸಂಬಂಧ ಬಂದಾಗಹಾಗೂ ಕುಜ-ರಾಹು ಎದುರು ಬಂದಾಗ ಹೀಗೆ ಎರಡು ಸಂದರ್ಭದಲ್ಲಿ ಇಸ್ಲಾಮಿಕ್ ಸ್ಟೇಟ್​ನಿಂದ ಕನಿಷ್ಠ ಎರಡು ದಾಳಿ ನಡೆಯಬಹುದು. ಗಡಿಯಲ್ಲಿ ಸಾವು-ನೋವು, ಉದ್ವಿಗ್ನತೆ ಹೆಚ್ಚಾಗಬಹುದು. ವಿರೋಧ ಪಕ್ಷಗಳಿಂದ ಪ್ರತಿಭಟನೆಗಳು, ಅದಕ್ಕೆ ಭಾರತ ವಿರೋಧಿ ಶಕ್ತಿಗಳಿಂದ ಪ್ರಚೋದನೆ ಸಿಕ್ಕಿ ಸಾಮಾನ್ಯ ಜನಜೀವನಕ್ಕೆ ಸಮಸ್ಯೆ ಆಗಲಿದೆ. 2023ರ ಮಾರ್ಚ್ ನಂತರದಲ್ಲಿ ರವಿ ಭುಕ್ತಿಯು ಕೇಂದ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ತರಬಹುದು. ಆ ಬದಲಾವಣೆಯು ಚಾಂದ್ರಮಾನ ಯುಗಾದಿಯ ಹೊಸ ವರ್ಷ ಬರುವ ವೇಳೆ ಆಗುತ್ತದೆ. ಈಗಾಗಲೇ ಹಲವು ಬಾರಿ ಚರ್ಚಿಸಿದಂತೆ ನರೇಂದ್ರ ಮೋದಿ ಅವರ ಜಾತಕದಲ್ಲಿ ಗುರು ಗ್ರಹದ ವಿಶೇಷ ಶಕ್ತಿ ಇದೆ. ವರಾಹಮಿಹಿರರು ಬೃಹತ್ ಜಾತಕದಲ್ಲಿ ನೀಡಿರುವ ವೀರ್ಯೋತ್ಕಟ ಸಿದ್ಧಾಂತದ ಪ್ರಕಾರ ತುಲಾ ಲಗ್ನ ಹಾಗೂ ಲಗ್ನಾಧಿಪತಿ ಶುಕ್ರನ ಮೇಲೆ ಗುರುವಿನ ದೃಷ್ಟಿಯಿದೆ. ಈ ಸಿದ್ಧಾಂತದ ಪ್ರಕಾರ ಹೇಳುವುದಾದರೆ, ಅದೆಂಥ ಸವಾಲು- ಸಮಸ್ಯೆಯಾದರೂ ಪ್ರಧಾನಿ ಮೋದಿಯವರು ಸುಲಭವಾಗಿ ಗೆದ್ದು ಬರುತ್ತಾರೆ.

ನರೇಂದ್ರ ಮೋದಿಯವರ ಸಬ್​ ಕಾ ಸಾಥ್ ಸಬ್​ ಕಾ ವಿಕಾಸ್ ಆಲೋಚನೆಗೆ ಪೂರಕವಾಗಿ ಸುಪ್ರೀಂ ಕೋರ್ಟ್​ನಿಂದ ಕನಿಷ್ಠ ಮೂರು ತೀರ್ಪುಗಳು ಬರಲಿದ್ದು, ಅದಕ್ಕೆ ಗುರುವಿನ ಅನುಗ್ರಹ ಕಾರಣ ಆಗಲಿದೆ. ಮೋದಿಯವರ ಜಾತಕದಲ್ಲಿನ ಗುರು ಭುಕ್ತಿಯು ಜಾಗತಿಕ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಮತ್ತಷ್ಟು ಕೋಡು ಮೂಡಿಸಲಿದೆ. ಜತೆಗೆ ಮೋದಿ ಅವರಿಗೆ ಅಂತಾರಾಷ್ಟ್ರೀಯ ಪುರಸ್ಕಾರಗಳು ಲಭಿಸಲಿವೆ ಇನ್ನು ಮೇ 10, 2022ಕ್ಕೆ ಆಗುವ ಪ್ರಮುಖ ಗ್ರಹ ಬದಲಾವಣೆಯ ಕಾರಣಕ್ಕೆ ಆಡಳಿತ ವಿರೋಧಿ- ದೇಶವಿರೋಧಿ ಪ್ರತಿಭಟನೆಗಳು ಕೊನೆ ಆಗಲಿದೆ. ಕುಜ ದಶೆಯ ಗುರು ಭುಕ್ತಿ ಆರಂಭ ಆಗುತ್ತಿದ್ದಂತೆ, ಅಂದರೆ ಏಪ್ರಿಲ್ 2022ರ ನಂತರ ಮಹತ್ತರ ಬದಲಾವಣೆಗಳನ್ನು ಕಾಣಬಹುದು.

ಈ ಶುಭಕೃತ್ ನಾಮ ಸಂವತ್ಸರದಲ್ಲಿ ಜುಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲಿದೆ. ಅಲ್ಲಿ ಚುನಾವಣೆ ನಡೆದು, ಶಾಂತಿ ಸ್ಥಾಪನೆಗೆ ಬದ್ಧವಾಗಿರುವ ತಂಡ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇನ್ನು ಸರ್ಕಾರ ಹಾಗೂ ನರೇಂದ್ರ ಮೋದಿ ಅವರಿಗೆ ಸಂಬಂಧಿಸದ ಹಾಗೂ ಎಚ್ಚರಿಕೆ ಮಾತೊಂದು ಇದೆ. ಅದೇನೆಂದರೆ, ಕಾಂಗ್ರೆಸ್​ ಪಕ್ಷದ ಮಧ್ಯಂತರ ಅಧ್ಯಕ್ಷರಾದವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ನಾಯಕತ್ವದ ಸಮಸ್ಯೆ ಬಗೆಹರಿಯುವುದಿಲ್ಲ. ನಾಯಕತ್ವದ ಮೇಲೆ ವಿಶ್ವಾಸ ಕಳೆದುಕೊಳ್ಳಲಿದ್ದಾರೆ ಅದರ ಕಾರ್ಯಕರ್ತರು. ವಂಶಪಾರಂಪರ್ಯ ರಾಜಕಾರಣ ವಿರುದ್ಧದ ಪ್ರಕರಣಗಳಿಗೆ ಚಲನೆ ದೊರೆಯಲಿದೆ.

ಒಟ್ಟಾರೆಯಾಗಿ ನೋಡಬೇಕೆಂದರೆ, 2022ನೇ ಇಸವಿ ಬಹಳ ಕಷ್ಟದ ವರ್ಷ. ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಮಯದ ಪ್ರಕಾರ ಮತ್ತು ಪ್ರಧಾನಮಂತ್ರಿಗಳ ಮೂಲಕ ಸಮಸ್ಯೆಗಳು ಬಗೆಹರಿಯಲಿವೆ. ನರೇಂದ್ರ ಮೋದಿಯವರು ಜಾಗತಿಕ ಮಟ್ಟದ ನಾಯಕರಾಗಿ ಮಿಂಚಲಿದ್ದಾರೆ.

ಇನ್ನಷ್ಟು ಜ್ಯೋತಿಷ್ಯ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Narendra Modi Horoscope: ಸೋಲೇ ಕಾಣದ ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಸನ್ಯಾಸ ಯೋಗ

Published On - 11:13 am, Thu, 26 May 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್