ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥ, ವಿದ್ಯಾರ್ಥಿಗಳು ಏನ್ನು ಕಲಿಯಬೇಕು ಎಂಬುವುದನ್ನು ನಿರ್ಧರಿಸಬೇಕೆ? -ದಿನೇಶ್ ಗುಂಡೂರಾವ್

ಸರ್ಕಾರ ಈ ಶತಮೂರ್ಖನಿಗೆ ಪಠ್ಯ ಪರಿಷ್ಕರಿಸುವ ಜವಾಬ್ದಾರಿ ನೀಡಿದೆ. ಇಂತಹ ವ್ಯಕ್ತಿ ಪಠ್ಯವನ್ನು ನಿರ್ಧರಿಸುವುದು ದುರಂತವಲ್ಲವೆ? ರೋಹಿತ್ ಚಕ್ರತೀರ್ಥ ಎಂಬ‌ ಈ ವಿಕೃತ ಮನಸ್ಸಿನ ವ್ಯಕ್ತಿ 2017ರಲ್ಲಿ ನಾಡಗೀತೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ. ನಮ್ಮ ಕನ್ನಡದ ಬಾವುಟವನ್ನು ಒಳ ಉಡುಪಿಗೆ ಹೋಲಿಸಿದ್ದ.

ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥ, ವಿದ್ಯಾರ್ಥಿಗಳು ಏನ್ನು ಕಲಿಯಬೇಕು ಎಂಬುವುದನ್ನು ನಿರ್ಧರಿಸಬೇಕೆ? -ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
Follow us
| Updated By: ಆಯೇಷಾ ಬಾನು

Updated on:May 23, 2022 | 10:39 PM

ಬೆಂಗಳೂರು: ರೋಹಿತ್ ಚಕ್ರತೀರ್ಥ ಎಂಬ‌ ವಿಕೃತ ಮನಸ್ಸಿನ ವ್ಯಕ್ತಿ 2017ರಲ್ಲಿ ನಾಡಗೀತೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಪದ್ಯವಿದು. ನಾಡಗೀತೆಗೆ ಅವಮಾನ ಮಾಡಿದ, ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದ ರೋಹಿತ್ ಚಕ್ರತೀರ್ಥ ಎಂಬ ಮತಾಂಧ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ಎಂದು ಟ್ವಿಟರ್ನಲ್ಲಿ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ ಕಾಡಿದ್ದಾರೆ.

ಸರ್ಕಾರ ಈ ಶತಮೂರ್ಖನಿಗೆ ಪಠ್ಯ ಪರಿಷ್ಕರಿಸುವ ಜವಾಬ್ದಾರಿ ನೀಡಿದೆ. ಇಂತಹ ವ್ಯಕ್ತಿ ಪಠ್ಯವನ್ನು ನಿರ್ಧರಿಸುವುದು ದುರಂತವಲ್ಲವೆ? ರೋಹಿತ್ ಚಕ್ರತೀರ್ಥ ಎಂಬ‌ ಈ ವಿಕೃತ ಮನಸ್ಸಿನ ವ್ಯಕ್ತಿ 2017ರಲ್ಲಿ ನಾಡಗೀತೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ. ನಮ್ಮ ಕನ್ನಡದ ಬಾವುಟವನ್ನು ಒಳ ಉಡುಪಿಗೆ ಹೋಲಿಸಿದ್ದ. ನಾಡಗೀತೆಗೆ ಅಪಮಾನಿಸಿದ್ದ ಈ ಮತಾಂಧ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ. ಇಂಥವನನ್ನ ಅಧ್ಯಕ್ಷನನ್ನಾಗಿ ಮಾಡಿರುವುದು ನಾಚಿಕೆಗೇಡು. ಅಧ್ಯಯನ ಇಲ್ಲದ, ಅನುಭವ ಇಲ್ಲದ ರೋಹಿತ್‌ನಂಥವರು ವಿದ್ಯಾರ್ಥಿಗಳು ಏನ್ನು ಕಲಿಯಬೇಕು ಎಂದು ನಿರ್ಧರಿಸಬೇಕೆ? ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಲಿಕಾ ವಿಷಯವನ್ನು ಇಂತಹ ವ್ಯಕ್ತಿ ನಿರ್ಧರಿಸಲು ಹೊರಟಿರುವುದು ವಿಪರ್ಯಾಸ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕುವೆಂಪು ಅಥವಾ ಯಾರನ್ನೋ ಅವಮಾನಿಸಬೇಕೆಂಬ ಉದ್ದೇಶ ಪರಿಷ್ಕರಣಾ ಸಮಿತಿಗೆ ಇಲ್ಲ ಹುಬ್ಬಳ್ಳಿ: ಕುವೆಂಪು ಅಥವಾ ಯಾರನ್ನೋ ಅವಮಾನಿಸಬೇಕೆಂಬ ಉದ್ದೇಶ ಪರಿಷ್ಕರಣಾ ಸಮಿತಿಗೆ ಇಲ್ಲ. ಒಳ್ಳೆಯ ವಿಚಾರಧಾರೆ ಹಾಕಬೇಕೆನ್ನೋದಿದೆ ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಈ ವಿಚಾರವನ್ನು ವಿವಾದ ಮಾಡ್ತಿರೋರು ಕಮ್ಯುನಿಷ್ಟರು ಹಾಗೂ ಕಾಂಗ್ರೆಸ್ಸಿಗರು. ಮುಸ್ಲಿಂ, ಕ್ರಿಶ್ಚಿಯನ್ ವಿಚಾರಧಾರೆ ಇರೋರು ಇದನ್ನ ವಿರೋಧಿಸಿ ವಿವಾದ ಮಾಡ್ತಿದ್ದಾರೆ ಎಂದು ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಸರಳತೆ ಮೆರೆದ ಶಿಕ್ಷಣ ಸಚಿವ ನಾಗೇಶ್ ಜೆಪಿ ನಗರದಿಂದ ಮಂತ್ರಿ ಮಾಲ್​ಗೆ ಮೆಟ್ರೋ ರೈಲಲ್ಲಿ ಪ್ರಯಾಣಿಸಿದರು

ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ ಎನ್ನೋದು ಸಾಧ್ಯನೇ ಇಲ್ಲ. ಅವರ ಒಳ್ಳೆಯತನ, ವಿಚಾರಧಾರೆಯನ್ನೆ ಮಕ್ಕಳಿಗೆ ಕಲಿಸಬೇಕು ಅಂತ ಹಾಕಿದ್ದಾರೆ. ಇದರಲ್ಲಿ ಕುವೆಂಪು, ನಾರಾಯಣಗುರು ಅವಮಾನ ಮಾಡಿದ್ದಾರೆ ಎನ್ನೋದು ಅಲ್ಲ. ಹೆಡ್ಗೆವಾರ್ ಮೂಲಕ ಆರ್ಎಸ್ಎಸ್ ಸೇರಿಸಿದ್ದಾರೆ ಕೋಮುವಾದ ಸೇರಿಸಿದ್ದಾರೆ ಎಂಬುವುದು ವಿಚಿತ್ರ ನಾಸ್ತಿಕರ ವಾದ. ಇವರೆಲ್ಲರೂ ಮುಸ್ಲಿಂ, ಕ್ರಿಶ್ಚಿಯನ್ನರ ಏಜೆಂಟರು. ಇವರಿಗೆ ಒಳ್ಳೆಯವರ ವಿಚಾರಧಾರೆ ಬೇಕಿಲ್ಲ. ರಾಷ್ಟ್ರೀಯವಾದಕ್ಕೆ ದಕ್ಕೆ ಕೊಡುವಂತವರು‌. ಕೊಲೆಗಡುಕ ಔರಂಗಜೇಬನ ಇತಿಹಾಸ ಬೇಕು ಇವರಿಗೆ. ಮತಾಂಧ ಟಿಪ್ಪುನನ್ನ ಪಠ್ಯದಲ್ಲಿ ಹಾಕಿದವರು ಇವರು. ಸಮಿತಿ ಒಳ್ಳೇಯದನ್ನೇ ಮಾಡ್ತಿದೆ. ಸರಿಯಾದ್ದನ್ನೆ ಮಾಡ್ತಿದೆ. ಹಡ್ಗೆವಾರ್ ವಿಚಾರಧಾರೆ ಯಾಕೆ ಹಾಕಬಾರದು? ಒಬ್ಬ ಆದರ್ಶ ಪುರಷ ಹೇಗರಿಬೇಕು ಎನ್ನೋ‌ ಲೇಖನ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅದನ್ನ ಕೂಡಾ ವಿರೋಧ ಮಾಡ್ತಾರೆ. ಬ್ರಿಟಿಷ್ ರ ಜೊತೆ ಹೆಡ್ಗೆವಾರ್ ಹೋಗಿಲ್ಲ. ಆ ರೀತಿ ಹೇಳೋರು ಸರಿಯಾಗಿ ಇತಿಹಾಸ ಓದಿಲ್ಲ. ಕಾಂಗ್ರೆಸ್ ಸ್ಥಾಪನೆ ಮಾಡಿದ್ಯಾರು. ಓರ್ವ ಬ್ರಟಿಷ್ ಕ್ರಿಶ್ಚಿಯನ್ ಸ್ಥಾಪನೆ ಮಾಡಿದ್ದು. ಮೊದಲು ನಿಮ್ಮ ಹುಟ್ಟಿಸಿದವರ್ಯಾರು ಎನ್ನೊದನ್ನ ತಿಳಿದುಕೊಳ್ಳಿ. ನಿಮಗೆ ಈ ದೇಶದ ಬಗ್ಗೆ ಮಾತನಾಡೋ ಹಕ್ಕೆ ಇಲ್ಲ. ಈ ದೇಶವನ್ನು ತುಂಡು ಮಾಡಿದವರು ಕಾಂಗ್ರೆಸ್ ನವರು. ಹೆಡ್ಗೆವಾರ್ ಬ್ರಿಟಿಷ್ ರ ಪರವಾಗಿ ಇದ್ರು ಎನ್ನೋ ಹಸಿ ಸುಳ್ಳನ್ನ ಹೇಳ್ತಿದ್ದಿರಿ. ಮಕ್ಕಳ ಶಿಕ್ಷಣ ದೃಷ್ಠಿಯಿಂದ ಸಿದ್ದರಾಮಯ್ಯ, ಡಿಕೆಶಿ ಗಂಭೀರವಾಗಿ ಯೋಚಿಸಿ.

