ಬೆಂಗಳೂರು, ಆ.03: ಕನ್ನಡಿಗರ ವಿರೋಧದ ನಡುವೆಯು ಬೊಮ್ಮಸಂದ್ರ ಟು ತಮಿಳುನಾಡಿದ ಹೊಸೂರು ನಡುವೆ ಮೆಟ್ರೋ(Bommasandra to Hosur Metro) ಸಂಪರ್ಕ ಕಲ್ಪಿಸುವ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಮೆಟ್ರೋ ಅಧ್ಯಯನಕ್ಕೆ ಚೆನ್ನೈ ಮೆಟ್ರೋ ನಿಗಮದಿಂದ(Chennai Metro Corporation) ಟೆಂಡರ್ ಕರೆಯಲಾಗಿದೆ. ಕನ್ನಡ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಬೊಮ್ಮಸಂದ್ರ ಟು ಹೊಸೂರು ಮಾರ್ಗದ ಮೆಟ್ರೋಗೆ ಮತ್ತೆ ಜೀವ ಸಿಕ್ಕಿದೆ. ಆಗಸ್ಟ್ 1 ರಿಂದ 31 ರವರೆಗೆ ಟೆಂಡರ್ಗೆ ಅರ್ಜಿ ಸಲ್ಲಿಸಲು ಚೆನ್ನೈ ಮೆಟ್ರೋ ನಿಗಮ ಅವಕಾಶ ನೀಡಿದೆ. ಸೆ.1 ರಂದು ಟೆಂಡರ್ ತೆರಯಲು ಚಿಂತನೆ ನಡೆಸಿದೆ.
ಹೊಸೂರು – ಬೊಮ್ಮಸಂದ್ರ ನಡುವಿನ ಒಟ್ಟು 20.5 ಕಿಮೀ ಮಾರ್ಗದಲ್ಲಿ 11.7 ಕಿಮೀ ಕರ್ನಾಟಕದಲ್ಲಿದೆ. ಉಳಿದ 8.8 ಕಿಮೀ ತಮಿಳುನಾಡಿನಲ್ಲಿದೆ. 2021ರಲ್ಲಿ ನಡೆದ ಎಲ್ಲಾ ಮೆಟ್ರೋ ರೈಲು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ, ಬೊಮ್ಮಸಂದ್ರ – ಹೊಸೂರು ಮೆಟ್ರೋ ಸಂಪರ್ಕದ ಸಾಧ್ಯತೆ ಕುರಿತು ವರದಿ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಒತ್ತಾಯಿಸಿದ್ದರು. ಕರ್ನಾಟಕದಲ್ಲಿ ಬರುವ ಮಾರ್ಗವನ್ನು ಬಿಎಂಆರ್‌ಸಿಎಲ್ ಮತ್ತು ತಮಿಳುನಾಡಿನ ಮಾರ್ಗವನ್ನು ಸಿಎಂಆರ್‌ಎಲ್ ನಿರ್ಮಿಸುವ ಸಾಧ್ಯತೆ ಇದೆ.
ಇನ್ನು ತಮಿಳುನಾಡು ಸರ್ಕಾರ ಕಾರ್ಯ ಸಾಧ್ಯತ ಅಧ್ಯಯನದ ಪೂರ್ಣ ವೆಚ್ಚ ವಹಿಸಲಿದೆ. ಮುಂದೆ ಪ್ರಸ್ತಾವಿಕ ಯೋಜನೆಗೆ ವಸತಿ ಮತ್ತು ನಗರ ಸಚಿವಾಲಯದ ಸಹಯೋಗದಲ್ಲಿ ಎರಡು ರಾಜ್ಯಗಳು ತಮ್ಮ ವ್ಯಾಪ್ತಿಯ ಕಾಮಗಾರಿಗೆ ವೆಚ್ಚದ ಹೊಣೆ ಹೊರುವ ಸಾಧ್ಯತೆ ಇದೆ. ಸದ್ಯ ಈಗಾಗಲೇ ತನ್ನ ವ್ಯಾಪ್ತಿಯ ಕಾಮಗಾರಿ ಸಂಪೂರ್ಣ ವೆಚ್ಚ ಭರಿಸುವ ಬಗ್ಗೆ ತಮಿಳುನಾಡು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ: Siddaramaiah Meets PM Modi: ಮೋದಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಸಿದ್ದರಾಮಯ್ಯ, ಇಲ್ಲಿವೆ ಫೋಟೋಸ್
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:37 pm, Thu, 3 August 23