ಮಂಗಳೂರು ಮಳಲಿ ಮಸೀದಿ ಬಳಿ ತಾಂಬೂಲ ಪ್ರಶ್ನೆ; ಭವಿಷ್ಯ ಹೇಳುವವರನ್ನು ಬಂಧಿಸಬೇಕು ಎಂದ ಡಿಕೆ ಶಿವಕುಮಾರ್

ಇದು ಭಾವನಾತ್ಮಕ ವಿಚಾರ, ಅದನ್ನು ಅವರ ಮನೆಯಲ್ಲಿಟ್ಟಿಕೊಳ್ಳಲಿ. ಸರ್ಕಾರ ಮಧ್ಯಪ್ರವೇಶಿಸಿ ಭವಿಷ್ಯ ಹೇಳುವವರನ್ನು ಬಂಧಿಸಬೇಕು. ದಕ್ಷಿಣ ಕನ್ನಡ ಡಿಸಿ, ಎಸ್​ಪಿ ಕೂಡಲೇ ಮಧ್ಯಪ್ರವೇಶಿಸಬೇಕು.

ಮಂಗಳೂರು ಮಳಲಿ ಮಸೀದಿ ಬಳಿ ತಾಂಬೂಲ ಪ್ರಶ್ನೆ; ಭವಿಷ್ಯ ಹೇಳುವವರನ್ನು ಬಂಧಿಸಬೇಕು ಎಂದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
TV9 Web
| Updated By: sandhya thejappa

Updated on:May 25, 2022 | 5:03 PM

ಬೆಂಗಳೂರು: ಮಂಗಳೂರಿನ ಮಳಲಿ ಮಸೀದಿ (Malali Masjid) ವಿವಾದದ ಬಗ್ಗೆ ಇಂದು (ಮೇ 25) ತಾಂಬೂಲ ಪ್ರಶ್ನೆ ಪ್ರಕ್ರಿಯೆ ನಡೆದಿದೆ. ತಾಂಬೂಲ ಪ್ರಶ್ನೆಯಲ್ಲಿ ದೇವರು ಇತ್ತು ಎಂಬ ಬಗ್ಗೆ ಕೇರಳದಿಂದ ಆಗಮಿಸಿದ್ದ ತಂತ್ರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ. ಇದು ಭಾವನಾತ್ಮಕ ವಿಚಾರ, ಅದನ್ನು ಅವರ ಮನೆಯಲ್ಲಿಟ್ಟಿಕೊಳ್ಳಲಿ. ಸರ್ಕಾರ ಮಧ್ಯಪ್ರವೇಶಿಸಿ ಭವಿಷ್ಯ ಹೇಳುವವರನ್ನು ಬಂಧಿಸಬೇಕು. ದಕ್ಷಿಣ ಕನ್ನಡ ಡಿಸಿ, ಎಸ್​ಪಿ ಕೂಡಲೇ ಮಧ್ಯಪ್ರವೇಶಿಸಬೇಕು. ಇವರು ರಾಜ್ಯವನ್ನು ಸಾಯಿಸುತ್ತಿದ್ದಾರೆಂದು ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.

