ದೇವನೂರು ಮಹದೇವ ತಿರುಗೇಟು: ಸಚಿವ ನಾಗೇಶ್ ನಾಗಪುರದ ಆರ್‌ಎಸ್‌ಎಸ್ ಪ್ರಭಾವಕ್ಕೆ ಒಳಗಾಗಿದ್ದಾರೆ, ನನ್ನ ಪಾಠ ಮಾಡಬೇಡಿ ಎಂದು ಸರ್ಕಾರ ಹೇಳಲಿ
ಸಚಿವರು ನಾಗಪುರದ ಆರ್‌ಎಸ್‌ಎಸ್ ಪ್ರಭಾವಕ್ಕೆ ಒಳಗಾಗಿದ್ದಾರೆ. ಶೈಕ್ಷಣಿಕ ಕೊರತೆ ಉಂಟಾಗಬಾರದು, ಮೌಢ್ಯಕ್ಕೆ ಒಳಗಾಗಬಾರದು. ಅದಕ್ಕೆ ಪರ್ಯಾಯ ವಾಟ್ಸಾಪ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನ, ಕೈ ಬಿಟ್ಟ ಪಠ್ಯಗಳ ಬಗ್ಗೆ ಕಮ್ಮಟ ಕಾರ್ಯಾಗಳ ಮೂಲಕ ಮನವರಿಕೆ ಮಾಡ್ತೀವಿ. -ದೇವನೂರು ಮಹದೇವ
ಮೈಸೂರು: ದೇವನೂರ ಮಹಾದೇವರ(Devanur Mahadeva) ಪಾಠಗಳು ಕೈ ಬಿಡಲ್ಲ ಎಂಬ ಸಚಿವ ಬಿ.ಸಿ.ನಾಗೇಶ್(BC Nagesh) ಹೇಳಿಕೆಗೆ ಮೈಸೂರಲ್ಲಿ ಸಚಿವ ನಾಗೇಶ್ಗೆ ದೇವನೂರು ಮಹದೇವ ತಿರುಗೇಟು ಕೊಟ್ಟಿದ್ದಾರೆ. ಪಠ್ಯ ಪುಸ್ತಕ ಪ್ರಿಂಟ್ ಆಗಿದೆ ಅಂದ್ರೆ ವಾಪಾಸ್ ಕಿತ್ತುಕೊಳ್ಳೋಕೆ ಆಗುತ್ತಾ? ಪಠ್ಯ ಮಕ್ಕಳ ಕೈ ಸೇರಿದ್ದರೆ ಸರ್ಕಾರ, ಅಧಿಕಾರ ಅವರ ಕೈನಲ್ಲೇ ಇದೆ. ಪಾಠ ಮಾಡಬೇಡಿ ಎಂದು ಸರ್ಕಾರ ಹೇಳಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಸಚಿವರು ನಾಗಪುರದ ಆರ್‌ಎಸ್‌ಎಸ್ ಪ್ರಭಾವಕ್ಕೆ ಒಳಗಾಗಿದ್ದಾರೆ. ಶೈಕ್ಷಣಿಕ ಕೊರತೆ ಉಂಟಾಗಬಾರದು, ಮೌಢ್ಯಕ್ಕೆ ಒಳಗಾಗಬಾರದು. ಅದಕ್ಕೆ ಪರ್ಯಾಯ ವಾಟ್ಸಾಪ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನ, ಕೈ ಬಿಟ್ಟ ಪಠ್ಯಗಳ ಬಗ್ಗೆ ಕಮ್ಮಟ ಕಾರ್ಯಾಗಳ ಮೂಲಕ ಮನವರಿಕೆ ಮಾಡ್ತೀವಿ. ಈ ಮೂಲಕ ಪ್ರಜಾಸತ್ತಾತ್ಮಕವಾಗಿ ಗಟ್ಟಿಗೊಳಿಸುತ್ತೇವೆ ಎಂದು ಮೈಸೂರಿನಲ್ಲಿ ಹಿರಿಯ ಸಾಹಿತಿ ದೇವನೂರು ಮಹದೇವ ಹೇಳಿದ್ರು.