ಸುಲಿಬೆಲೆ ಲೇಖನ ಯಾಕೆ ಪಠ್ಯದಲ್ಲಿ ಸೇರಿಸಬಾರದು? ಅವರೇನು ರಾಷ್ಟ್ರದ್ರೋಹಿಯೇ ಭಯೋತ್ಪಾದಕರಾ? ಅವರೊಬ್ಬ ಒಳ್ಳೆಯ ರಾಷ್ಟ್ರಚಿಂತಕರಿದ್ದಾರೆ. ಅವರ ವಿಚಾಧಾರೆ ತಪ್ಪೇನಿದೆ. ಆ ವ್ಯಕ್ತಿಯನ್ನ ಪಕ್ಕಕ್ಕೀಡಿ, ಅವರು ಹಾಕಿರೋ ವಿಚಾರಧಾರೆಯಲ್ಲಿ ತಪ್ಪಿದ್ರೆ ಹೇಳಿ. ಕೇಸರಿಕರಣ ಕೇಸರಿಕರಣ ಅಂತೀರಿ ಏನರ್ಥ. ಅದು ರಾಷ್ಟ್ರೀಕರಣ, ಕೇಸರಿಕರಣ ಅನ್ನೋದು ಆರ್ಎಸ್ಎಸ್ ಕರಣ ಅಲ್ಲ. ಇದನ್ನ ಕಾಂಗ್ರೆಸ್ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ನೈಜ ಇತಿಹಾಸ ಕಲಿಸಿಕೊಡೊದನ್ನ ಯೋಚಿಸಬೇಕು. ಅವರು ದೇಶಭಕ್ತರು ಇವರು ದೇಶಭಕ್ತರು ಎನ್ನೋದಕ್ಕಿಂತ ಒಳ್ಳೆಯ ಶಿಕ್ಷಣದ ಚಿಂತನೆಯಾಗಬೇಕು ಎಂದರು. ಇದನ್ನೂ ಓದಿ: ಶೂಟಿಂಗ್ ವೇಳೆ ನಡೆಯಿತು ಭೀಕರ ಅವಘಡ; ಸಮಂತಾ-ವಿಜಯ್​ ದೇವರಕೊಂಡಗೆ ಗಾಯ

ಪಠ್ಯದಲ್ಲಿ ಆರ್ಎಸ್ಎಸ್ ತತ್ವ ಸೇರಿಸೋದು ಸರಿಯಲ್ಲ ಇನ್ನು ಮತ್ತೊಂದೆಡೆ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಸೇರಿಸುವ ವಿಚಾರದ ಕುರಿತು ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾರಾಯಣಗುರು, ಬಸವಣ್ಣನವರ ತತ್ವಗಳನ್ನ ಮುಂದಿನ ಪೀಳಿಗೆಗೆ ತಿಳಿಸಬೇಕು. ಪಠ್ಯದಲ್ಲಿ ಆರ್ಎಸ್ಎಸ್ ತತ್ವ ಸೇರಿಸೋದು ಸರಿಯಲ್ಲ. ನಾರಾಯಣಗುರು, ಪೆರಿಯಾರ್, ಭಗತ್ ಸಿಂಗ್ ಪಠ್ಯ ಇರಲಿ ಅವರ ತತ್ವಗಳನ್ನ ಮಕ್ಕಳಿಗೆ ತಿಳಿಸಲಿ, ಈ ರೀತಿ ಆರ್ಎಸ್ಎಸ್ ಸಿದ್ಧಾಂತ ಹೇರೋದು ಸರಿಯಲ್ಲ ಎಂದಿದ್ದಾರೆ.

Published On - 10:38 pm, Mon, 23 May 22

ತಾಜಾ ಸುದ್ದಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