ಮಸೀದಿ ಕಟ್ಟಿರುವುದು ವಾಸ್ತವ ಸತ್ಯ- ಸಿಟಿ ರವಿ: ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ ಸತ್ಯ. ನಾನು ಈಗಲೂ ಸವಾಲು ಹಾಕುತ್ತೇನೆ. ಶ್ರೀರಂಗಪಟ್ಟಣ ಜಾಮೀಯ ಮಸೀದಿಯ ಬಗ್ಗೆ ಅಧ್ಯಯನ ನಡೆಸಲಿ. ಪುರಾತತ್ವ ಇಲಾಖೆಯಿಂದ ಅಧ್ಯಯನ ಮಾಡಿಸಲಿ. ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ. ತಾಬೂಲ ಪ್ರಶ್ನೆ ನಂಬಿಕೆ ಇರುವವರು ಕೇಳಿದ್ದಾರೆ. ಬೇರೆಯವರ ನಂಬಿಕೆ ನಾವು ಹೇಗೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಕಾನೂನು ಅಡಿಯಲ್ಲಿ ವಿವಾದ ಇತ್ಯರ್ಥವಾಗಲಿದೆ. ಕೆಲವರು ಇಡಿಯಾಗಿ ಸಿಗುವ ಓಟಿಗಾಗಿ ಕೆಲವರು ಜ್ವಲ್ಲು ಸುರಿಸಿಕೊಂಡು ಹೋಗುತ್ತಾರೆ. ಸತ್ಯ ಗೊತ್ತಿದ್ದರೂ ಓಟಿಗಾಗಿ ರಾಜಕೀಯ ಮಾಡುತ್ತಾರೆ. ನಾವು ಓಟಿಗಾಗಿ ರಾಜಕೀಯ ಮಾಡಿಲ್ಲ. ನಾಲ್ಕು ತಲೆಮಾರು ಇದೇ ವಿಚಾರಗಳ ಮೇಲೆ ಹೋರಾಟ ಮಾಡಿದ್ದೇವೆ ಎಂದು ದೆಹಲಿಯಲ್ಲಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: 8 Years of Modi Government: ಏಕರೂಪ ನಾಗರಿಕ ಸಂಹಿತೆ: ಮೋದಿ ಸರ್ಕಾರದ ಎದುರು ಹಲವು ಸವಾಲುಗಳು

ಇದನ್ನೂ ಓದಿ
Image
Explained, IPL 2022: ಸೋತರೂ ರಾಜಸ್ಥಾನ್ ತಂಡಕ್ಕೆ ಯಾಕೆ ಮತ್ತೊಂದು ಚಾನ್ಸ್?
Image
8 Years of Modi Government: ಏಕರೂಪ ನಾಗರಿಕ ಸಂಹಿತೆ: ಮೋದಿ ಸರ್ಕಾರದ ಎದುರು ಹಲವು ಸವಾಲುಗಳು
Image
ದೇವನೂರು ಮಹದೇವ ತಿರುಗೇಟು: ಸಚಿವ ನಾಗೇಶ್ ನಾಗಪುರದ ಆರ್‌ಎಸ್‌ಎಸ್‌ ಪ್ರಭಾವಕ್ಕೆ ಒಳಗಾಗಿದ್ದಾರೆ, ನನ್ನ ಪಾಠ ಮಾಡಬೇಡಿ ಎಂದು ಸರ್ಕಾರ ಹೇಳಲಿ
Image
Amalapuram Tension ಆಂಧ್ರ ಪ್ರದೇಶದ ಅಮಲಾಪುರಂನಲ್ಲಿ ಹಿಂಸಾಚಾರ; 46 ಮಂದಿ ಬಂಧನ, ನಗರದಾದ್ಯಂತ ಬಿಗಿ ಬಂದೋಬಸ್ತ್

ಇನ್ನು ಮೈಸೂರಿನಲ್ಲಿ ತಾಂಬೂಲ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ತಾಂಬೂಲ ಪ್ರಶ್ನೆಗಿಂತ ಕೇಶವಕೃಪಾದಲ್ಲೇ ಎಲ್ಲವೂ ತೀರ್ಮಾನ ಮಾಡಲಾಗುತ್ತದೆ. ಅಲ್ಲಿಂದ ಬರುವ ಸಂದೇಶಗಳನ್ನ ಇವರು ಪಾಲಿಸುತ್ತಾರೆ. ಈ ರೀತಿಯ ವಾತಾವರಣದಿಂದ ದೇಶಕ್ಕೆ ಉತ್ತಮ ಭವಿಷ್ಯ ಇಲ್ಲ. ಇನ್ನೂ ಒಂದು ವರ್ಷ ಇಂತಹ ಬೆಳವಣಿಗೆಗಳು ನಡೆಯುತ್ತಿರುತ್ತವೆ‌. ಶಾಂತಿ ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ ಎಂದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Wed, 25 May 22