ನನ್ನ ಪಠ್ಯ ಮುದ್ರಣವಾಗಿದ್ರೆ ಅದನ್ನ ಪಾಠ ಮಾಡಬೇಡಿ. ಪಿ.ಲಂಕೇಶ್, ಬಸವರಾಜ್, ಸಾರಾ ಅಬ್ಬುಬಕರ್ ಇಂತವರ ಪಠ್ಯವನ್ನ ಕೈಬಿಟ್ಟಿದ್ದಾರೆ. ಇವರ ಬರಹಗಳನ್ನು ಕೈಬಿಟ್ಟು ಹೆಡ್ಗೆವಾರ್, ಸೂಲಿಬೆಲೆಯವರ ಪಠ್ಯವನ್ನು ಸೇರಿಸಲಾಗಿದೆ. ಸ್ವತಂತ್ರ ಹೋರಾಟದಿಂದ ವಿಮುಖವಾದವರು. ಸೂಲಿಬೆಲೆ ದ್ವೇಷವನ್ನು ಪಸರಿಸುವ ವ್ಯಕ್ತಿ. ಇವರು ಚಾತುರ್ವರ್ಣ ಪ್ರದೇಧಕ್ಕೆ ಸೇರಿದವರು. ಇಂತವರ ಪಠ್ಯದ ನಡುವೆ ನಾನು ಇರಬೇಕ ಅನಿಸಿತು. ಇದು ಮಾಡುತ್ತಿರುವುದು ಕೇಸರಿಕರಣವೆ. ಇದಕ್ಕೆ ಶಾಸ್ತ್ರ ಕೇಳಬೇಕಿಲ್ಲ. ನಾವು ಇನ್ನು ಮುಂದೆ ಮಕ್ಕಳ ವೈಚಾರಿಕಕ್ಕೆ ದಕ್ಕೆ ಬಾರದ ರೀತಿ ಪಠ್ಯ. ಅವರ ಮಾನವೀಯತೆ ಹೆಚ್ಚಿಸುವ ನಿಟ್ಟಿನ ಪಠ್ಯಗಳನ್ನು ಹೇಳಿಕೊಡುತ್ತೇವೆ. ಇದಕ್ಕಾಗಿ ಪರ್ಯಾಯ ಶಿಕ್ಷಣ ಕೊಡುವ ಒಂದು ಗುಂಪಿದೆ. ಇವರ ಜೊತೆ ನಾನಿರುತ್ತೇನೆ. ಇದನ್ನೂ ಓದಿ: IPL 2022: ಈ ಸೀಸನ್ನ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೆಲ್ಲುವವರು ಯಾರು? ರೇಸ್ನಲ್ಲಿರುವವರ ಪಟ್ಟಿ ಹೀಗಿದೆ
ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳಿಗೆ ಪಠ್ಯ ತಲುಪಿಸುತ್ತೇವೆ. ಸಂವಿಧಾನದ ಆಶಯಗಳನ್ನ ಹಾಡಿನ ಮೂಲಕ ಹೇಳಿಕೊಡುತ್ತೇವೆ. ಇದು ನನ್ನ ನಿಲುವಿರುವುದು. ಈಗಾಗಲೇ ಪಠ್ಯ ಮುದ್ರಣವಾಗಿದೆ ಎನ್ನುತ್ತಿದ್ದಾರೆ. ಈ ರೀತಿ ಮುದ್ರಣವಾಗಿದ್ರೆ ಅದನ್ನ ಮಕ್ಕಳಿಗೆ ಪಾಠ ಮಾಡಬೇಡಿ ಎಂದು ಸಾಹಿತಿ ದೇವನೂರು ಮಹದೇವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಒಂದೇ ಪಂಥದ ಪಠ್ಯಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ? ಶಿಕ್ಷಣದ ಜೊತೆಗೆ ಬೇರೆ ಕ್ಷೇತ್ರದಲ್ಲೂ ಬದಲಾವಣೆ ಮಾಡಿದ್ದೇವೆ ಎಂದು ಮೈಸೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ. ವಾಜಪೇಯಿ ಸರ್ಕಾರ ಬರುವವರೆಗೂ ಅಂತಾರಾಜ್ಯ ರಸ್ತೆ ಇರಲಿಲ್ಲ. ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ, ಅದರ ಬಗ್ಗೆಯೂ ಮಾತನಾಡಿ. ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದ್ರೆ ಅದು ವಿರೋಧವಲ್ಲ. ಆಗ ಒಂದೇ ಪಂಥದ ಪಠ್ಯಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ? ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿದೆ. ನಾವು ಎಲ್ಲವನ್ನೂ ಒಪ್ಪಿಕೊಂಡು ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಪರಿಷ್ಕರಣೆ ಮಾಡ್ತಿದ್ದಂತೆ ಚಾತುರ್ವರ್ಣ ನೆನಪಾಗುತ್ತಿದೆ ಎಂದು ಸಾಹಿತಿಗಳು, ಪ್ರಗತಿಪರರ ವಿರುದ್ಧ ಸಚಿವ ಬಿ.ಸಿ.ನಾಗೇಶ್ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: Viral Video: ವಾಟ್ ಎ ಕ್ಯಾಚ್…ಮಿಂಚಿನ ವೇಗದಲ್ಲಿ ಚೆಂಡನ್ನು ಹಿಡಿದ ಹರ್ಮನ್ಪ್ರೀತ್
ಸಂವಿಧಾನ ಬುಡಮೇಲು ಮಾಡುವ ದೊಡ್ಡ ಹುನ್ನಾರ ನಡೆದಿದೆ ಇನ್ನು ಮತ್ತೊಂದು ಕಡೆ ನೂತನ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಪಾಠ ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದು ರಾಷ್ಟ್ರವನ್ನು ಕಟ್ಟುವ ಪಾಠವನ್ನು ಹೆಡ್ಗೆವಾರ್ ಪಾಠದಿಂದಲೇ ಕಲಿಯಬೇಕಾ? ಸಂವಿಧಾನ ಬುಡಮೇಲು ಮಾಡುವ ದೊಡ್ಡ ಹುನ್ನಾರ ನಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಕ್ರಮಣ ಮಾಡಲು ಕೆಲವರು ಹೊರಟಿದ್ದಾರೆ. ಮಹಾರಾಷ್ಟ್ರ, ಗುಜರಾತ್ ನಂತರ ಕರ್ನಾಟಕದಲ್ಲಿ ಶುರುವಾಗಿದೆ. ಈ ಹಿಂದೆ ಪಠ್ಯಪುಸ್ತಕದಲ್ಲಿ ಗೌಪ್ಯವಾಗಿ ನಡೆಯುತ್ತಿದ್ದ ಆಕ್ರಮಣ ಇದೀಗ ಅಧಿಕಾರದ ಬಲದಿಂದಾಗಿ ಖುಲ್ಲಂಖುಲ್ಲಾ ನಡೆಯುತ್ತಿದೆ. ಹೇಗೆ ಕಟ್ಟಿಕೊಳ್ಳಬೇಕೆಂದು ಮಕ್ಕಳಿಗೆ ಇತಿಹಾಸದಿಂದ ಹೇಳಬೇಕು. ಹಿಂದೆ ಹೇಗಿತ್ತು? ಮುಂದೆ ಹೇಗೆ ಕಟ್ಟಿಕೊಳ್ಳಬೇಕು