ಬೆಂಗಳೂರಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಜ್ವರ, ಕೆಮ್ಮು, ನೆಗಡಿ ಸಮಸ್ಯೆ; ಮಕ್ಕಳ ತಜ್ಞರ ಜೊತೆ ಬಿಬಿಎಂಪಿ ಸಭೆ

| Updated By: ಆಯೇಷಾ ಬಾನು

Updated on: Sep 14, 2021 | 8:13 AM

ಸದ್ಯ ಜ್ವರ, ಕೆಮ್ಮು, ನೆಗಡಿ ಇರುವ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಿದರೆ ಕೊರೊನಾ ಲಕ್ಷಣಗಳಿದ್ದರೂ ಮಕ್ಕಳಿಗೆ ಕೊವಿಡ್ ನೆಗೆಟಿವ್ ವರದಿ ಬರುತ್ತಿದೆ. ಕೆಲವು ಮಕ್ಕಳ ರಕ್ತ ಪರೀಕ್ಷೆ ನಡೆಸಿದಾಗ ಡೆಂಘೀ ಪತ್ತೆಯಾಗಿದೆ. ಉಳಿದ ಮಕ್ಕಳಿಗೆ ಡೆಂಘೀಯೂ ಇಲ್ಲ, ಕೊರೊನಾನೂ ಇಲ್ಲ.

ಬೆಂಗಳೂರಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಜ್ವರ, ಕೆಮ್ಮು, ನೆಗಡಿ ಸಮಸ್ಯೆ; ಮಕ್ಕಳ ತಜ್ಞರ ಜೊತೆ ಬಿಬಿಎಂಪಿ ಸಭೆ
ಪ್ರಾತಿನಿಧಿಕ ಚಿತ್ರ
Follow us on

ಮಹಾಮಾರಿ ಕೊರೊನಾ ಮೂರನೇ ಅಲೆ ಭೀತಿ ನಡುವೆ ಹೇಗೋ ಶಾಲೆಗಳು ಆರಂಭವಾಗಿವೆ. ಮಕ್ಕಳೆಲ್ಲ ಮತ್ತೆ ಹೊರಗಡೆ ಕಾಲಿಡ್ತಿವೆ. ಆದ್ರೆ ಈಗ ಬೆಂಗಳೂರಿನ ಬಹುತೇಕ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಸಮಸ್ಯೆ ಕಂಡು ಬರುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.

ಸದ್ಯ ಜ್ವರ, ಕೆಮ್ಮು, ನೆಗಡಿ ಇರುವ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಿದರೆ ಕೊರೊನಾ ಲಕ್ಷಣಗಳಿದ್ದರೂ ಮಕ್ಕಳಿಗೆ ಕೊವಿಡ್ ನೆಗೆಟಿವ್ ವರದಿ ಬರುತ್ತಿದೆ. ಕೆಲವು ಮಕ್ಕಳ ರಕ್ತ ಪರೀಕ್ಷೆ ನಡೆಸಿದಾಗ ಡೆಂಘೀ ಪತ್ತೆಯಾಗಿದೆ. ಉಳಿದ ಮಕ್ಕಳಿಗೆ ಡೆಂಘೀಯೂ ಇಲ್ಲ, ಕೊರೊನಾನೂ ಇಲ್ಲ. ಹೀಗಾಗಿ ಬೇರೆ ಮಾದರಿಯ ಕೊವಿಡ್ ಪರೀಕ್ಷೆ ಬಗ್ಗೆ ಚರ್ಚೆ ನಡೆಸಲು ಬಿಬಿಎಂಪಿ ಬುಧವಾರ ಮಕ್ಕಳ ತಜ್ಞರ ಸಮಿತಿ ಸಭೆ ಕರೆದಿದೆ. ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ತಜ್ಞರ ಸಮಿತಿ ಸಭೆ ಕರೆಯಲಾಗಿದೆ.

ಹತ್ತು ದಿನದಲ್ಲಿ ನಗರದ 412 ಮಕ್ಕಳಿಗೆ ಕೊರೊನಾ
ಇನ್ನು ಬೆಂಗಳೂರಿನಲ್ಲಿ ಕಳೆದ ಹತೇ ಹತ್ತು ದಿನದಲ್ಲಿ 412 ಮಕ್ಕಳಲ್ಲಿ ಕೊರೊನಾ ಸೋಂಕು ಧೃಡ ಪಟ್ಟಿದೆ. ಹತ್ತಾರು ಸರ್ಕಸ್ ಮಾಡಿ ಸರ್ಕಾರ ಶಾಲೆಗಳನ್ನ ಓಪನ್ ಮಾಡಿದೆ. 6ನೇ ತರಗತಿಯಿಂದ ಎಲ್ಲಾ ಕ್ಲಾಸ್ಗಳು ಪುನಾರಂಭಗೊಂಡಿವೆ. ಆದರೆ ಈಗ ಸದ್ದಿಲ್ಲದೆ ಕೊರೊನಾ ಕೂಡ ಮಕ್ಕಳನ್ನ ಹೊಕ್ಕುತ್ತಿದೆ. 19 ವರ್ಷದ ಒಳಗಿನ 412ಮಕ್ಕಳ ಮೇಲೆ ಕೊರೊನಾ ದಾಳಿ ಮಾಡಿದೆ. ಕಳೆದ ಹತ್ತು ದಿನದಲ್ಲಿ, 9 ವರ್ಷದೊಳಗಿನ 149 ಮಕ್ಕಳಿಗೆ ಸೋಂಕು ಹೊಕ್ಕಿದೆ. ಇಷ್ಟೇ ಸಮಯದಲ್ಲಿ 10ರಿಂದ 19 ವರ್ಷದೊಳಗಿನ 263 ಮಕ್ಕಳಲ್ಲೂ ಕೊರೊನಾ ಕನ್ಫರ್ಮ್ ಆಗಿದೆ. ಹೀಗಾಗಿ, ಅಲರ್ಟ್ ಆಗಿರುವ ಬಿಬಿಎಂಪಿ ತಜ್ಞರ ಸಭೆ ಕರೆದಿದೆ.

ಇದನ್ನೂ ಓದಿ: ಇಂಜಿನಿಯರಿಂಗ್ ಹುದ್ದೆ ತೊರೆದು ಕೃಷಿಯತ್ತ ಮುಖ ಮಾಡಿದ ಯುವಕ; ಜರ್ಬೆರಾ ಹೂ ಬೆಳೆದು ತಿಂಗಳಿಗೆ ಲಕ್ಷ ರೂ. ಸಂಪಾದನೆ