ಹೇಳಿಕೊಡಬೇಕು. ಮೂಲಭೂತ ಮೌಲ್ಯಗಳನ್ನು ಪಾಲಿಸದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮಾನವ ಹಕ್ಕುಗಳು, ಸಮುದಾಯದ ವಿಚಾರ ಪಠ್ಯದಲ್ಲಿ ಸೇರಿಸಬೇಕು. ಪರಿಷ್ಕರಣೆ ಹೆಸರಿನಲ್ಲಿ ಸುಮಾರು 2.5 ಕೋಟಿ ರೂ. ನಷ್ಟವಾಗಿದೆ. ನಷ್ಟದ ಮೊತ್ತವನ್ನು ಶಿಕ್ಷಣ ಸಚಿವರಿಂದ ವಸೂಲಿ ಮಾಡಬೇಕು ಎಂದು ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಆಗ್ರಹಿಸಿದ್ದಾರೆ. ಪಠ್ಯಪುಸ್ತಕ ರಚನೆ ಅಥವಾ ಪರಿಷ್ಕರಣೆ ಮಾಡುವಾಗ ಪ್ರಜಾಸತ್ತಾತ್ಮಕ ವಿಧಾನ ಅನುಸರಿಸಬೇಕು. ಪಠ್ಯಕ್ರಮ ಪರಿಷ್ಕರಿಸುವಾಗ ಪಠ್ಯಕ್ರಮ ಮೊದಲು ಸಿದ್ಧಪಡಿಸಬೇಕು. ಪಠ್ಯ ವಸ್ತುವನ್ನು ತಯಾರಿಸಿದ ಬಳಿಕ ಪಠ್ಯಪುಸ್ತಕ ರಚನೆ ಆಗುತ್ತದೆ. ಕ್ರಮಬಿಟ್ಟು ಮಾಡ್ತಿವಿ ಅಂದ್ರೆ ಅದು ಎಡಬಿಡಂಗಿ ಕೆಲಸ ಮಾಡಿದಂತೆ. ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸುತ್ತದೆ. ಮನಸೋ ಇಚ್ಛೆ ಸೇರಿಸುವುದು, ತೆಗೆಯುವುದು ಮಾಡಲಾಗುವುದಿಲ್ಲ. ಪಠ್ಯಪುಸ್ತಕ ರಚಿಸುವಾಗ ಐದು ಆಯಾಮಗಳನ್ನು ಗಮನಿಸಬೇಕು. ವಿವಿಧ ಆಯಾಮಗಳಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ಆಗುತ್ತದೆ. ಪ್ರತಿನಿಧಿಸುವ ಬಗೆ, ಅನುಭವ, ಗುರಿ, ಉದ್ದೇಶ ಹೀಗೆ ವಿವಿಧ ಆಯಾಮ. ಪಠ್ಯಪುಸ್ತಕದಲ್ಲಿ ಇತಿಹಾಸ ಬದಲಾಯಿಸುವುದು ಹೊಸ ಚರ್ಚೆ ಅಲ್ಲ. ಈ ಹಿಂದಿನಿಂದಲೂ ಚರ್ಚೆಗಳು ನಡೆದುಕೊಂಡು ಬರುತ್ತಿದೆ. ಸದ್ಯ ಸಂವಿಧಾನ ಪರ & ವಿರೋಧಿಗಳ ಗುಂಪು ಸೃಷ್ಟಿಯಾಗಿದೆ. ಅಧಿಕಾರಿಗಳು ಮೂಕಪ್ರೇಕ್ಷರಾಗಿದ್ದು ಇವತ್ತಿನ ದುರಂತವಾಗಿದೆ. ಶಿಕ್ಷಣ ಸಚಿವರಾದವರು ಪಕ್ಷದ ಕಾರ್ಯಕರ್ತರಾಗಿ ವರ್ತಿಸಿದ್ದಾರೆ. ರೋಹಿತ್ ಚಕ್ರತೀರ್ಥ ಸಿಇಟಿ ಪ್ರೊಫೆಸರ್ ಎಂಬುವುದು ಹಾಸ್ಯಾಸ್ಪದ ಎಂದು ನಿರಂಜನ ಆರಾಧ್ಯ ವಾಗ್ದಾಳಿ ನಡೆಸಿದ್ರು.
Published On - 4:32 pm, Wed, 25 May 22